ಕರ್ನಾಟಕ

karnataka

ETV Bharat / city

ಮುಂದಿನ 15 ವರ್ಷಗಳಲ್ಲಿ ಪದವಿ ಕಾಲೇಜುಗಳು ಸ್ವಾಯತ್ತತೆ ಸಾಧಿಸಲು ಇರುವ ಸವಾಲುಗಳೇನು? - ಬೆಂಗಳೂರು ಸುದ್ದಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ವಿಶ್ವವಿದ್ಯಾಲಯಗಳಿಗೆ ಸಂಯೋಜಿತವಾಗಿರುವ ಎಲ್ಲ ಪದವಿ ಕಾಲೇಜುಗಳು ಮುಂದಿನ 15 ವರ್ಷಗಳಲ್ಲಿ ಸ್ವಾಯತ್ತತೆಗಾಗಿ ಪರಿವರ್ತನೆ ಆಗಬೇಕೆಂದು ಯೋಜಿಸಲಾಗಿದೆ.

What are the challenges for graduate colleges to achieve autonomy
ಮುಂದಿನ 15 ವರ್ಷಗಳಲ್ಲಿ ಪದವಿ ಕಾಲೇಜುಗಳು ಸ್ವಾಯತ್ತತೆ ಸಾಧಿಸಲು ಇರುವ ಸವಾಲುಗಳೇನು?

By

Published : Sep 25, 2020, 10:12 PM IST

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ದೇಶಾದ್ಯಂತ ಜಾರಿಗೆ ತರಲು ಮುಂದಾಗಿದೆ. ಈ ಶಿಕ್ಷಣ ನೀತಿ‌ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಜೊತೆಗೆ ಶಿಕ್ಷಕರ ಬದುಕಿಗೂ ಒತ್ತು ನೀಡಲಾಗುತ್ತಿದೆ.

ಮುಂದಿನ 15 ವರ್ಷಗಳಲ್ಲಿ ಪದವಿ ಕಾಲೇಜುಗಳು ಸ್ವಾಯತ್ತತೆ ಸಾಧಿಸಲು ಇರುವ ಸವಾಲುಗಳೇನು?
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ವಿಶ್ವವಿದ್ಯಾಲಯಗಳಿಗೆ ಸಂಯೋಜಿತವಾಗಿರುವ ಎಲ್ಲ ಪದವಿ ಕಾಲೇಜುಗಳು ಮುಂದಿನ 15 ವರ್ಷಗಳಲ್ಲಿ ಸ್ವಾಯತ್ತತೆಯಾಗಿ ಪರಿವರ್ತನೆ ಆಗಬೇಕೆಂದು ಯೋಜಿಸಲಾಗಿದೆ. ಅಂದರೆ ಒಂದು ವಿಶ್ವ ವಿದ್ಯಾಲಯದಡಿ 100ಕ್ಕೂ ಹೆಚ್ಚು ಅಂಗಸಂಸ್ಥೆಗಳು ಕೆಲಸ ಮಾಡುತ್ತವೆ. ವಿವಿ ಸೂಚಿಸಿದಂತೆ ಪರೀಕ್ಷೆ, ಪಠ್ಯಕ್ರಮಗಳು ಕೋರ್ಸ್​​​​​​​ಗಳು ಇರಲಿದ್ದು, ಇದನ್ನೇ ಅಳವಡಿಸಿಕೊಳ್ಳಬೇಕಾಗುತ್ತೆ. ಇನ್ಮುಂದೆ ತಾಂತ್ರಿಕ, ಕಾನೂನು, ಆರೋಗ್ಯ ಎಂಬ ಹೀಗೆ ಪ್ರತಿಯೊಂದಕ್ಕೂ ವಿಶ್ವವಿದ್ಯಾಲಯಗಳು ಇರೋದಿಲ್ಲ. ಬದಲಿಗೆ ಇವೆಲ್ಲ ಸಮಗ್ರ ಉನ್ನತ ಶಿಕ್ಷಣದಲ್ಲಿ ಬರಲಿದೆ.
ಸ್ವಾಯತ್ತತೆಯಾಗಿ ರೂಪಾಂತರವಾಗಲು ಸಾಧ್ಯವಿದೆಯಾ?:
ಸ್ವಾಯತ್ತತೆಯಾಗಿ ರೂಪಾಂತರವಾಗಲು ಸಾಧ್ಯನಾ ಎಂಬ ಪ್ರಶ್ನೆ ಮೂಡದೇ ಇರೋಲ್ಲ. ಯಾಕೆಂದರೆ ಬಹುತೇಕ ಕಾಲೇಜುಗಳು ಸ್ವಂತ ಕಟ್ಟಡಗಳನ್ನು ಹೊಂದಿರದೇ ಇರುವುದನ್ನು ಗಮನಿಸಬಹುದು.‌ ಆದರೆ, ಆಟಾನಮಸ್ ಪಡೆಯಲು ಸ್ವಂತ ಕಟ್ಟಡ ಹೊಂದಿರಬೇಕು ಅಥವಾ ಕನಿಷ್ಠ ಪಕ್ಷ 30 ವರ್ಷ ಲೀಸ್​ಗೆ ಪಡೆದ ಕಟ್ಟಡ ಹೊಂದಿರಬೇಕು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆಯ ಕಾರ್ಯದರ್ಶಿ ಡಾ.ಆರ್​.ಎನ್​.ಶ್ರೀನಿವಾಸ ಗೌಡ, ಎಲ್ಲ ಕಾಲೇಜುಗಳು ಸ್ವಾಯತ್ತ ಪಡೆಯಲು ಅರ್ಹನಾ ಅಂದರೆ ಅಲ್ಲಿ ಕಾಡುವುದು ಮೂಲ ಸೌಕರ್ಯದ ಪ್ರಶ್ನೆ. ಕಾಲೇಜಿಗೆ ವಿದ್ಯಾರ್ಥಿಗಳನ್ನ ದಾಖಲಾತಿ ಮಾಡಿಕೊಳ್ಳುವ ಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯ ಇರಲಿದೆಯಾ ಎಂಬುದನ್ನು ಮನಗಾಣಬೇಕು.

ಎರಡನೇಯದಾಗಿ ಬೋಧಕ-ಬೋಧಕೇತರ ಸಿಬ್ಬಂದಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಯಾಕೆಂದರೆ ಬಹಳಷ್ಟು ಕಾಲೇಜಿನಲ್ಲಿ ಶೇ.50ರಷ್ಟು ಬೋಧಕರ ಕೊರತೆ ಇರೋದಿಲ್ಲ. ಇದರ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತೆ.

ಇದರ ಜೊತೆಗೆ ಶಿಕ್ಷಣದಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಅಳವಡಿಸಿಕೊಳ್ಳಬೇಕಾದರೆ ಇದಕ್ಕೆ ಬೇಕಾದ ಸೌಕರ್ಯ ಇದೆಯಾ? ಇದನ್ನ ಪೂರೈಸಲು ಆರ್ಥಿಕವಾಗಿ ಸದೃಢನಾ ಎಂಬುದನ್ನ ಪರಿಶೀಲಿಸಬೇಕಾಗುತ್ತೆ. ಇವೆಲ್ಲವನ್ನೂ ಸಾಧಿಸಿದರೆ 2035ರ ವೇಳೆಗೆ ಸ್ವಾಯತ್ತತೆ ಪಡೆಯಬಹುದಾಗಿದೆ ಎಂದಿದ್ದಾರೆ.


ABOUT THE AUTHOR

...view details