ಕರ್ನಾಟಕ

karnataka

ETV Bharat / city

ನಾಳೆ ವರ್ಷದ ಕಾರ್ಯನಿರ್ವಹಣಾ ವರದಿ ಜನರ ಮುಂದಿಡಲಿರುವ ಸಿಎಂ.. - ಬಿಜೆಪಿ ಸರ್ಕಾರದ ಕಾರ್ಯನಿರ್ವಹಣಾ ವರದಿ

ನಾಳೆ ಬೆಳಗ್ಗೆ 11ಗಂಟೆಗೆ ವಿಧಾನಸೌಧದಲ್ಲಿ ನಡೆಯಲಿರುವ ವರ್ಚುವಲ್ ಕಾರ್ಯಕ್ರಮದ ಮೂಲಕ ನಾಡಿನ ಜನತೆಗೆ ವರ್ಷದ ಸಾಧನೆಯನ್ನು ಸಿಎಂ ಎಳೆ ಎಳೆಯಾಗಿ ಬಿಡಿಸಿಡಲಿದ್ದಾರೆ. ಜೊತೆಗೆ ಸರ್ಕಾರದ ಸಾಧನೆಯ ಸಾಧನಾ ಹೊತ್ತಿಗೆ "ಸವಾಲುಗಳ 1ವರ್ಷ ಪರಿಹಾರದ ಸ್ಪರ್ಷ"ವನ್ನು ಬಿಡುಗಡೆ ಮಾಡಲಿದ್ದಾರೆ..

yadiyurappa-will-present-one-year-performance-report-tomorrow
ಮುಖ್ಯಮಂತ್ರಿ ಬಿಎಸ್​ ಡಿಯೂರಪ್ಪ

By

Published : Jul 26, 2020, 3:15 PM IST

ಬೆಂಗಳೂರು :ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆ ಸರ್ಕಾರದ ಸಾಧನೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಜನರ ಮುಂದಿಡಲಿದ್ದಾರೆ.

ನಾಳೆ ವರ್ಷದ ಕಾರ್ಯನಿರ್ವಹಣಾ ವರದಿ ಜನರ ಮುಂದಿಡಲಿರುವ ಸಿಎಂ

ನಾಳೆ ಬೆಳಗ್ಗೆ 11ಗಂಟೆಗೆ ವಿಧಾನಸೌಧದಲ್ಲಿ ನಡೆಯಲಿರುವ ವರ್ಚುವಲ್ ಕಾರ್ಯಕ್ರಮದ ಮೂಲಕ ನಾಡಿನ ಜನತೆಗೆ ವರ್ಷದ ಸಾಧನೆಯನ್ನು ಸಿಎಂ ಎಳೆ ಎಳೆಯಾಗಿ ಬಿಡಿಸಿಡಲಿದ್ದಾರೆ. ಜೊತೆಗೆ ಸರ್ಕಾರದ ಸಾಧನೆಯ ಸಾಧನಾ ಹೊತ್ತಿಗೆ "ಸವಾಲುಗಳ 1ವರ್ಷ ಪರಿಹಾರದ ಸ್ಪರ್ಷ"ವನ್ನು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮವನ್ನು ಆನ್​​ಲೈನ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ.

ನಾಳೆ ವರ್ಷದ ಕಾರ್ಯನಿರ್ವಹಣಾ ವರದಿ ಜನರ ಮುಂದಿಡಲಿರುವ ಸಿಎಂ

ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಜುಲೈ 27ರಂದು ಬೆಳಗ್ಗೆ 11ಗಂಟೆಯಿಂದ ನಡೆಯುವ ಸರಳ ಆನ್‌ಲೈನ್ ಸಮಾರಂಭದ ಮೂಲಕ ಸರ್ಕಾರದ ಕಾರ್ಯನಿರ್ವಹಣಾ ವರದಿಯನ್ನು ರಾಜ್ಯದ ಜನತೆಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details