ಆನೇಕಲ್: ವಿಶ್ವ ಆನೆ ದಿನಾಚರಣೆ ಅಂಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆನೆಗಳೊಂದಿಗೆ ಒಡನಾಟವಿಟ್ಟುಕೊಂಡಿರುವ ಮಾವುತರ ಮಕ್ಕಳಿಂದ ಆನೆ ಮರಿಗೆ ಹೆಸರನ್ನಿಡುವ ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು.
ವಿಶ್ವ ಆನೆ ದಿನಾಚರಣೆ: ಮಾವುತರ ಮಕ್ಕಳಿಂದ ಆನೆ ಮರಿಗೆ ನಾಮಕರಣ - World Elephant Day
ವಿಶ್ವ ಆನೆ ದಿನಾಚರಣೆ ಅಂಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆನೆಗಳೊಂದಿಗೆ ಒಡನಾಟವಿಟ್ಟುಕೊಂಡಿರುವ ಮಾವುತರ ಮಕ್ಕಳಿಂದ ಆನೆ ಮರಿಗೆ ಹೆಸರನ್ನಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
![ವಿಶ್ವ ಆನೆ ದಿನಾಚರಣೆ: ಮಾವುತರ ಮಕ್ಕಳಿಂದ ಆನೆ ಮರಿಗೆ ನಾಮಕರಣ](https://etvbharatimages.akamaized.net/etvbharat/prod-images/768-512-4109893-thumbnail-3x2-lek.jpg)
ಇನ್ನು ಜೇಡಿಮಣ್ಣಿನಿಂದ ಪ್ರಾಣಿಗಳ ಪ್ರತಿಕೃತಿಗಳನ್ನು ಮಾಡಿ ಪ್ರದರ್ಶನಕ್ಕಿಡಲಾಯಿತು. ಅಲ್ಲದೇ ಬಿದಿರಿನ ಬುಟ್ಟಿಗಳನ್ನು ತಯಾರಿಸಿ, ಮಣ್ಣಿನಿಂದ ಮಾಡಿದ ಆನೆ, ಮೊಸಳೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಸಾರ್ವಜನಿಕರ ಪ್ರದರ್ಶನ ಇಡಲಾಯಿತು. ಜೊತೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಎಂಬ ಸಂದೇಶವನ್ನು ಸಹ ಸಾರಲಾಯಿತು. ಈ ವೇಳೆ ಉದ್ಯಾನವನಕ್ಕೆ ಭೇಟಿ ನೀಡಿದ್ದ ಪ್ರಾಣಿಪ್ರಿಯರಿಗೆ ಆನೆಗಳ ಕುರಿತು ಸಿಬ್ಬಂದಿ ಅರಿವು ಮೂಡಿಸಿದರು.
ಈ ವೇಳೆ ಮಾತನಾಡಿದ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ನ ಇಡಿ ವನ ಶ್ರೀ, ಮಾವುತರ ಮಕ್ಕಳಿಂದ ಆನೆ ಮರಿಗೆ ಶ್ರುತಿ ಎಂಬ ಹೆಸರನ್ನು ಇಡಲಾಗಿದೆ. ಈ ವೇಳೆ ಗಣೇಶ ಚತುರ್ಥಿ ಆಚರಣೆಯಲ್ಲಿ ಯಾರು ಹೆಚ್ಚು ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿಕೊಂಡರು.