ಬೆಂಗಳೂರು: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದ ಮೇಲೆ ಬೆಟ್ಟಿಂಗ್ನಲ್ಲಿ ತೊಡಗಿದ್ದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗದ ವಿಶೇಷ ವಿಚಾರಣಾ ದಳ ಬಂಧಿಸಿದೆ. ಬಂಧಿತನನ್ನು ಸಂಪತ್ ಎಂದು ಗುರುತಿಸಲಾಗಿದೆ.
ಆರೋಪಿ ದ.ಆಫ್ರಿಕಾ-ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸಿದ್ದಾನೆ. ಪಂದ್ಯದ ಫಲಿತಾಂಶದ ಬಳಿಕ ಗೆದ್ದವರಿಗೆ ಹಣ ನೀಡಲು ಮತ್ತು ಸೋತವರಿಂದ ಹಣ ಪಡೆದುಕೊಳ್ಳಲು ವಿದ್ಯಾರಣ್ಯಪುರ ಪೊಲೀಸ್ ಸ್ಟೇಷನ್ ರಸ್ತೆಯ ಕಾಳಿಕಾ ಪರಮೇಶ್ವರಿ ದೇವಸ್ಥಾನದ ಬಳಿ ಕಾಯುತ್ತಿದ್ದಾಗ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.