ಕರ್ನಾಟಕ

karnataka

ETV Bharat / city

ಫೇಸ್​​ಬುಕ್​ನಲ್ಲಿ ಹೆಂಡ್ತಿ ಫೋಟೋ ಹಾಕಿ RIP ಎಂದ ಘಟನೆ.. ಪತ್ನಿ ನಾಪತ್ತೆ ಕೇಸ್​ಗೆ ಬಿಗ್​ ಟ್ವಿಸ್ಟ್​! - ದೊಡ್ಡಬಳ್ಳಾಪುರದಲ್ಲಿ ಮಹಿಳೆ ನಾಪತ್ತೆ

ಗಂಡ ಮುನಿಕೃಷ್ಣ ಅವರ ಕುಡಿತದ ಚಟ ಬಿಡಿಸಲು ಹೆಂಡತಿ ಲೀಲಾವತಿ ಪತಿಯ ಫೇಸ್​ಬುಕ್ ಅಕೌಂಟ್​ ನಲ್ಲಿ ತನ್ನ ಫೋಟೋ ಹಾಕಿ RIP ಎಂದು ಬರೆದು ನಾಪತ್ತೆ ನಾಟಕ ಆಡಿದ್ದಾರೆನ್ನುವ ಆರೋಪ ಕೇಳಿಬಂದಿದೆ.

dhoddaballapura woman missing case
ದೊಡ್ಡಬಳ್ಳಾಪುರ ಮಹಿಳೆ ನಾಪತ್ತೆ ಪ್ರಕರಣ

By

Published : Mar 9, 2022, 12:32 PM IST

Updated : Mar 9, 2022, 12:46 PM IST

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಗಂಡನ ಫೇಸ್​ಬುಕ್​ನಲ್ಲಿ ಹೆಂಡತಿ ಫೋಟೋ ಹಾಕಿ RIP ಎಂದು ಬರೆದಿದ್ದ ಕೇಸ್​ಗೆ ಈಗ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ನಾಪತ್ತೆಯಾಗಿರುವ ಗೃಹಿಣಿಯು ತನ್ನ ಗಂಡನ ಕುಡಿತದ ಚಟ ಬಿಡಿಸಲು ಆತನ ಫೇಸ್​ಬುಕ್ ಅಕೌಂಟ್​ ನಲ್ಲಿ ತನ್ನದೇ ಫೋಟೋ ಹಾಕಿ RIP ಎಂದು ಬರೆದು ಶ್ರದ್ಧಾಂಜಲಿ ಅರ್ಪಿಸಿದ್ದಾಳೆ. ಬಳಿಕ ನಾಪತ್ತೆಯಾಗಿದ್ದಾಳೆ ಎಂಬ ಅನುಮಾನ ವ್ಯಕ್ತವಾಗ್ತಿದೆ.

ಘಟನೆ ಹಿನ್ನೆಲೆ.. ದೊಡ್ಡಬಳ್ಳಾಪುರ ತಾಲೂಕಿನ ಉದನಹಳ್ಳಿಯ ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣನ ಹೆಂಡತಿ ಲೀಲಾವತಿ ಫೆಬ್ರವರಿ 24ರಿಂದ ನಾಪತ್ತೆಯಾಗಿದ್ದಾರೆ. ಆಕೆ ನಾಪತ್ತೆಯಾಗುವ ಮುನ್ನ ಗಂಡನ ಫೇಸ್​ ಬುಕ್ ಅಕೌಂಟ್​ನಲ್ಲಿ ತನ್ನದೇ ಫೋಟೋ ಹಾಕಿ RIP ಎಂದು ಬರೆದು ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಗಂಡ ಮುನಿಕೃಷ್ಣನನ್ನು ದೊಡ್ಡಬಳ್ಳಾಪುರ ಮಹಿಳಾ ಠಾಣೆಗೆ ಕರೆದು ವಿಚಾರಣೆ ಮಾಡಿ ಕಳುಹಿಸಲಾಗಿದೆ. ಲೀಲಾವತಿ ನಾಪತ್ತೆಯಾಗಿ ಕೆಲ ದಿನಗಳು ಉರುಳಿದ್ದು, ಆಕೆಯ ಸುಳಿವು ಸಿಗದಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ನಾಪತ್ತೆಯಾಗಿರುವ ಲೀಲಾವತಿ ಅವರ ಪತಿ ಮುನಿಕೃಷ್ಣ...

ಇದನ್ನೂ ಓದಿ:ಗಂಡನ ವೇತನ ಬೇಕು, ಆರೈಕೆ ಬೇಡ: ಆಸ್ಪತ್ರೆ ಹೊರ ಅವರಣದಲ್ಲಿ ನರಕಯಾತನೆ ಅನುಭವಿಸುತ್ತಿರುವ ಸರ್ಕಾರಿ ನೌಕರ

ಗಂಡ ಮುನಿಕೃಷ್ಣ ಮದ್ಯ ವ್ಯಸನಿಯಾಗಿದ್ದು, ಆತನ ಕುಡಿತದ ಚಟ ಬಿಡಿಸಲು ಲೀಲಾವತಿ RIP ಎಂದು ಬರೆದು ನಾಪತ್ತೆ ನಾಟಕ ಆಡಿದ್ರಾ ಎಂಬ ಶಂಕೆ ವ್ಯಕ್ತವಾಗಿದೆ. ಫೆಬ್ರವರಿ 24 ರಂದು ಬೆಳಗ್ಗೆ 7:30 ಸಮಯದಲ್ಲಿ ಉದನಹಳ್ಳಿಯಿಂದ ಬಸ್ ನಿಲ್ದಾಣಕ್ಕೆ ಲೀಲಾವತಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಂಬಂಧಿಕರೂಬ್ಬರು ಆಕೆಯನ್ನು ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿ ನೋಡಿದ್ದಾಗಿ ಹೇಳುತ್ತಿದ್ದಾರೆ. ಲೀಲಾವತಿ ಕುಟುಂಬಕ್ಕೆ ಆಪ್ತರಾಗಿರುವ ಮೈಲಾಪನಹಳ್ಳಿಯ ದೇವರಾಜು ಅವರೇ ಆಕೆಯನ್ನು ಬೇರೆಡೆ ಇಟ್ಟಿದ್ದಾರೆ ಎಂದು ಪತಿ ಮುನಿಕೃಷ್ಣ ಆರೋಪಿಸಿದ್ದಾರೆ. ನನ್ನ ಹೆಂಡತಿ ಮತ್ತೆ ಬಂದರೆ ತುಂಬು ಹೃದಯದಿಂದ ಸ್ವಾಗತಿಸುವೆ ಎಂದು ಮುನಿಕೃಷ್ಣ ಪತ್ನಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ.

Last Updated : Mar 9, 2022, 12:46 PM IST

ABOUT THE AUTHOR

...view details