ಬೆಂಗಳೂರು: ಜೀವನವಿಡೀ ಕೇಳಿಸಿಕೊಳ್ಳಲು ಜಾಗ್ರೆತೆಯಿಂದ ಆಲಿಸಿರಿ ಎಂಬ ಘೋಷಣೆಯೊಂದಿಗೆ ಮಾರ್ಚ್ 3ನ್ನು ವಿಶ್ವದಾದ್ಯಂತ ಶ್ರವಣ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ತಡೆಗಟ್ಟಬಹುದಾದ ಕಿವುಡತನದ ಬಗ್ಗೆ ಅರಿವನ್ನುಂಟು ಮಾಡುವುದು ಈ ದಿನದ ಉದ್ದೇಶವಾಗಿದೆ. ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ 0-6 ವರ್ಷದ ಮಕ್ಕಳು ಶ್ರವಣ ದೋಷ ಹೊಂದಿರುವ ಬಗ್ಗೆ ಅಂದಾಜಿಸಲಾಗಿದೆ. ಶ್ರವಣ ಸಮಸ್ಯೆ ಬಗ್ಗೆ ಅರಿವನ್ನು ಉಂಟು ಮಾಡಿ ಶ್ರೀಘ್ರವಾಗಿ ಸಮಸ್ಯೆ ಪತ್ತೆ ಹಚ್ಚಿದಲ್ಲಿ ಧೀರ್ಘಕಾಲದ ಕಿವುಡತನವನ್ನು ತಡೆಗಟ್ಟಬಹುದಾಗಿದೆ.
ಇನ್ನು ಸರ್ಕಾರದ ಕಾರ್ಯಕ್ರದಲ್ಲಿ 30 ಜಿಲ್ಲೆಗಳಲ್ಲಿ ಆಡಿಯೋಲಾಜಿ ತಂಡವು ಕಾರ್ಯ ನಿರ್ವಹಿಸುತ್ತಿದೆ. 2021-22ನೇ ಸಾಲಿನಲ್ಲಿ (ಜನವರಿ-2022ರವರೆಗೆ) 1,269 ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದೆ. ಒಟ್ಟು 27,603 ಜನರಲ್ಲಿ ಶ್ರವಣ ದೋಷ ಇರುವುದನ್ನು ಗುರುತಿಸಲಾಗಿದೆ ಹಾಗೂ 8,126 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಇದರಲ್ಲಿ 862 ಮಂದಿಗೆ ಸರ್ವ ಶಿಕ್ಷಣ ಅಭಿಯಾನ, ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ವತಿಯಿಂದ ಶ್ರವಣ ಯಂತ್ರಗಳನ್ನು ವಿತರಿಸಲಾಗಿದೆ.