ಬೆಂಗಳೂರು:ಬಿಇಎಂಎಲ್ ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ನಡೆಯನ್ನ ವಿರೋಧಿಸಿ, ನ್ಯೂ ತಿಪ್ಪಸಂದ್ರದಲ್ಲಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಕಾರ್ಖಾನೆ ಎದುರು ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಬಿಇಎಂಎಲ್ ಖಾಸಗೀಕರಣಕ್ಕೆ ವ್ಯಾಪಕ ವಿರೋಧ: ಬೀದಿಗಳಿದು ಪ್ರತಿಭಟನೆ ಮಾಡಿದ ಕಾರ್ಮಿಕರು
ಬಿಇಎಂಎಲ್ ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ನಡೆಯನ್ನ ವಿರೋಧಿಸಿ,ನ್ಯೂ ತಿಪ್ಪಸಂದ್ರದಲ್ಲಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಕಾರ್ಖಾನೆ ಎದುರು ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಇಎಂಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಮೆಟ್ರೋ ಬೋಗಿಗಳನ್ನು ತಯಾರಿಸುವ ಕೇಂದ್ರ ಸರ್ಕಾರದ ಏಕೈಕ ಸಾರ್ವಜನಿಕ ಉದ್ಯಮ ಇದಾಗಿದ್ದು, ಇದನ್ನ ಕೇಂದ್ರ ಸರ್ಕಾರ ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವುದು ಸರಿಯಲ್ಲ. ಈಗಾಗಲೇ ಬಿಇಎಂಎಲ್ ಕಂಪನಿ ಖಾಸಗಿಕರಣಕ್ಕೆ ಕ್ಯಾಬಿನೆಟ್ನಲ್ಲಿ ಅನುಮತಿ ಕೂಡ ಸಿಕ್ಕಿದೆ. ಬಿಇಎಂಎಲ್ ಬೆಂಗಳೂರು ಕಂಪನಿಯಲ್ಲಿ 1800 ನೌಕರರಿದ್ದಾರೆ. ರಾಜ್ಯದಲ್ಲಿರುವ ಒಟ್ಟು ಬಿಇಎಂಎಲ್ ಕಂಪನಿಗಳಿಂದ ಆರು ಸಾವಿರ ನೌಕರರಿದ್ದು, ಅವರ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದರು.
ಮೈನಿಂಗ್ ಕನ್ಸ್ಟ್ರಕ್ಷನ್,ಏರೋಸ್ಪೇಸ್,ಮೆಟ್ರೋ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿದ್ದೇವೆ. ಬೆಂಗಳೂರು,ಕೆಜಿಎಫ್ ಹಾಗೂ ಮೈಸೂರಿನಲ್ಲಿರುವ ಬೆಮಲ್ ಕಂಪನಿಗಳಿಂದ 3500 ಕೋಟಿ ವಾರ್ಷಿಕ ಟರ್ನೋವರ್ ಹೊಂದಿರೋ ಬಿಇಎಂಎಲ್,ಲಾಭದಲ್ಲಿದ್ರೂ ಕಂಪನಿ ಮಾರಾಟ ಮಾಡ್ತಿರೋ ಕೇಂದ್ರದ ನೀತಿ ಸರಿಯಿಲ್ಲ. ಹೀಗಾಗಿ ಶನಿವಾರ ಟೌನ್ಹಾಲ್ ಬಳಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು,ನವೆಂಬರ್ 15ರವರೆಗೆ ಟೌನ್ಹಾಲ್ನಿಂದ ಪ್ರೀಡಂ ಪಾರ್ಕ್ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಮುಂದುವರೆಯಲಿದೆ ಎಂದರು.