ಕರ್ನಾಟಕ

karnataka

ETV Bharat / city

ಬಿಬಿಎಂಪಿ ಬಜೆಟ್​ ಮಂಡನೆ ಸಿದ್ಧತೆ ಕುರಿತು ಬುಧವಾರ ಸಭೆ - ಉಪಮೇಯರ್ ಮೋಹನ್ ರಾಜು

ಬಜೆಟ್ ಮಂಡನೆ ಕುರಿತು ಈಗಾಗಲೇ ಒಂದು ಸಭೆ ನಡೆಸಲಾಗಿದ್ದು, ದಿನಾಂಕ ನಿಗದಿಪಡಿಸುವ ಬಗ್ಗೆ ಚರ್ಚಿಸಲಾಗಿದೆ. ಪಾಲಿಕೆ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿ, ಶೀಘ್ರವಾಗಿ ಬಜೆಟ್ ಮಂಡಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ತಿಳಿಸಿದರು.

Wednesday Meeting on Budget Presentation..Most Budget for Corona Emergency
ಬಿಬಿಎಂಪಿ ಬಜೆಡ್ ಮಂಡನೆ ಸಿದ್ಧತೆ ಕುರಿತು ಬುಧವಾರ ಸಭೆ..ಕೊರೊನಾ ಎಮರ್ಜೆನ್ಸಿಗೆ ಬಹುಪಾಲು ಬಜೆಟ್ ಸಾಧ್ಯತೆ

By

Published : Apr 13, 2020, 8:00 PM IST

ಬೆಂಗಳೂರು:ಸರ್ಕಾರದಿಂದ ಬಿಬಿಎಂಪಿ ಬಜೆಟ್ ಮಂಡನೆಗೆ ಅನುಮತಿ ಸಿಕ್ಕ ಕೂಡಲೇ ಮೇಯರ್ ಗೌತಮ್ ಕುಮಾರ್, ಉಪ ಮೇಯರ್ ಮೋಹನ್ ರಾಜು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಸುದ್ದಿಗೋಷ್ಠಿ ನಡೆಸಿದರು.

ಬಿಬಿಎಂಪಿ ಬಜೆಟ್​ ಮಂಡನೆ ಸಿದ್ಧತೆ ಕುರಿತು ಬುಧವಾರ ಸಭೆ

ಈ ವೇಳೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಬಜೆಟ್ ಮಂಡನೆ ಕುರಿತು ಈಗಾಗಲೇ ಒಂದು ಸಭೆ ನಡೆಸಲಾಗಿದೆ. ದಿನಾಂಕ ನಿಗದಿಪಡಿಸುವ ಬಗ್ಗೆ ಚರ್ಚಿಸಲಾಗಿದೆ. ಪಾಲಿಕೆ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿ, ಶೀಘ್ರವಾಗಿ ಬಜೆಟ್ ಮಾಡಲಾಗುವುದು. ಕೆಎಂಸಿ (ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್) ನಿಯಮದ ಪ್ರಕಾರ ಮೂರನೇ ಒಂದು ಭಾಗ ಸಭೆಯಲ್ಲಿ ಕೋರಂ ಇದ್ದರೆ ಮಾತ್ರ ಬಜೆಟ್ ಮಂಡನೆ ಸಾಧ್ಯ. ಆದ್ರೆ ಈಗಿರುವ ತುರ್ತು ಪರಿಸ್ಥಿತಿಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್​ ಮಂಡಿಸಲು ಸರ್ಕಾರ ಸೂಚಿಸಿದೆ. ಕೊರೊನಾ ವೈರಸ್​ಗೆ ಸಂಬಂಧಿಸಿದಂತೆ ಬಜೆಟ್​ನಲ್ಲಿ ಅನುದಾನ ಮೀಸಲಿಡಬೇಕಾಗುತ್ತದೆ. ಬೆಂಗಳೂರಿನ ವಿಚಾರವಾಗಿಯೂ ಉತ್ತಮ ಕಾರ್ಯಕ್ರಮ ನೀಡಲು ಬಜೆಟ್​ನಲ್ಲಿ ಅನುದಾನ ಮೀಸಲಿಡಲಾಗಿದೆ ಎಂದರು.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್​.ಶ್ರೀನಿವಾಸ್ ಮಾತನಾಡಿ, ಬಜೆಟ್ ಮೂಲಕ ನಗರಕ್ಕೆ ಮೂಲ ಸೌಕರ್ಯ ನೀಡಲಾಗುವುದು. ಕೊರೊನಾ ಸಮಸ್ಯೆಯಿಂದ ಬಜೆಟ್ ತಡವಾಗಿದೆ. ಸರ್ಕಾರಕ್ಕೆ ಮನವಿ ನೀಡಿ, ಇದೀಗ ಸರ್ಕಾರದ ನಿರ್ದೇಶನದ ಮೇರೆಗೆ ಬಜೆಟ್ ಮಂಡಿಸಲಾಗುತ್ತದೆ. ಬಜೆಟ್ ಮಂಡನೆಯಾದರಷ್ಟೇ ವೇತನ, ಪಿಂಚಣಿ ನೀಡಲು ಸಾಧ್ಯ ಎಂದರು.

ABOUT THE AUTHOR

...view details