ಕರ್ನಾಟಕ

karnataka

ETV Bharat / city

ವಾಹನ ಪ್ರವೇಶಕ್ಕೆ ಅಡ್ಡಿಪಡಿಸಿ ಗೂಂಡಾ ವರ್ತನೆ ತೋರಿದ ಮಹಿಳೆ: ಸಿಸಿಟಿವಿ ದೃಶ್ಯ - ಮಹಿಳೆ ಗೂಂಡಾ ವರ್ತನೆ ವಿಡಿಯೋ

ಮನೆಯ ಮುಂದಿನ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳ ಪ್ರವೇಶಕ್ಕೆ ಅಡ್ಡಿಪಡಿಸಿ ಮಹಿಳೆಯೊಬ್ಬಳು ಗುಂಡಾ ವರ್ತನೆ ತೋರಿದ ಘಟನೆ ಬೆಂಗಳೂರಿನಲ್ಲಿ ಜರುಗಿದೆ.

women-assault-on-neighbors-in-bangalore-cctv-video
ಗೂಂಡಾ ವರ್ತನೆ ತೋರಿದ ಮಹಿಳೆ

By

Published : Oct 10, 2020, 3:56 PM IST

ಬೆಂಗಳೂರು :ಸಿಲಿಕಾನ್ ಸಿಟಿಯಲ್ಲಿ ಮಹಿಳೆಯೋರ್ವಳು ಗುಂಡಾವರ್ತನೆ ತೋರಿದ ಘಟನೆ ಬೆಳಕಿಗೆ ಬಂದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಾಹನ ಪ್ರವೇಶಕ್ಕೆ ಅಡ್ಡಿಪಡಿಸಿ ಗೂಂಡಾ ವರ್ತನೆ ತೋರಿದ ಮಹಿಳೆ

ಥಣಿಸಂದ್ರದ ಸಾರಾಯಿಪಾಳ್ಯದ ಬಳಿ ಮೇರಿ‌ ಅನ್ನೋ ಮಹಿಳೆ ತನ್ನ ಮನೆಯ ಮುಂದಿನ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ನಿಲ್ಲಿಸಲು ಅವಕಾಶ ಮಾಡಿಕೊಡುತ್ತಿರಲಿಲ್ಲ. ಈ ಕುರಿತಾಗಿ ವಾಹನ ಮಾಲೀಕರು ಪ್ರಶ್ನಿಸಿದ್ರೆ ದ್ವಿಚಕ್ರ ವಾಹನಗಳಿಗೆ ಮಾತ್ರ ಪ್ರವೇಶ, ಬೇರೆ ವಾಹನಗಳು ರಸ್ತೆಯಲ್ಲಿ ಬಂದ್ರೆ ಕಾರಿನ ಗಾಜು ಪುಡಿ ಪುಡಿ ಮಾಡುವುದಾಗಿ ಅವಾಚ್ಯ ಪದಗಳಿಂದ ‌ನಿಂದನೆ ಮಾಡಿದ್ದಾಳೆ.

ಮಹಿಳೆಯ ವರ್ತನೆಗೆ ಬೇಸತ್ತ ಸ್ಥಳೀಯರು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿರುವ ಮಹಿಳೆಯ ವಿಚಾರಣೆ ನಡೆಸಿದ್ದಾರೆ.

ABOUT THE AUTHOR

...view details