ಬೆಂಗಳೂರು: ಸಚಿವರಿಗೆ ಭಯವಿದೆಯೇ.. ಏತಕ್ಕೆ ಆರು ಮಂದಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮುಂಬೈನಲ್ಲಿ ನಡೆದದ್ದಾರೂ ಏನು ಎಂಬುದನ್ನು ಜನರ ಊಹೆಗೆ ಬಿಡಲಾಗಿದೆ ಎಂದು ಕಾಂಗ್ರೆಸ್ ಶಾಸಕ, ಪ್ರತಿಪಕ್ಷದ ಸಚೇತಕ ಅಜಯ್ ಸಿಂಗ್ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇಂದು ಆರೂವರೆ ಕೋಟಿ ಜನ ನೋಡುತ್ತಿದ್ದಾರೆ. ಮುಂಬೈನಲ್ಲಿ ಏನೆಲ್ಲಾ ನಡೆದಿರಬಹುದು. ಅಲ್ಲಿ ಏನೆಲ್ಲಾ ಆಗಿರಬಹುದು ಎಂದು ಜನರೇ ಗಮನಿಸುತ್ತಿದ್ದಾರೆ ಎಂದರು.