ಬೆಂಗಳೂರು:ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಪೊಲೀಸ್ ಇಲಾಖೆಯಲ್ಲಿ ಕೂಡ ಮಹಿಳಾ ಸಿಬ್ಬಂದಿ ಪುರುಷರಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಪುರುಷರಿಗೆ ಸಮಾನರಾಗಿ ದುಡಿಯುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯ ಮಹಿಳೆಯರು ಬೇರೆ ಮಹಿಳೆಯರಿಗೆ ಸ್ಫೂರ್ತಿ ಆಗಿದ್ದಾರೆ.
ಮಹಿಳೆ ಪೊಲೀಸ್ ಯುನಿಫಾರ್ಮ್ ಹಾಕಿದ್ರೆ ಒಂದು ಖದರ್ ಬರುತ್ತೆ: ಇಶಾ ಪಂತ್ - ಕರ್ನಾಟಕ ಪೊಲೀಸ್ ಇಲಾಖೆ
ಸಮಾಜಕ್ಕೆ ಅತ್ಯಂತ ಹತ್ತಿರವಾದ ಇಲಾಖೆ ಅಂದ್ರೆ, ಅದು ಪೊಲೀಸ್ ಇಲಾಖೆ. ಪೊಲೀಸರು ಸಮಾಜವನ್ನು ಕಾಯುವ ಕೆಲಸ ಮಾಡ್ತಾರೆ. ರೌಡಿಗಳನ್ನು ಮಟ್ಟ ಹಾಕುವುದು, ಗಸ್ತು ತಿರುಗುವುದು, ಬಂದೋಬಸ್ತ್, ರಾತ್ರಿ ಪಾಳಿ, ರೋಲ್ ಕಾಲ್, ಎಸ್ಕಾರ್ಟ್ ಹೀಗೆ ಎಲ್ಲಾ ವಿಚಾರದಲ್ಲಿ ಮಹಿಳಾ ಸಿಬ್ಬಂದಿ ಮುಂದುವರಿದು ಕೆಲಸ ಮಾಡ್ತಾರೆ. ಮಹಿಳೆಯರ ಸಮಸ್ಯೆಗಳನ್ನು ಆಲಿಸಲೆಂದೇ ಮಹಿಳಾ ಪೊಲೀಸ್ ಠಾಣೆಗಳನ್ನು ಕೂಡ ತೆರೆಯಲಾಗಿದೆ ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಅವರು ಈಟಿವಿ ಬಾರತ ಜೊತೆ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸಂಖ್ಯೆ ಸಹ ಹೆಚ್ಚಿದೆ. ಹಾಗೆ ಇನ್ನು ಸಾಕಷ್ಟು ಸಿಬ್ಬಂದಿ ಬರುತ್ತಿದ್ದಾರೆ. ಎಲ್ಲರೂ ಪುರುಷರಿಗೆ ಸಮಾನರಾಗಿ ಕೆಲಸ ಮಾಡುತ್ತಾರೆ. ಸರ್ಕಾರ 33 % ಮಹಿಳೆಯರ ಆಯ್ಕೆಗೆ ಅವಕಾಶ ಕೊಟ್ಟಿದ್ದು, ಇನ್ನೂ ಅದು ರೀಚ್ ಆಗಿಲ್ಲ. ಮಹಿಳೆ ಪೊಲೀಸ್ ಯುನಿಫಾರ್ಮ್ ಹಾಕಿದ್ರೆ ಅದೊಂದು ಖದರ್ ಬರುತ್ತೆ. ಪೊಲೀಸ್ ಯುನಿಫಾರ್ಮ್ ಹಾಕಿದವರು ಎಲ್ಲರಿಗೂ ರೋಲ್ ಮಾಡೆಲ್ ಆಗಿದ್ದಾರೆ ಎಂದರು.
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಕರ್ನಾಟಕದ ಪ್ರತಿ ಸಿಬ್ಬಂದಿಗೂ ಮಾರ್ಗದರ್ಶನ ನೀಡುತ್ತಾರೆ. ಸದ್ಯ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಐಪಿಎಸ್- 26, ಡಿವೈಎಸ್ಪಿ 23, ಇನ್ಸ್ ಪೆಕ್ಟರ್- 36, ಸಬ್ ಇನ್ಸ್ಪೆಕ್ಟರ್ಗಳು ಹಾಗೂ ಕಾನ್ಸ್ಟೇಬಲಲ್ಗಳನ್ನು ಸೇರಿ ಒಟ್ಟು 7055 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರು ಮಾಹಿತಿ ನೀಡಿದ್ದಾರೆ.