ಬೆಂಗಳೂರು:ಸಾವು ಹೇಗೆ ಬರುತ್ತೆ ಎಂದು ಯಾರಿಗೂ ಊಹಿಸುವುದಕ್ಕೆ ಆಗಲ್ಲ. ಆದರೆ ಕೆಲವರಿಗೆ ತಮ್ಮ ಸಾವಿನ ಬಗ್ಗೆ ಅರಿವಿದ್ದರೂ ನಿರ್ಲಕ್ಷ್ಯಿಸಿ ಸಾವಿಗೆ ತಾವೇ ಆಹ್ವಾನ ಕೊಡುತ್ತಾರೆ. ಕಳೆದ ಭಾನುವಾರ ರೌಡಿಶೀಟರ್ ಅರವಿಂದ್ ಕೊಲೆ ಕೂಡ ಅದೇ ರೀತಿ ನಡೆದಿದೆ.
ಅಪರಾಧ ಪ್ರಕರಣವೊಂದರಲ್ಲಿ ಜೈಲಿನಿಂದ ಬಂದು ಆರೋಪಿಗಳ ಜೊತೆ ಕಿರಿಕ್ ಮಾಡಿದ್ದ ಅರವಿಂದ್ಗೆ ಪ್ರಾಣಾಪಾಯ ಇದೆ ಎಂದು ಗೊತ್ತಿದ್ದರೂ ತಾನು ಒಂಟಿಯಾಗಿರುವ ಬಗ್ಗೆ ಹಾಕಿದ್ದ ವಾಟ್ಸಾಪ್ ಸ್ಟೇಟಸ್ನಿಂದ ಆತ ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ: ಪುಟ್ಬಾಲ್ ಸ್ಟೇಡಿಯಂನಲ್ಲಿ ರೌಡಿಶೀಟರ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಸ್ಟೇಟಸ್ ಹಾಕಿ ಸಾವಿಗೆ ಆಹ್ವಾನ:
ಕಳೆದ ಭಾನುವಾರ ಅಶೋಕನಗರ ವ್ಯಾಪ್ತಿಯ ಫುಟ್ಬಾಲ್ ಸ್ಟೇಡಿಯಂನಲ್ಲಿ ಹಾಡಹಗಲೇ ರೌಡಿಶೀಟರ್ ಅರವಿಂದ್ನನ್ನು ಬರ್ಬರವಾಗಿ ಆರೋಪಿಗಳು ಹತ್ಯೆ ಮಾಡಿದ್ದರು. ಆದರೆ ಜೀವ ಬೆದರಿಕೆ ವಿಷಯ ಅರವಿಂದ್ಗೆ ಮೊದಲೇ ಗೊತ್ತಿತ್ತು. ಆದರೆ ಒಂದೇ ಒಂದು ಯಡವಟ್ಟಿನಿಂದ ತಾನೇ ಸಾವಿಗೆ ಆಹ್ವಾನ ಕೊಟ್ಟಿದ್ದ. ಜೈಲಿನಿಂದ ಹೊರ ಬಂದಿದ್ದ ಅರವಿಂದ್ ಆರೋಪಿ ಸ್ಟ್ಯಾಲಿನ್ ತಮ್ಮನ ಜೊತೆ ಕಿರಿಕ್ ಮಾಡಿಕೊಂಡಿದ್ದ. ಅವನನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದ. ಈ ಬೆನ್ನಲ್ಲೇ ಶತ್ರುಗಳು ತನ್ನ ಹಿಂದೆ ಬೀಳುತ್ತಾರೆ ಎಂದು ಗೊತ್ತಿದ್ದ ಕಾರಣ ಸದಾ ಹಿಂದೆ ಹುಡುಗರನ್ನು ಇಟ್ಟುಕೊಂಡು ಅರವಿಂದ್ ಓಡಾಡುತ್ತಿದ್ದ. ಆದ್ರೆ ಕೊಲೆಯಾಗುವ ದಿನ ಮಾತ್ರ ಒಂಟಿಯಾಗಿ ಸ್ಟೇಡಿಯಂಗೆ ಹೋಗಿದ್ದ. ಆದರೆ ಅಂದು ಒಂದೇ ಒಂದು ಸ್ಟೇಟಸ್ ಹಾಕಿ ಆರೋಪಿಗಳಿಗೆ ತಾನೊಬ್ಬನೇ ಇರುವುದಾಗಿ ಸುಳಿವು ಕೊಟ್ಟಿದ್ದ.
ಮತ್ತೊಂದೆಡೆ, ಪ್ರಕರಣದ ಪ್ರಮುಖ ಆರೋಪಿ ಸ್ಟಾಲಿನ್ ಮತ್ತು ಅರವಿಂದ್ ನಡವೆ ಜಿದ್ದಾಜಿದ್ದಿಯಿತ್ತು. ಈ ಇಬ್ಬರೂ ಕೂಡ ಏರಿಯಾದಲ್ಲಿ ಮೇಲುಗೈ ಸಾಧಿಸುವುದಕ್ಕೆ ಗುದ್ದಾಡಿದ್ದರು. ಅಲ್ಲದೇ ಇಬ್ಬರೂ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಬಿಲ್ಡಪ್ ವಿಡಿಯೋ ಹಾಕಿ ಕಿರಿಕ್ ಕೂಡ ಮಾಡಿಕೊಳುತ್ತಿದ್ದರು. ಒಂದು ಕಡೆ ತಲ್ವಾರ್ ಹಿಡಿದು ಅರವಿಂದ್ ಶೋ ಕೊಟ್ಟರೆ, ಡ್ರ್ಯಾಗರ್ ಹಿಡಿದು ಸ್ಟ್ಯಾಲಿನ್ ಶೋ ಕೊಡ್ತಿದ್ದ. ಸಾಮಾಜಿಕ ಜಾಲತಾಣದಲ್ಲಿ ರಾಜಾರೋಷವಾಗಿ ವಿಡಿಯೋ ಹಾಕ್ತಿದ್ದ ಸ್ಟಾಲಿನ್ ಹಾಗೂ ಅರವಿಂದ್ ಸ್ಟೇಟಸ್ ಹಾಕುತ್ತಿದ್ದರು. ಆದ್ರೆ ಈ ಸ್ಟೇಟಸ್ ಹುಚ್ಚು ಅರವಿಂದ್ನ ಉಸಿರು ನಿಲ್ಲುವಂತೆ ಮಾಡಿದೆ.
ಸ್ಟ್ಯಾಲಿನ್ ಸಹೋದರ ಸುಭಾಷ್ ಮತ್ತು ಜಾಕ್ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಅರವಿಂದ್, ಜಾಕ್ ತಮ್ಮನಿಗೆ ಹಲ್ಲೆ ನಡೆಸಿ ನಗ್ನವಾಗಿ ವಿಡಿಯೋ ಮಾಡಿದ್ದ. ಇದರ ಜೊತೆಗೆ ಜಾಕ್ ಇಲ್ಲದಾಗ ಜಾಕ್ ಮನೆಗೆ ನುಗ್ಗಿ ಜಾಕ್ ಪತ್ನಿಗೂ ಥಳಿಸಿದ್ದ. ಈ ಕಾರಣಕ್ಕೆ ಅರವಿಂದ್ ಕೊಲೆಗೆ ಸ್ಟಾಲಿನ್ ಮತ್ತು ಜಾಕ್ ಕೊಲೆ ಮಾಡಲು ನಿರ್ಧರಿಸಿದ್ದರು. ಅರವಿಂದ್ ಕೊಲೆಗಾಗಿ ಹಗಲು ರಾತ್ರಿ ಹುಡುಕುತ್ತಿದ್ದ ಆರೋಪಿಗಳಿಂದ ಅರವಿಂದ್ ತಪ್ಪಿಸಿಕೊಳ್ತಿದ್ದ. ಅಲ್ಲದೇ ಯಾವಾಗಲೂ 10-12 ಜನರನ್ನಿಟ್ಟುಕೊಂಡೇ ಓಡಾಡ್ತಿದ್ದ. ಆದರೆ ಫುಟ್ಬಾಲ್ ಸ್ಟೇಡಿಯಂಗೆ ಹೋಗುವಾಗ ಅರವಿಂದ್ ಒಬ್ಬನೇ ಹೋಗಿದ್ದ. ಇದನ್ನು ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿ ಆರೋಪಿಗಳಿಗೆ ಮೆಸೇಜ್ ಕೂಡ ಕೊಟ್ಟಿದ್ದ. ಇದೇ ಸಮಯಕ್ಕೆ ಕಾಯುತ್ತಿದ್ದ ಸ್ಟ್ಯಾಲಿನ್ ತಂಡ, ಅರವಿಂದ್ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.