ಬೆಂಗಳೂರು : ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೆಬ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಸಂಗ್ರಹಕ್ಕಾಗಿ ವೆಬ್ ಪೋರ್ಟಲ್ ಕಾರ್ಯಾರಂಭ
ಈ ವೆಬ್ ಪೋರ್ಟಲ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ವಿದೇಶಾಂಗ ಸಚಿವಾಲಯದ ಕಂಟ್ರೋಲ್ ರೂಂಗೆ ಕಳುಹಿಸಲಾಗುವುದು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿದಾರನ ಜೊತೆ ಮಾತುಕತೆ ನಡೆಸಲಿದೆ. ಜೊತೆಗೆ ಸದ್ಯದ ಸ್ಥಿತಿಗತಿ, ಹೆಚ್ಚುವರಿ ಮಾಹಿತಿಯನ್ನು ಕಲೆ ಹಾಕಲಿದೆ..
ಈ ವೆಬ್ ಪೋರ್ಟಲ್ ಮೂಲಕ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ಜನರ ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ. ವೆಬ್ ಪೋರ್ಟಲ್ ಯುಆರ್ಎಲ್- http://ukraine.karnataka.techನೋಡಲ್ ಅಧಿಕಾರಿ ಮನೋಜ್ ರಾಜನ್ ಮತ್ತು ತಂಡ ಕೇವಲ 12 ಗಂಟೆಯೊಳಗೆ ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಯಾವ ಮಾಹಿತಿ ನೀವು ನೀಡಬೇಕು ಹಾಗೂ ಏನೆಲ್ಲಾ ಮಾಹಿತಿ ಇರಲಿದೆ?
- ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಂಬಂಧಿಸಿದ ಕೆಲ ದಾಖಲೆಯ ಮಾಹಿತಿಯನ್ನ ನೀವು ನೀಡಬೇಕು. ಅಲ್ಲಿ ಸಿಲುಕಿರುವವರ ಜೊತೆಗಿನ ಸಂಬಂಧ, ಸಿಲುಕಿರುವ ಜನರ ಮಾಹಿತಿ ನೀಡಬೇಕು.
- ಈ ಪೋರ್ಟಲ್ನಲ್ಲಿ ವಿದೇಶಾಂಗ ಸಚಿವಾಲಯ ವೆಬ್‌ಸೈಟ್ ಮಾಹಿತಿ ಹಾಗೂ ಭಾರತ ಸರ್ಕಾರದಿಂದ ಸಂಗ್ರಹಿಸಿದ ಅಗತ್ಯ ಮಾಹಿತಿ ಇರಲಿದೆ.
- ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಉಕ್ರೇನ್ನಲ್ಲಿನ ಭಾರತೀಯ ದೂತವಾಸ, ಹೆಲ್ಪ್‌ಲೈನ್ ನಂಬರ್ ಹಾಗೂ ಇ-ಮೇಲ್ ಅಡ್ರೆಸ್ ಇರಲಿದೆ.
- ಸದ್ಯದ ಸುದ್ದಿಗಳು ಕೂಡ ಇರಲಿದೆ
ಈ ವೆಬ್ ಪೋರ್ಟಲ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ವಿದೇಶಾಂಗ ಸಚಿವಾಲಯದ ಕಂಟ್ರೋಲ್ ರೂಂಗೆ ಕಳುಹಿಸಲಾಗುವುದು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿದಾರನ ಜೊತೆ ಮಾತುಕತೆ ನಡೆಸಲಿದೆ. ಜೊತೆಗೆ ಸದ್ಯದ ಸ್ಥಿತಿಗತಿ, ಹೆಚ್ಚುವರಿ ಮಾಹಿತಿಯನ್ನು ಕಲೆ ಹಾಕಲಿದೆ.