ಕರ್ನಾಟಕ

karnataka

ETV Bharat / city

ನರೇಗಾ ಕಾಮಗಾರಿ ಸ್ಥಳದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು? - Covid Appropriate Behavior

ಕಾಮಗಾರಿ ಪ್ರಾರಂಭಿಸುವ ಮೊದಲು ಕೂಲಿಕಾರರಿಗೆ ಕಡ್ಡಾಯವಾಗಿ ಕೋವಿಡ್ ಪ್ರತಿಜ್ಞಾ ವಿಧಿ ಬೋಧಿಸಬೇಕು. ಕಡ್ಡಾಯವಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಸೋಪ್‌ನಿಂದ ಕೈ ತೊಳೆದು ಕಾಮಗಾರಿ ಪ್ರಾರಂಭಿಸಬೇಕು..

 What precautions should be taken at the nrega work ?
What precautions should be taken at the nrega work ?

By

Published : May 14, 2021, 10:15 PM IST

ಬೆಂಗಳೂರು: ಪ್ರತಿ ಕಾಮಗಾರಿ ಸ್ಥಳದಲ್ಲಿ 40ಕ್ಕಿಂತ ಕಡಿಮೆ ಕೂಲಿಕಾರರನ್ನು ತೊಡಿಗಿಸಿಕೊಂಡು ಮತ್ತು ಸೂಕ್ತ Covid Appropriate Behavior (CAB) ಅಳವಡಿಸಿಕೊಂಡು ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ನರೇಗಾ ಯೋಜನೆ ಅನುಷ್ಠಾನ ಮಾಡುವ ಮೊದಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕೆಳಕಂಡ ಕ್ರಮಗಳನ್ನು ವಹಿಸುವಂತೆ ಗ್ರಾಮ ಪಂಚಾಯತ್‌ಗಳಿಗೆ ನಿರ್ದೇಶನ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್‌. ಈಶ್ವರಪ್ಪ ಸೂಚಿಸಿದ್ದಾರೆ.

CAB ಬಗ್ಗೆ ಪಿಡಿಒ, BFT ಮತ್ತು ಮೇಟ್‌ಗಳಿಗೆ CAB ಕುರಿತು ಆನ್‌ಲೈನ್ ತರಬೇತಿ ಆಯೋಜಿಸುವುದು. ಕಾಮಗಾರಿ ಸ್ಥಳದಲ್ಲಿ CAB ಪಾಲಿಸುವ ಉದ್ದೇಶದಿಂದ ಕಾಮಗಾರಿ ಸ್ಥಳದಲ್ಲಿ ಒದಗಿಸಬೇಕಾದ ಮೂಲಸೌಕರ್ಯಗಳ ಭಾಗವಾಗಿ ಕೈ ತೊಳೆಯಲು ಸಾಬೂನು, ಫಲ್ಸ್​ ಆಕ್ಸಿಮೀಟರ್ ಮತ್ತು ಥರ್ಮಲ್​ ಸ್ಕ್ಯಾನರ್‌ಗಳನ್ನು ಒದಗಿಸುವುದು. ಈ ಸೌಲಭ್ಯಗಳನ್ನು ಒದಗಿಸದೇ ಇದ್ದಲ್ಲಿ CAB ಪಾಲಿಸಲು ಸಾಧ್ಯವಾಗುವುದಿಲ್ಲ.

ಒಂದು ಗ್ರಾಮದಲ್ಲಿ ಕಾಮಗಾರಿ ಪ್ರಾರಂಭಿಸುವ ಮೊದಲು ಆ ಗ್ರಾಮದಲ್ಲಿನ ಪ್ರಸ್ತುತ ಪ್ರಕರಣ ಮತ್ತು ಪಾಸಿಟಿವ್​ ಪ್ರಕರಣಗಳನ್ನು ಪರಿಶೀಲಿಸಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು 40 ಕೂಲಿಕಾರರನ್ನು ನರೇಗಾ ಕಾಮಗಾರಿಯಲ್ಲಿ ತೊಡಗಿಸಿದಲ್ಲಿ ಕೋವಿಡ್ ಹರಡುವ ಸಾಧ್ಯತೆ ಇರುವುದಿಲ್ಲ ಎಂಬುದನ್ನು ದೃಢಪಡಿಸಿಕೊಂಡು ಕಾಮಗಾರಿಗಳನ್ನು ಪ್ರಾರಂಭಿಸಬೇಕು.

ಕಂಟೋನ್ಮೆಂಟ್ ಜೋನ್‌ಗಳಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿರ್ಬಂಧಿಸಿರುವುದರಿಂದ ಈ ಪ್ರದೇಶಗಳಲ್ಲಿ ನರೇಗಾ ಕಾಮಗಾರಿ ಕೈಗೊಳ್ಳಲು ಕೂಡ ನಿರ್ಬಂಧ ಮುಂದುವರೆದಿರುತ್ತದೆ.

ನರೇಗಾ ಕಾಮಗಾರಿಗಳಲ್ಲಿ ಹೆಚ್ಚಿನ ಕೂಲಿಕಾರರು ತೊಡಗಿಕೊಳ್ಳುವ ಜಿಲ್ಲೆಗಳಾದ ಬೆಳಗಾವಿ, ಬಳ್ಳಾರಿ, ಗದಗ, ಕಲ್ಬುರ್ಗಿ, ಬೀದರ್, ಕೊಪ್ಪಳ, ರಾಯಚೂರು, ಧಾರವಾಡ, ಹಾವೇರಿ, ಬಾಗಲಕೋಟೆ, ದಾವಣಗೆರೆ ಮುಂತಾದ ಜಿಲ್ಲೆಗಳಲ್ಲಿ ಪ್ರತಿ ಗ್ರಾಮದಲ್ಲಿ 100ಕ್ಕೂ ಮೇಲ್ಪಟ್ಟು ಮತ್ತು ಕೆಲವು ಗ್ರಾಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನರೇಗಾ ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ ಕೆಲಸ ಪಡೆಯುವುದು ಸಾಮಾನ್ಯವಾಗಿದೆ.

ಈ ಗ್ರಾಮಗಳಲ್ಲಿ ಒಂದು ಕಾಮಗಾರಿ ಸ್ಥಳದಲ್ಲಿ‌ 40 ಕ್ಕಿಂತ ಕಡಿಮೆ ಕೂಲಿಕಾರರನ್ನು ಆಯ್ಕೆ ಮಾಡಿ ಕೆಲಸದಲ್ಲಿ ತೊಡಗಿಸಲು ಜಿಲ್ಲಾ ಮಟ್ಟದಲ್ಲಿ ಕೆಲವೊಂದು ಮಾನದಂಡಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ. ಅವುಗಳಲ್ಲಿ ಈಗಾಗಲೇ ಲಸಿಕೆ ಪಡೆದವರಿಗೆ ಆದ್ಯತೆ ನೀಡುವುದು.‌

18 ರಿಂದ 44 ವರ್ಷ ವಯಸ್ಸಿನವರಿಗೆ ಅವಕಾಶ ನೀಡಬಹುದು. ಆದರೆ, 40 ಜನರನ್ನು ಆಯ್ಕೆ ಮಾಡಲು ಗ್ರಾಮ ಪಂಚಾಯತ್‌ಯು ಸಾವಿರಾರು ಜನರಿಂದ ಅರ್ಜಿ ಸ್ವೀಕರಿಸಿದಲ್ಲಿ ಸರ್ಕಾರವು ಹೊರಡಿಸಿರುವ ಚೈನ್ ಬ್ರೇಕ್ ನಿರ್ಬಂಧಗಳು ಫಲಕಾರಿಯಾಗುವುದಿಲ್ಲ. ಆದ್ದರಿಂದ ಈ ಜಿಲ್ಲೆಗಳಲ್ಲಿ‌ CAB ಕುರಿತು ಹೆಚ್ಚಿನ ಗಮನ ನೀಡಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ದಂತಹ ಜಿಲ್ಲೆಗಳಲ್ಲಿ ಹೆಚ್ಚಿನ ಜನರು ತೆರೆದ ಬಾವಿಯಂತಹ ವೈಯಕ್ತಿಕ ಕಾಮಗಾರಿಗಳಲ್ಲಿ 15ಕ್ಕಿಂತ ಕಡಿಮೆ ಕೂಲಿಕಾರರು ಕಾಮಗಾರಿಯಲ್ಲಿ ತೊಡಗುತ್ತಾರೆ. ಈ ಕಾಮಗಾರಿಗಳನ್ನು CAB ತರಬೇತಿ ನಂತರ ಮುಂದುವರೆಸಬಹುದು.

ಈ ಜಿಲ್ಲೆಗಳಲ್ಲಿ ಸಮುದಾಯ ಕಾಮಗಾರಿಗಳ ಒತ್ತಡ ಇಲ್ಲದೇ ಇರುವುದರಿಂದ 40 ಕ್ಕಿಂತ ಕಡಿಮೆ ಕೂಲಿಕಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅಗತ್ಯವಿರುವುದಿಲ್ಲ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಹೆಚ್ಚಾಗಿ ನಾಲಾ ಮತ್ತು ಕೆರೆ ಹೂಳು ತೆಗೆಯುವ ಕಾಮಗಾರಿಗಳನ್ನು ಹೆಚ್ಚಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ಇದನ್ನು ಬದಲಾಯಿಸಿ ವೈಯಕ್ತಿಕ ಕೃಷಿ ಹೊಂಡ, ಬದು ನಿರ್ಮಾಣ, ತೋಟಗಾರಿಕೆ ಮತ್ತು ಅರಣ್ಯ ಕಾಮಗಾರಿಗಳಿಗೆ ಮುಂಗಡ ಗುಂಡಿ ತೆಗೆಯುವುದು, ಸೋಕ್ ಪಿಟ್ ಇಂತಹ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಈ ಕಾಮಗಾರಿಗಳಿಗೆ CAB ಅಳವಡಿಸಿಕೊಳ್ಳುವ ಕುರಿತು ಯೋಜನೆಯ ಎಲ್ಲಾ ಸಿಬ್ಬಂದಿಗೆ ತರಬೇತಿ ನೀಡಿದ ನಂತರ ಮುಂದಿನ ಕ್ರಮ ಜರುಗಿಸಬೇಕು.

ಕೆಲವು ಜಿಲ್ಲೆಗಳಲ್ಲಿ ಅರಣ್ಯ ಕಾಮಗಾರಿಗಳಿಗೆ ಮುಂಗಡ ಗುಂಡಿ ತೆಗೆಯುವ ಕಾಮಗಾರಿಗಳನ್ನು ಪ್ರಾರಂಭಿಸಿದ್ದು, ಈ ಕಾಮಗಾರಿಗಳನ್ನು ಮುಂದುವರೆಸುವ ಮೊದಲು CAB ಅಳವಡಿಸಿಕೊಳ್ಳುವ ಕುರಿತು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಕಾಮಗಾರಿ ಅನುಷ್ಠಾನಗೊಳಿಸಲು ಸೂಚಿಸಿದೆ.‌

ಪ್ರತಿ ಕಾಮಗಾರಿ ಸ್ಥಳದಲ್ಲಿ ಕೈ ತೊಳೆಯಲು ಸೋಪ್ ಮತ್ತು ಸ್ಯಾನಿಟೈಸರ್ ಇರಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕಾಮಗಾರಿ ಸ್ಥಳದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಕಾಮಗಾರಿ ಆಯ್ಕೆಯು ಮುಖ್ಯವಾಗಿರುತ್ತದೆ. ಆದ್ದರಿಂದ ಸಮುದಾಯ ಕಾಮಗಾರಿಗಳ ಬದಲು ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು.

ಏನು ಮಾಡಬೇಕು? :ಉದ್ಯೋಗ ಖಾತರಿ ಸ್ಥಳದಲ್ಲಿ ಯಾವುದೇ ಕೂಲಿಕಾರನಿಗೆ ನೆಗಡಿ, ಕೆಮ್ಮು ಅಥವಾ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಕಾಯಕ ಬಂಧು ಈ ವಿಷಯವನ್ನು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರ ಗಮನಕ್ಕೆ ತರಬೇಕು.

ಸಹಾಯಕ ನಿರ್ದೇಶಕರು ತಾಲೂಕು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ 24 ಗಂಟೆಯೊಳಗೆ ಕೋವಿಡ್ ಪರೀಕ್ಷೆ ಮಾಡಿಸಬೇಕು. ಆ ಕೂಲಿಕಾರರ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿ ಅವರು ಸೋಂಕಿತ ವ್ಯಕ್ತಿಗಳ ಸಂಪರ್ಕದಲ್ಲಿ ಬಂದಿದ್ದಲ್ಲಿ ಅದರಿ ಕೂಲಿ ಕಾರ್ಮಿಕನ ಪ್ರಾರ್ಥಮಿಕ ಸಂಪರ್ಕಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು.

ಈ ಕಾಮಗಾರಿಯನ್ನು ಮುಂದುವರೆಸುವ ಅಥವಾ ನಿಲ್ಲಿಸುವ ಬಗ್ಗೆ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರಿಗೆ ಅವಕಾಶವಿರುತ್ತದೆ. ಕೂಲಿಕಾರರು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸೋಂಕು ದೃಢಪಟ್ಟಲ್ಲಿ ತಕ್ಷಣವೇ ಪ್ರಾಥಮಿಕ ಸಂಪರ್ಕಗಳಿಗೆ ಕೋವಿಡ್ ಪರೀಕ್ಷೆ ನಡೆಸಬೇಕು ಮತ್ತು ಕಾಮಗಾರಿಯನ್ನು ನಿಲ್ಲಿಸಬೇಕು.

ಹಲವಾರು ಜಿಲ್ಲೆಗಳಲ್ಲಿ ನರೇಗಾ ಕೂಲಿಕಾರರು ಕಾಮಗಾರಿ ಸ್ಥಳಕ್ಕೆ ಗುಂಪಾಗಿ ನಡೆದುಕೊಂಡು, ಒಟ್ಟಾಗಿ ಟ್ರಾಕ್ಟರ್ ಗಳಲ್ಲಿ ಮತ್ತಿತರ ವಾಹನಗಳಲ್ಲಿ ಬರುವುದು ಸಾಮಾನ್ಯವಾಗಿದೆ. ಈ ರೀತಿ ಕೂಲಿಕಾರರು ಕಾಮಗಾರಿ ಸ್ಥಳಕ್ಕೆ ಗುಂಪಾಗಿ ಬರುವುದನ್ನು ನಿರ್ಬಂಧಿಸಬೇಕು. ಈ ರೀತಿ ಗುಂಪಾಗಿ ಕಾಮಗಾರಿ ಸ್ಥಳಕ್ಕೆ ಬರುವ ಪದ್ಧತಿ ಇದ್ದಲ್ಲಿ ಆ ಸ್ಥಳದಲ್ಲಿ ಕಾಮಗಾರಿ ಮುಂದುವರೆಸುವುದು ಅಗತ್ಯವಿರುವುದಿಲ್ಲ.

ಕಾಮಗಾರಿ ಸ್ಥಳದಲ್ಲಿ ಮುಂಜಾಗ್ರತಾ ಕ್ರಮಗಳು :ಥರ್ಮಲ್ ಸ್ಕ್ಯಾನ್‌ ಮೂಲಕ ಕೂಲಿಕಾರರ ದೇಹದ ತಾಪಮಾನ ಪರಿಶೀಲಿಸುವುದು. ಜ್ವರ ಇದ್ದಲ್ಲಿ ಕೂಲಿಕಾರರಿಗೆ ಕಾಮಗಾರಿ ನಿರ್ವಹಿಸಲು ಅವಕಾಶ ನೀಡದೇ ಅವರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸುವುದು.

ಪ್ರತಿ ದಿನ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಇರುವ ಕುರಿತು ವರದಿ ತರಿಸಿಕೊಳ್ಳುವುದು ಮತ್ತು ಅವರನ್ನು 24 ಗಂಟೆಯೊಳಗೆ ಕೋವಿಡ್ ಪರೀಕ್ಷೆಗೆ ಒಳಪಡಿಸುವುದು.

ಕಾಮಗಾರಿ ಪ್ರಾರಂಭಿಸುವ ಮೊದಲು ಕೂಲಿಕಾರರಿಗೆ ಕಡ್ಡಾಯವಾಗಿ ಕೋವಿಡ್ ಪ್ರತಿಜ್ಞಾ ವಿಧಿ ಬೋಧಿಸಬೇಕು. ಕಡ್ಡಾಯವಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಸೋಪ್‌ನಿಂದ ಕೈ ತೊಳೆದು ಕಾಮಗಾರಿ ಪ್ರಾರಂಭಿಸಬೇಕು.

NMRನಲ್ಲಿ ಸಹಿ ಪಡೆಯುವುದರ ಬದಲು ಕಾಮಗಾರಿ ಸ್ಥಳದಲ್ಲಿನ ಕೂಲಿಕಾರರ ಫೋಟೋ ತೆಗೆದು ಕಡತದಲ್ಲಿ ನಿರ್ವಹಿಸುವುದು. ಮೇಟ್‌ಗಳಿಗೆ ಸಮರ್ಪಕವಾಗಿ ತರಬೇತಿ ನೀಡಬೇಕು ಮತ್ತು ನರೇಗಾ ಎಂಬ ಮುದ್ರಣವಿರುವ ಮಾಸ್ಕ್‌ಗಳನ್ನು ವಿತರಿಸಬೇಕು.

ABOUT THE AUTHOR

...view details