ಕರ್ನಾಟಕ

karnataka

ETV Bharat / city

ಲವ್ ಮಾಡಿ ಮದುವೆಯಾದ ಗಂಡ ಡ್ರಗ್ಸ್ ವ್ಯಸನಿ: ಪತಿಯ ವಿಕೃತ ಕಿರುಕುಳದಿಂದ ನೇಣಿಗೆ ಶರಣಾದ ಗೃಹಿಣಿ

ಜಾತಿಗಳು ಬೇರೆಯಾದರೂ ಎರಡೂ ಕುಟುಂಬ ಒಪ್ಪಿ ಮದುವೆ ಮಾಡಿದ್ದರು. ಆದರೆ, ಕೈ ಹಿಡಿದ ಪ್ರಿಯಕರ ಮದ್ಯ ಮತ್ತು ಮಾಧಕ ವ್ಯಸನಿಯಾಗಿದ್ದ, ಗಂಡನ ವಿಕೃತ ಕಿರುಕುಳಕ್ಕೆ ಬೇಸತ್ತ ಹೆಂಡತಿ ನೇಣಿಗೆ ಶರಣಾಗಿದ್ದಾಳೆ.

Wife Suicide for husband's drug consumption and harassment
ಲವ್ ಮಾಡಿ ಮದುವೆಯಾದ ಗಂಡ ಡ್ರಗ್ಸ್ ವ್ಯಸನಿ

By

Published : May 3, 2022, 8:47 PM IST

Updated : May 3, 2022, 10:20 PM IST

ದೊಡ್ಡಬಳ್ಳಾಪುರ:ಕಾಲೇಜ್​ನಲ್ಲಿ ಇಬ್ಬರು ಕ್ಲಾಸ್ ಮೇಟ್ಸ್​ಗಳು ನೋಡ ನೋಡುತ್ತಲೇ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಜಾತಿಗಳು ಬೇರೆಯಾದರೂ ಎರಡು ಕುಟುಂಬ ಒಪ್ಪಿ ಮದುವೆ ಮಾಡಿದ್ದರು. ಆದರೆ, ಕೈ ಹಿಡಿದ ಪ್ರಿಯಕರ ಮದ್ಯ ಮತ್ತು ಮಾದಕ ವ್ಯಸನಿಯಾಗಿದ್ದ, ಗಂಡನ ವಿಕೃತ ಕಿರುಕುಳಕ್ಕೆ ಬೇಸತ್ತ ಹೆಂಡತಿ ನೇಣಿಗೆ ಶರಣಾಗಿದ್ದಾರೆ. ನೇಣಿಗೆ ಶರಣಾದ ಯುವತಿ ವಂದನಾ(25) ಎಂದು ಗುರುತಿಸಲಾಗಿದೆ.

ದೊಡ್ಡಬಳ್ಳಾಪುರ ನಗರದ ತ್ಯಾಗರಾಜನಗರ ಅನುಸೂಯಮ್ಮನವರ ಮಗಳೇ ಈ ವಂದನಾ. ಕೊಂಗಾಡಿಯಪ್ಪ ಕಾಲೇಜಿ​ನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಕ್ಲಾಸ್ ಮೇಟ್ ಗೌತಮ್ ನಡುವೆ ಪ್ರೇಮಾಂಕುರವಾಗಿತ್ತು. 5 ವರ್ಷಗಳ ಪ್ರೇಮದ ಸುತ್ತಾಟದ ನಂತರ ವಿವಾಹ ಬಂಧನಕ್ಕೆ ಒಳಗಾಗಿದ್ದರು.

ಕಾಲೇಜ್​ನಲ್ಲಿ ಇರುವಾಗಲೇ ಗೌತಮ್​ ಧೂಮಪಾನಿಯಾಗಿದ್ದ. ಆತನನ್ನು ಮದುವೆಯ ನಂತರ ಬದಲಾಯಿಸ್ತಿನಿ ಎಂಬ ನಂಬಿಕೆಯಲ್ಲಿ ಸಪ್ತಪದಿ ತುಳಿದಿದ್ದಳು. ಆದರೇ ಆತ ಡ್ರಗ್ಸ್ ಚಟಕ್ಕೆ ದಾಸನಾಗಿದ್ದ, ನಶೆಯಲ್ಲಿ ಇಡೀ ರಾತ್ರಿ ವಂದನಾಗೆ ಕಿರುಕುಳ ನೀಡುತ್ತಿದ್ದ. ಗಂಡನ ವಿಕೃತ ಕಿರುಕುಳಕ್ಕೆ ಬೇಸತ್ತ ವಂದನಾ ಇಂದು ಬೆಳಗ್ಗೆ ತಾಯಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಪತಿಯ ವಿಕೃತ ಕಿರುಕುಳದಿಂದ ನೇಣಿಗೆ ಶರಣಾದ ಗೃಹಿಣಿ

ಎಂಎಸ್​ಸಿ ಪದವಿಧರೆಯಾಗಿದ್ದ ವಂದನಾ ಖಾಸಗಿ ಕಂಪನಿಯಲ್ಲಿ ಕೈತುಂಬಾ ಸಂಬಳ ಪಡೆಯುತ್ತಿದ್ದಳು. ಗೌತಮ್​ಗೆ ಬರುತ್ತಿದ್ದ ಸಂಬಳ ಕಡಿಮೆಯಾದರೂ ದುಶ್ಚಟಕ್ಕೆ ದಾಸನಾಗಿದ್ದ. ಅವನ ಚಟಗಳಿಗೆ ಸಂಪಾದನೆ ಸಾಕಾಗದ ಮಡದಿಯಿಂದ ಹಣ ತೆಗೆದು ಕೊಳ್ಳುತ್ತಿದ್ದ. ಇದಲ್ಲದೇ ಮದುವೆ ಖರ್ಚಿಗಾಗಿ ಎರಡು ಲಕ್ಷ ಹಣವನ್ನ ವಂದನಾ ಬಳಿಯಿಂದ ಪಡೆದಿದ್ದ.

ಗಂಡನ ಕಿರುಕುಳಕ್ಕೆ ಬೇಸತ್ತು ಗಂಡನ ವಿರುದ್ಧ ದೂರು ಸಿದ್ಧತೆ ಮಾಡಿಕೊಂಡಿದ್ದ ವಂದನಾ ಸೈಬರ್ ಸೆಂಟರ್​ನಲ್ಲಿ ದೂರು ಪ್ರತಿಯನ್ನು ಟೈಪ್ ಮಾಡಿಸಿದ್ದಳು. ಅದನ್ನು ಪೊಲೀಸ್ ಠಾಣೆಗೆ ಕೊಡುವ ಬದಲಿಗೆ ಇಂದು ಬೆಳಗ್ಗೆ 11 :30 ಸಮಯದಲ್ಲಿ ಮನೆಯ ರೂಮ್ ಒಂದಲ್ಲಿ ಫ್ಯಾನ್ ನೇಣು ಹಾಕೊಂಡು ಸಾವನ್ನಪ್ಪಿದ್ದಾಳೆ. ತಹಶೀಲ್ದಾರ್ ಮೋಹನಕುಮಾರಿ ಸಮ್ಮುಖದಲ್ಲಿ ಮೃತಳ ಶವಪರೀಕ್ಷೆ ಮಾಡಿಸಲಾಗಿದೆ.

ಇದನ್ನೂ ಓದಿ:ಮನೆಕೆಲಸ ಮಾಡುವ ಮಹಿಳೆಗೆ ಮತ್ತು ಬರುವ ಔಷಧಿ ಬೆರೆಸಿ ಕಳ್ಳತನ : ಇಬ್ಬರ ಬಂಧನ

Last Updated : May 3, 2022, 10:20 PM IST

ABOUT THE AUTHOR

...view details