ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ಕ್ರಿಕೆಟ್ನಲ್ಲಿ ದಕ್ಷಿಣ ಅಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಆಟಗಾರರು ವೇಗವಾಗಿ ಬೌಲಿಂಗ್ ಮಾಡಿದರೆ ನಾವೇನು ದಂಡ ಹಾಕೋದಿಲ್ಲ ಎಂದು ಬೆಂಗಳೂರು ನಗರ ಪೊಲೀಸರು ಟ್ವೀಟ್ ಮಾಡುವ ಮೂಲಕ ವಿನೂತನವಾಗಿ ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ.
ಸ್ಪೀಡ್ ಆಗಿ ಬೌಲಿಂಗ್ ಮಾಡಿದ್ರೆ ನಾವೇನೂ ದಂಡ ಹಾಕಲ್ಲ.. ಗಮನ ಸೆಳೆದ ಬೆಂಗಳೂರು ಪೊಲೀಸರ ಟ್ವೀಟ್.. - ಬೆಂಗಳೂರು ನಗರ ಪೊಲೀಸರು ಟ್ವೀಟ್
ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ಕ್ರಿಕೆಟ್ ಆರಂಭಕ್ಕೂ ಮುನ್ನ, ಭಾರತೀಯ ಬೌಲರ್ಗಳು ವೇಗವಾಗಿ ಬೌಲಿಂಗ್ ಮಾಡಿದರೆ ದಂಡ ವಿಧಿಸುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸರು ಟ್ವೀಟ್ ಮಾಡಿ ಟೀಂ ಇಂಡಿಯಾ ಆಟಗಾರರಿಗೆ ಶುಭಕೋರಿದ್ದಾರೆ.
ಪಂದ್ಯ ಆರಂಭಕ್ಕೂ ಮುನ್ನ ತನ್ನ ಅಧಿಕೃತ ಪೊಲೀಸ್ ಟ್ವೀಟ್ ಖಾತೆಯಲ್ಲಿ, ಭಾರತೀಯ ಬೌಲರ್ಗಳು ವೇಗವಾಗಿ ಬೌಲಿಂಗ್ ಮಾಡಿದರೆ ದಂಡ ವಿಧಿಸುವುದಿಲ್ಲ ಎಂದು ಟ್ವೀಟ್ ಮಾಡಿದೆ.
ಕೇಂದ್ರ ಮೋಟಾರು ವಾಹನ ಕಾಯ್ದೆ ಜಾರಿಯಾದಾಗಿನಿಂದ ದುಬಾರಿ ದಂಡಕ್ಕೆ ವಾಹನ ಸವಾರರು ಬಳಲಿ ಬೆಂಡಾಗಿದ್ದಾರೆ. ನಗರದ ಸವಾರರಿಗೂ ಸಹ ದಂಡದ ಹೆಚ್ಚಳದ ಬಿಸಿ ತಟ್ಟಿತ್ತು. ಹೊಸ ನಿಯಮದ ಪ್ರಕಾರ ವೇಗವಾಗಿ ವಾಹನ ಚಾಲನೆ ಮಾಡಿದರೆ ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು. ಹೊಸ ನಿಯಮ ಜಾರಿಯಾದ ಬಳಿಕ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಸುಮಾರು 3 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ. ಈ ನಡುವೆ ದುಬಾರಿ ದಂಡ ಇಳಿಕೆ ಮಾಡಬೇಕೆಂದು ಸಾರ್ವಜನಿಕರಿಂದ ತೀವ್ರ ವಿರೋಧ, ಒತ್ತಡಕ್ಕೆ ಮಣಿದ ಸರ್ಕಾರ, ದುಬಾರಿ ಜುಲ್ಮಾನೆ ಇಳಿಸಿ ಆದೇಶ ಹೊರಡಿಸಿತು.ಇವೆಲ್ಲದವರ ನಡುವೆ ಬೆಂಗಳೂರು ಪೊಲೀಸರು ಹೀಗೆ ತಮಾಷೆಯಾಗಿ ಟ್ವೀಟ್ ಮಾಡಿದ್ದು, ಇದಕ್ಕೆ ಟ್ವೀಟಿಗರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.