ಬೆಂಗಳೂರು: ನೆರೆಯ ರಾಜ್ಯಗಳಲ್ಲಿ ಕೋವಿಡ್ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ನಮ್ಮ ಬೆಂಗಳೂರಿನಲ್ಲೂ ಕೆಲ ನಿರ್ಬಂಧಗಳ ಅವಶ್ಯಕತೆ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಕೇರಳದ ಕೋವಿಡ್ ಏರಿಕೆ ಬಿಸಿ.. ಬೆಂಗಳೂರಿಗೆ ನಗರಕ್ಕೆ ಕೆಲ ನಿರ್ಬಂಧಗಳ ಅಗತ್ಯವಿದೆ: ಗೌರವ್ ಗುಪ್ತಾ - ಬೆಂಗಳೂರು
ನೆರೆಯ ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದರಿಂದ ಬೆಂಗಳೂರಿನಲ್ಲಿ ಕೆಲ ನಿರ್ಬಂಧಗಳ ಅವಶ್ಯಕತೆ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಭಿಪ್ರಾಯ ಪಟ್ಟಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳೊಂದಿಗೆ ಎಲ್ಲಾ ಸಚಿವರು ಹಾಗೂ ತಜ್ಞರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಗಣೇಶ ಚತುರ್ಥಿ ಆಚರಣೆ ವಿಚಾರವಾಗಿ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು. ಬೆಂಗಳೂರಿನಲ್ಲಿ ಸದ್ಯ ಕೊರೊನಾ ಪ್ರಕರಣಗಳು ನಿಯಂತ್ರಣದಲ್ಲಿವೆ. ಆದರೆ ಪಕ್ಕದ ಕೇರಳದಲ್ಲಿ ಸೋಂಕು ಉಲ್ಬಣವಾಗಿರುವುದರಿಂದ ಈ ಬಗ್ಗೆ ನಾವು ಗಮನಹರಿಸಬೇಕಾಗಿದೆ. ಇದೊಂದು ಸಾಂಕ್ರಾಮಿಕ ರೋಗದ ಸಮಯ. ಇಂತಹ ಸಮಯದಲ್ಲಿ ನಾವು ಕಠಿಣ ನಿಯಮಗಳನ್ನು ಪಾಲನೆ ಮಾಡ ಬೇಕಾಗಿರೋದು ಅನಿರ್ವಾಯ ಎಂದು ತಿಳಿಸಿದರು.
ಗಣೇಶ ಚತುರ್ಥಿ ನಮ್ಮ ಜನರ ಕಲೆ, ಸಂಸ್ಕೃತಿ:
ಗಣೇಶ ಚತುರ್ಥಿ ನಮ್ಮ ಜನರ ಕಲೆ, ಸಂಸ್ಕೃತಿಯಲ್ಲಿದೆ. ಈ ಆಚರಣೆ ನಮ್ಮ ಧಾರ್ಮಿಕ ನಂಬಿಕೆ ಆಗಿದೆ. ಕೊರೊನಾ ಸಂದರ್ಭದಲ್ಲಿ ಧಾರ್ಮಿಕ ನಂಬಿಕೆಯನ್ನು ಗಮನದಲ್ಲಿ ಇರಿಸಿಕೊಂಡು ಆಚರಣೆಗಳನ್ನು ಮಾಡಬೇಕಿದೆ. ಸಾರ್ವಜನಿಕರಿಂದ ಹಲವು ಅಭಿಪ್ರಾಯಗಳು ಬರುತ್ತಿವೆ. ಅದನ್ನು ಸಹ ಪರಿಗಣನೆಗೆ ತೆಗದುಕೊಂಡು ಸರ್ಕಾರ ಕ್ರಮ ಕೈಗೊಳ್ಳಲಿದೆ ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ, ವೀಕೆಂಡ್ ಕರ್ಫ್ಯೂ ಅಗತ್ಯ ಇಲ್ಲ : ಗೌರವ್ ಗುಪ್ತಾ