ಬೆಂಗಳೂರು :ಹೊಸ ವರ್ಷಾಚರಣೆ ಹಿನ್ನೆಲೆ ಜನಸಂದಣಿ ಪ್ರದೇಶಗಳಲ್ಲಿ ನಗರ ಪೊಲೀಸರು 'ಮಹಿಳಾ ಸುರಕ್ಷತಾ ತಾಣ'ಗಳನ್ನು ನಿರ್ಮಿಸಿದ್ದಾರೆ.
ನೈಟ್ ಕರ್ಫ್ಯೂ ಹೊರತಾಗಿಯೂ ಅಹಿತಕರ ಘಟನೆ ನಡೆಯಂತೆ ಪೊಲೀಸರು ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ. ಇಂದಿರಾನಗರ, ಎಂಜಿ ರಸ್ತೆ, ಪುಲಕೇಶಿನಗರ ಹಾಗೂ ಹಲಸೂರು ಸೇರಿದಂತೆ ಹಲವೆಡೆ ವುಮೆನ್ ಸೇಫ್ಟಿ ಐಲ್ಯಾಂಡ್ ನಿರ್ಮಾಣ ಮಾಡಲಾಗಿದೆ.
ಬೆಂಗಳೂರು ಪೊಲೀಸರಿಂದ ಮಹಿಳಾ ಸುರಕ್ಷತಾ ತಾಣ ನಿರ್ಮಾಣ ಸೇಫ್ಟಿ ಐಲ್ಯಾಂಡ್ನಲ್ಲಿ ತಲಾ ಇಬ್ಬರು ಮಹಿಳಾ ಹಾಗೂ ಪುರುಷ ಸಿಬ್ಬಂದಿ ನಿಯೋಜಿಸಲಾಗಿದೆ. ಮಹಿಳೆಯರಿಗೆ ಯಾವುದೇ ರೀತಿಯ ಅಭದ್ರತೆ ಎನಿಸಿದರೆ, ಸಹಾಯ ಅಗತ್ಯವಿದ್ದರೆ ತಮ್ಮನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಪೊಲೀಸರಿಂದ ಮಹಿಳಾ ಸುರಕ್ಷತಾ ತಾಣ ನಿರ್ಮಾಣ ಇದನ್ನೂ ಓದಿ:Happy New Year 2022 : ಭಾರತಕ್ಕಿಂತ ಮೊದಲು ಹೊಸ ವರ್ಷ ಬರಮಾಡಿಕೊಂಡ ದೇಶಗಳು!