ಕರ್ನಾಟಕ

karnataka

ETV Bharat / city

ದೂರು ನೀಡಲು ಬಂದವರ ಮೇಲೆ ಪೊಲೀಸರ ದರ್ಪ ಆರೋಪ - ಜಿಗಣಿ ಶಂಕರ್

ಆಸ್ಪತ್ರೆಯ ಸಿಬ್ಬಂದಿ ಕಿರಿಕಿರಿ ಕುರಿತು ಪೊಲೀಸ್​ ಠಾಣೆಗೆ ದೂರು ನೀಡಲು ಹೋಗಿದ್ದ ವ್ಯಕ್ತಿಯನ್ನು ಬಟ್ಟೆ ಬಿಚ್ಚಿ ಕೂರಿಸಿ ವೈಟ್​​ ಫೀಲ್ಡ್​​​ ಪೊಲೀಸರು ದರ್ಪ ತೋರಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕ್ ಸೇನಾ ರಾಜ್ಯಾದ್ಯಕ್ಷ ಜಿಗಣಿ ಶಂಕರ್ ಆರೋಪಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಹಾಗೂ ಮುಖ್ಯಮಂತ್ರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

white-field-police-mistreated-complainant
ವೈಟ್ ಫೀಲ್ಡ್ ಪೊಲೀಸ್​​ ಠಾಣಾಧಿಕಾರಿ ದರ್ಪ

By

Published : Sep 12, 2020, 8:25 PM IST

ಮಹದೇವಪುರ: ವೈಟ್ ಫೀಲ್ಡ್ ಪೊಲೀಸ್​ ಠಾಣಾಧಿಕಾರಿಯ ದೌರ್ಜನ್ಯ ವಿರೋಧಿಸಿ ಗೃಹ ಮಂತ್ರಿಗಳಿಗೆ ಕರ್ನಾಟಕ ರಿಪಬ್ಲಿಕ್ ಸೇನಾ ನಿಯೋಗದಿಂದ ದೂರು ನೀಡಲಾಗುವುದು ಎಂದು ಸೇನಾ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ತಿಳಿಸಿದರು.

ಕರ್ನಾಟಕ ರಿಪಬ್ಲಿಕ್​ ಸೇನಾ ರಾಜ್ಯಾಧ್ಯಕ್ಷ ಜಿಗಣಿ ಶಂಕರ್​

ಪೊಲೀಸ್​​ ಠಾಣಾಧಿಕಾರಿಯ ದರ್ಪ ವಿರೋಧಿಸಿ ಮಾತನಾಡಿದ ಅವರು, ನಾಗರಾಜ್ ಎಂಬುವವರು ಸುಮಾರು ವರ್ಷಗಳಿಂದ ಸತ್ಯ ಸಾಯಿ ಆಸ್ಪತ್ರೆಯಲ್ಲಿ ವಾಹನ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಅವರಿಗೆ ಇಲ್ಲ-ಸಲ್ಲದ ತೊಂದರೆ ನೀಡುತ್ತಿರುವುದಲ್ಲದೇ ವಾಸದ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಕಿರಿಕಿರಿ ಸಹಿಸದೇ ವೈಟ್‌ ಫೀಲ್ಡ್ ಪೊಲೀಸ್​ ಠಾಣೆಗೆ ದೂರು ನೀಡಲು ಹೋದ ನಾಗರಾಜ್ ಅವರನ್ನು ಬಟ್ಟೆ ಬಿಚ್ಚಿಸಿ ಸುಮಾರು ಮೂರು ಗಂಟೆಗಳ ಕಾಲ ಠಾಣೆಯಲ್ಲಿಯೇ ಕುರಿಸಿ ತಮ್ಮ ದರ್ಪವನ್ನು ತೋರಿದ್ದಾರೆ ಎಂದು ದೂರಿದರು.

ಬಡಜನರಿಗೆ ಕೆಲ ಪೊಲೀಸ್​ ಠಾಣೆಗಳಲ್ಲಿ ಯಾವುದೆ ನ್ಯಾಯ ಸಿಗುತ್ತಿಲ್ಲ. ಅಲ್ಲಿ ಶ್ರೀಮಂತರ ಅಣತೆಯಂತೆ‌ ನಡೆದುಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೈಟ್ ಫೀಲ್ಡ್ ಠಾಣಾಧಿಕಾರಿಯ ದೌರ್ಜನ್ಯ ಕಂಡಿಸಿ ಕೆ.ಆರ್.ಎಸ್ ಸಂಘಟನೆಯ ತಂಡದಿಂದ ಗೃಹ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುವುದೆಂದರು.

ಅಲ್ಲದೆ ನಾಗರಾಜ್ ಅವರನ್ನು ಕೆ.ಆರ್.ಎಸ್. ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾರ್ಮಿಕ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶವನ್ನು ನೀಡಿದರು.

ABOUT THE AUTHOR

...view details