ಕರ್ನಾಟಕ

karnataka

ETV Bharat / city

ಹುಲಿ ಹಿಡಿದಂತೆ ಅಬ್ಬರಿಸಿ ಇಲಿಯನ್ನೂ ಹಿಡಿಯಲಾಗಲಿಲ್ಲ.. 17 ಜನರ ಹೆಸರು ಹೇಳಿದ್ಯಾಕೆ ಸಂಸದ ತೇಜಸ್ವಿ ಸೂರ್ಯ? - ಬಿಬಿಎಂಪಿ ಬೆಡ್​​ ಸ್ಕ್ಯಾಮ್​ ಕುರಿತು ತೇಜಸ್ವಿ ಸೂರ್ಯ ಹೇಳಿಕೆ

ಮೇ 6 ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೆಲ ಪದಗಳ ಬಳಕೆ ಮಾಡಿದ್ದ ತೇಜಸ್ವಿ ಸೂರ್ಯ, ಸೌತ್ ವಾರ್ ರೂಂನಲ್ಲಿ ಒಂದೇ ಕೋಮಿನ ಸಿಬ್ಬಂದಿ ಹೆಸರನ್ನ ಹೇಳಿದ್ದರು. ಅಲ್ಲದೇ, ಹಜ್ ಕಮಿಟಿ ಮತ್ತು ಮದರಸಾ ಹೆಸರಿನ ಬಳಕೆ ಮಾಡಿ ಕೋಮು ಭಾವನೆ ಕೆರಳಿಸುವಂತೆ ಮಾತನಾಡಿದ್ದರು ಎಂಬ ಆರೋಪದ ಕುರಿತು ಪ್ರಶ್ನಿಸಿದಾಗ, ಪದಗಳ ಬಳಕೆ ಕುರಿತು ಸ್ಪಷ್ಟೀಕರಣ ನೀಡಲು ಒದ್ದಾಡಿದರು..

who-ever-in-bed-scam-they-will-be-punish-tejasvi-surya-said
ತೇಜಸ್ವಿ ಸೂರ್ಯ

By

Published : May 10, 2021, 8:34 PM IST

ಬೆಂಗಳೂರು : ಬೆಡ್ ಬುಕ್ಕಿಂಗ್​​ ಹಗರಣದಲ್ಲಿ ಸತೀಶ್ ರೆಡ್ಡಿ, ರಿಜ್ವಾನ್ ಅರ್ಷದ್ ಅಥವಾ ಕೃಷ್ಣ ಬೈರೇಗೌಡರೇ ಇರಲಿ, ಯಾರೇ ಭಾಗಿಯಾಗಿದ್ದರೂ ತನಿಖೆಯಾಗಿ, ಶಿಕ್ಷೆಯಾಗಲಿ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಬೆಡ್ ಬ್ಲಾಕಿಂಗ್ ಪಾರದರ್ಶಕತೆ ಬಗ್ಗೆ ಮುಂದಿನ ಕ್ರಮದ ಬಗ್ಗೆ ವಿವರಿಸಿದ ಅವರು, ಮುಂದಿನ ನೂರು ಗಂಟೆಗಳ ಒಳಗೆ ಮಹತ್ತರ ಬದಲಾವಣೆ ಆಗಲಿದೆ. ಯಾರಿಗೆಲ್ಲ ಬೆಡ್ ಬೇಕೋ ಅವರು ಬುಕ್ ಮಾಡಿದ್ರೆ, ಅವರೆಲ್ಲರ ಬಿಯು ನಂಬರ್ ಕ್ಯೂ ಲಿಸ್ಟ್​ನಲ್ಲಿ ತೋರಿಸಲಿದೆ.

ಆದ್ಯತೆಯ ಆಧಾರದಲ್ಲಿ ಬೆಡ್ ಹಂಚಿಕೆ. ಜನರಲ್ ಬೆಡ್​ನಲ್ಲಿರೋ ವ್ಯಕ್ತಿಗೆ ಐಸಿಯು ಬೇಕಾದ್ರೆ ಅವರು ಬುಕ್ ಮಾಡಿದ್ರೆ ಬಿಯು ನಂಬರ್ ಐಸಿಯು ಲಿಸ್ಟ್​ಗೆ ಅವರ ಹೆಸರು ಸೇರಲಿದೆ.

ಅಲ್ಲದೇ ಡಿಸ್ಚಾರ್ಚ್​​​ ಆಗೋ ಹೊತ್ತಲ್ಲೆ ಬಿಬಿಎಂಪಿ ವೆಬ್‌ಸೈಟ್​ನಲ್ಲಿ ಮಾಹಿತಿ ತೋರಿಸೋ ವ್ಯವಸ್ಥೆ ಆಗಲಿದೆ ಎಂದು ಬುಕ್ಕಿಂಗ್​ ವ್ಯವಸ್ಥೆ ಮಾರ್ಪಾಡಿನ ಬಗ್ಗೆ ವಿವರಣೆ ನೀಡಿದರು.

ಸತೀಶ್ ರೆಡ್ಡಿ, ರಿಜ್ವಾನ್ ಅರ್ಷದ್, ಕೃಷ್ಣ ಬೈರೇಗೌಡರೇ ಆಗಲಿ ತಪ್ಪು ಮಾಡಿದರೆ ಶಿಕ್ಷೆ

17 ಜನರ ಲಿಸ್ಟ್​ ಕಂಪನಿಯೇ ನೀಡಿತ್ತು: ಬಹುದೊಡ್ಡ ಬೆಡ್ ದಂಧೆಯನ್ನು ನಾವು ಹೊರ ಹಾಕಿದ್ದೆವು, ಅದರ ದಿಕ್ಕು ತಪ್ಪಿಸೋ ಸಾಕಷ್ಟು ಷಡ್ಯಂತ್ರ ಆಗುತ್ತಿದೆ. ಕಾಂಗ್ರೆಸ್ ಬಹುದೊಡ್ಡ ಸುಳ್ಳನ್ನು ಹೇಳುತ್ತಿದೆ. 17 ಜನರನ್ನು ನಾವು ಟಾರ್ಗೆಟ್ ಮಾಡಿ ಕೆಲಸದಿಂದ ತೆಗೆದು ಹಾಕಿದ್ದೇವೆ ಅಂತಿದ್ದಾರೆ. ನಾವು ಅಕ್ರಮವನ್ನು ಬಯಲಿಗೆ ಎಳೆಯುವ ಎರಡು ದಿನ ಮೊದಲೇ ಕಂಪನಿ ಮತ್ತು ಬಿಬಿಎಂಪಿ ಅವರನ್ನೆಲ್ಲ ಕೆಲಸದಿಂದ ತೆಗೆದು ಹಾಕಲು‌ ಶಾರ್ಟ್ ಲಿಸ್ಟ್ ಮಾಡಿತ್ತು.

ದಂಧೆಯಲ್ಲಿ ಭಾಗಿಯಾಗಿದ್ದವರಿಗೆ ಶಿಕ್ಷೆ: ನಾವು ವಾರ್​ ರೂಮ್​​ಗೆ ಹೋದಾಗ ಅಧಿಕಾರಿಗಳಿಬ್ಬರು 17 ಜನರ ಹೆಸರು ಕೊಟ್ಟರು. ಅವರನ್ನು ತೆಗೆದು ಹಾಕುತ್ತಿರುವುದಾಗಿ ಹೇಳಿದ್ರು. ಹೇಗೆ ಅವರನ್ನ ಕೆಲಸಕ್ಕೆ ಸೇರಿಸಿಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದೇನೆ ಎಂದರು.

ಪ್ರಕರಣದಲ್ಲಿ ಬಿಜೆಪಿಯವ್ರೂ ಇದಾರೆ ಅಂತ ಆರೋಪಿಸಲಾಗಿದೆ, ಇದರಲ್ಲಿ ಯಾರೇ ಶಾಮೀಲಾಗಿದ್ರೂ ಶಿಕ್ಷೆ ಆಗಲಿ. ಅದು ಸತೀಶ್ ರೆಡ್ಡಿ, ರಿಜ್ವಾನ್ ಅರ್ಷದ್ ಇರಲಿ. ಕ್ಷೇತ್ರದ ಶಾಸಕ ಕ್ಷೇತ್ರದ ಜನಕ್ಕೆ ಬೆಡ್ ಕೇಳೋದು ತಪ್ಪಾ? ಸಿಸಿಬಿ ತನಿಖೆ ನಡೀತಿದೆ, ಸತ್ಯ ಹೊರ ಬರುತ್ತೆ ಎಂದು ತಿಳಿಸಿದರು.

ಶಬ್ದಗಳ ಸ್ಪಷ್ಟನೆಗೆ ತಿಣುಕಾಟ : ಮೇ 6 ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೆಲ ಪದಗಳ ಬಳಕೆ ಮಾಡಿದ್ದ ತೇಜಸ್ವಿ ಸೂರ್ಯ, ಸೌತ್ ವಾರ್ ರೂಂನಲ್ಲಿ ಒಂದೇ ಕೋಮಿನ ಸಿಬ್ಬಂದಿ ಹೆಸರನ್ನ ಹೇಳಿದ್ದರು. ಅಲ್ಲದೇ, ಹಜ್ ಕಮಿಟಿ ಮತ್ತು ಮದರಸಾ ಹೆಸರಿನ ಬಳಕೆ ಮಾಡಿ ಕೋಮು ಭಾವನೆ ಕೆರಳಿಸುವಂತೆ ಮಾತನಾಡಿದ್ದರು ಎಂಬ ಆರೋಪದ ಕುರಿತು ಪ್ರಶ್ನಿಸಿದಾಗ, ಪದಗಳ ಬಳಕೆ ಕುರಿತು ಸ್ಪಷ್ಟೀಕರಣ ನೀಡಲು ಒದ್ದಾಡಿದರು.

ಅಧಿಕಾರಿಗಳ ಪಟ್ಟಿ ಕುರಿತು ಸ್ಪಷ್ಟೀಕರಣ ನೀಡದ ಸಂಸದ: ವಾರ್ ರೂಂಗೆ ಎಂಟ್ರಿ‌ಕೊಟ್ಟಾಗ ಹಿರಿಯ ಅಧಿಕಾರಿ ನೀಡಿದ್ದ ಪಟ್ಟಿ ಓದಿದ್ದೇನೆ ಅಷ್ಟೇ ಎಂದು ಸ್ಪಷ್ಟೀಕರಣ ನೀಡಲು ಹಿಂದೇಟು ಹಾಕಿದ ತೇಜಸ್ವಿ ಸೂರ್ಯ, ಆ 16 ಜನರ ಮೇಲೆ ನಾನು ಯಾವುದೇ ಆರೋಪ ಮಾಡಿಲ್ಲ, ಎರಡು ದಿನಗಳ ಹಿಂದೆ ಏಜೆನ್ಸಿ ಸಿಬ್ಬಂದಿ ತೆಗೆದು ಹಾಕಿದ್ದರು. ಈ ಕುರಿತು ತಿಳಿದು ಕೊಳ್ಳಲು ಅಷ್ಟೇ ನಾನು ಪ್ರಶ್ನಿಸಿದ್ದೆ. ಎಂದು ಸಮರ್ಪಕವಾಗಿ ಸ್ಪಷ್ಟೀಕರಣ ನೀಡದೇ ಸುದ್ದಿಗೋಷ್ಠಿಯನ್ನು ಮುಗಿಸಿ ಹೊರಟು ಹೋದರು.

ABOUT THE AUTHOR

...view details