ಬೆಂಗಳೂರು:ಯಾಸ್ ಚಂಡಮಾರುತ ಆರ್ಭಟ ಹಿನ್ನೆಲೆ ಬೆಂಗಳೂರಿನಿಂದ ಹೊರಡುವ ಹಲವು ರೈಲುಗಳು ರದ್ದಾಗಿದೆ. ಈ ಹಿಂದೆ ತೌಕ್ತೆ ಚಂಡಮಾರುತದಿಂದ ಹಲವು ಭಾಗದ ರೈಲು ರದ್ದಾಗಿದ್ದವು, ಇದೀಗ ಯಾಸ್ (cyclone YAAS) ಚಂಡಮಾರುತದಿಂದಾಗಿ ರದ್ದಾಗಿದೆ.
ಯಾಸ್ ಚಂಡಮಾರುತ; ಬೆಂಗಳೂರಿನಿಂದ ಹೊರಡುವ ರೈಲುಗಳು ರದ್ದು - ತೌಕ್ತೆ ಚಂಡಮಾರುತ
ಯಾಸ್ ಚಂಡಮಾರುತ ಆರ್ಭಟ ಹಿನ್ನೆಲೆ ಬೆಂಗಳೂರಿನಿಂದ ಹೊರಡುವ ಹಲವು ರೈಲುಗಳು ರದ್ದಾಗಿದೆ. ಈ ಹಿಂದೆ ತೌಕ್ತೆ ಚಂಡಮಾರುತದಿಂದ ಹಲವು ಭಾಗದ ರೈಲು ರದ್ದಾಗಿದ್ದವು, ಇದೀಗ ಯಾಸ್ (cyclone YAAS) ಚಂಡಮಾರುತದಿಂದಾಗಿ ರದ್ದಾಗಿದೆ.
ಎಲ್ಲಿಂದ-ಎಲ್ಲಿಗೆ ರದ್ದು..?
1. ರೈಲು ಸಂಖ್ಯೆ 02245 ಹೌರಾ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ಅನ್ನು 25.05.2021 ಮತ್ತು 26.05.2021 ರಂದು ಹೌರಾದಿಂದ ರದ್ದುಗೊಳಿಸಲಾಗುತ್ತಿದೆ.
2. ರೈಲು ಸಂಖ್ಯೆ 02246 ಯಶವಂತಪುರ - ಹೌರಾ ಸ್ಪೆಷಲ್ ಎಕ್ಸ್ ಪ್ರೆಸ್ ಅನ್ನು 24.05.2021 ಮತ್ತು 25.05.2021 ರಂದು ಯಶವಂತಪುರ ದಿಂದ ರದ್ದಾಗಿದೆ.
3. ರೈಲು ಸಂಖ್ಯೆ 02510 ಗುವಾಹಟಿ - ಬೆಂಗಳೂರು ಕ್ಯಾಂಟ್ ಸ್ಪೆಷಲ್ ಎಕ್ಸ್‌ಪ್ರೆಸ್ ಅನ್ನು 24.05.2021 ಮತ್ತು 25.05.2021 ರಂದು ಗುವಾಹಟಿಯಿಂದ ರದ್ದಾಗಿದೆ.
4. ರೈಲು ಸಂಖ್ಯೆ 02873 ಹೌರಾ - ಯಶ್ವಂತಪುರ ಸ್ಪೆಷಲ್ ಎಕ್ಸ್‌ಪ್ರೆಸ್ ಅನ್ನು ಹೌರಾದಿಂದ 24.05.2021, 25.05.2021 ಮತ್ತು 26.05.2021 ರಂದು ರದ್ದುಗೊಳಿಸಲಾಗಿದೆ.
5. ರೈಲು ಸಂಖ್ಯೆ 02874 ಯಶವಂತಪುರ - ಹೌರಾ ಸ್ಪೆಷಲ್ ಎಕ್ಸ್‌ಪ್ರೆಸ್ ಅನ್ನು 24.05.2021, 25.05.2021 ಮತ್ತು 26.05.2021 ರಂದು ಯಶವಂತಪುರ ದಿಂದ ರದ್ದುಗೊಳಿಸಲಾತ್ತಿದೆ.
6. ರೈಲು ಸಂಖ್ಯೆ 05228 ಮುಜಾಫರಪುರ - ಯಶವಂತಪುರ ಸ್ಪೆಷಲ್ ಎಕ್ಸ್ ಪ್ರೆಸ್ ಅನ್ನು 24.05.2021 ರಂದು ಮುಜಾಫರಪುರದಿಂದ ರದ್ದುಗೊಳಿಸಲಾಗುವುದು.
7. ರೈಲು ಸಂಖ್ಯೆ 08463 ಭುವನೇಶ್ವರ - ಕೆ.ಎಸ್.ಆರ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ಅನ್ನು ಭುವನೇಶ್ವರದಿಂದ 26.05.2021 ಮತ್ತು 27.05.2021 ರಂದು ರದ್ದುಗೊಳಿಸಲಾಗುತ್ತಿದೆ.
8. ರೈಲು ಸಂಖ್ಯೆ 08464 ಕೆಎಸ್ಆರ್ ಬೆಂಗಳೂರು - ಭುವನೇಶ್ವರ ವಿಶೇಷ ಎಕ್ಸ್‌ಪ್ರೆಸ್ ಅನ್ನು ಕೆಎಸ್ಆರ್ ಬೆಂಗಳೂರಿನಿಂದ 25.05.2021 ಮತ್ತು 26.05.2021 ರಂದು ರದ್ದುಗೊಳಿಸಲಾಗುತ್ತಿದೆ.
9. ರೈಲು ಸಂಖ್ಯೆ 02249 ಕೆಎಸ್ಆರ್ ಬೆಂಗಳೂರು - ಹೊಸ ಟಿನ್ಸುಕಿಯಾ ಸ್ಪೆಷಲ್ ಎಕ್ಸ್ ಪ್ರೆಸ್ ಅನ್ನು ಕೆಎಸ್ಆರ್ ಬೆಂಗಳೂರಿನಿಂದ 25.05.2021 ರಂದು ರದ್ದುಗೊಳಿಸಲಾಗುತ್ತಿದೆ.
10. ರೈಲು ಸಂಖ್ಯೆ 02254 ಭಾಗಲ್ಪುರ - ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ಅನ್ನು ಭಾಗಲ್ಪುರದಿಂದ 26.05.2021 ರಂದು ರದ್ದುಗೊಳಿಸಲಾಗುತ್ತಿದೆ.
11. ರೈಲು ಸಂಖ್ಯೆ 02552 ಕಾಮಾಖ್ಯ - ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ 26.05.2021 ರಂದು ಕಾಮಾಖ್ಯದಿಂದ ರದ್ದುಗೊಳ್ಳಲಿದೆ.
12. ರೈಲು ಸಂಖ್ಯೆ 02864 ಯಶವಂತಪುರ - ಹೌರಾ ಸ್ಪೆಷಲ್ ಎಕ್ಸ್ ಪ್ರೆಸ್ ಅನ್ನು 26.05.2021 ರಂದು ಯಶವಂತಪುರ ದಿಂದ ರದ್ದುಗೊಳಿಸಲಾಗುತ್ತಿದೆ.