ಬೆಂಗಳೂರು: ಜುಲೈ 8 ಬುಧವಾರ ದಂದು ಬೆಳಗ್ಗೆ ಎಂಟು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಕಾವೇರಿ ಮೂರನೇ ಹಂತದ ನೀರಿನ ಸರಬರಾಜು ಸ್ಥಗಿತಗೊಳ್ಳಲಿದೆ.
ಜಲಮಂಡಳಿಯು ಯು.ಎಫ್.ಡಬ್ಲ್ಯೂ ಯೋಜನೆಯಡಿ, 700 ಮಿ.ಮೀ ವ್ಯಾಸದ ಜೋಡಣೆ ಹಾಗೂ ವಾಲ್ವ್ ಮತ್ತು ಬೃಹತ್ ನೀರಿನ ಹರಿವಿನ ಮಾಪನ (ಬಲ್ಕ್ ಫ್ಲೋ ಮೀಟರ್ಸ್) ಅಳವಡಿಸುವ ಕಾಮಗಾರಿ ಕೈಗೊಳ್ಳುವುದರಿಂದ ಎಂಟು ಗಂಟೆಗಳ ಕಾಲ ನೀರಿನ ಹರಿವು ಸ್ಥಗಿತಗೊಳ್ಳಲಿದೆ.
ಯಶವಂತಪುರ, ಮಲ್ಲೇಶ್ವರ, ಮತ್ತಿಕೆರೆ, ಶೇಷಾದ್ರಿಪುರ, ಶ್ರೀರಾಂಪುರ ಹಾಗೂ ಸುತ್ತಮುತ್ತಲಿನ ಪ್ರದೇಶ. ಹೆಬ್ಬಾಳ, ಸಂಜಯನಗರ, ಚಿಕ್ಕಪೇಟೆ, ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್, ಶಿವಾಜಿನಗರ, ಎಸ್ ಆರ್ ನಗರ, ಫ್ರೇಜರ್ ಟೌನ್ , ಪುಲಕೇಶಿನಗರ, ವಿಧಾನಸೌಧ ಹಾಗೂ ಸುತ್ತಲಿನ ಪ್ರದೇಶಗಳು.
ಇಂದಿರಾನಗರ, ಕಲ್ಲಹಳ್ಳಿ, ಶಾಂತಿ ನಗರ, ಜೀವನ್ ಭೀಮಾ ನಗರ , ಹಲಸೂರುಣ ದೊಮ್ಮಲೂರು, ಎಂಜಿ ರಸ್ತೆ, ಹನುಮಂತನಗರ, ಗಿರಿನಗರ, ಚಾಮರಾಜಪೇಟೆ, ಗವಿಪುರ , ಬ್ಯಾಟರಾಯನಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.