ಕರ್ನಾಟಕ

karnataka

ETV Bharat / city

ನಾಳೆಯೇ ಚುನಾವಣೆ ನಡೆದರೂ ನಾವು ಗೆಲ್ಲುತ್ತೇವೆ, ಎಲ್ಲರೂ ಒಗ್ಗಟ್ಟಾಗಿರಬೇಕು: ಸಿದ್ದರಾಮಯ್ಯ

ಎಲ್ಲರೂ ಸೇರಿ ಒಟ್ಟಾಗಿ ಚುನಾವಣೆ ಮಾಡೋಣ. ಯಾರಿಗೆ ಟಿಕೆಟ್ ಸಿಕ್ತು, ಸಿಗಲಿಲ್ಲ ಅಂತ ಯೋಚನೆ ಮಾಡುವುದಕ್ಕೆ ಹೋಗಬಾರದು. ಮೊದಲು ಚುನಾವಣೆ ಗೆಲ್ಲುವುದಕ್ಕೆ ಎಲ್ಲಾ ಪ್ರಯತ್ನ ಮಾಡಬೇಕು. ನಾಳೆಯೇ ಅಸೆಂಬ್ಲಿ ಡಿಸಾಲ್ವ್ ಮಾಡಿ ಚುನಾವಣೆಗೆ ಹೋದ್ರೂ ಗೆಲ್ಲುತ್ತೇವೆ. ಅಷ್ಟು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ, ನಮ್ಮ ಕಾರ್ಯಕ್ರಮ ಎಲ್ಲಾ ನಿಲ್ಲಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

we-will-win-if-tomorrow-election-comes
ಸಿದ್ದರಾಮಯ್ಯ

By

Published : Mar 9, 2021, 8:40 PM IST

ಬೆಂಗಳೂರು: ನಾಳೆಯೇ ವಿಧಾನ ಮಂಡಲ ವಿಸರ್ಜನೆ ಮಾಡಿ ಚುನಾವಣೆಗೆ ಹೋದ್ರೂ ನಾವು ಗೆಲ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆಯ ಮಾತುಗಳನ್ನಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ನೂರಕ್ಕೆ 200 ರಷ್ಟು ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಕ್ಕೆ ಬಂದಾಗ ನಿಮಗೂ ಸ್ಥಾನಮಾನ ಕೊಡ್ತೇವೆ. ಈಗ ಎಲ್ಲರೂ ಒಟ್ಟಾಗಿ ಪಕ್ಷಕ್ಕೆ ಕೆಲಸ ಮಾಡಿ. ಕೆಲಸ ಮಾಡಿದರೆ ನಾವೇ ಅಧಿಕಾರಕ್ಕೆ ಬರೋದು ಶತಸಿದ್ಧ. ಅಧಿಕಾರಕ್ಕೆ ಬಂದಮೇಲೆ ಬೇಕಾದ್ರೆ ಅಧಿಕಾರ ಹಂಚಿಕೊಳ್ಳೋಣ, ಅದಕ್ಕೂ ಮುನ್ನವೇ ನಾನು ನಾನು ಅನ್ನುವುದು ಬೇಡ ಎಂದು ಹೇಳಿದರು.

ನಾಳೆಯೇ ಚುನಾವಣೆ ನಡೆದರೂ ನಾವು ಗೆಲ್ಲುತ್ತೇವೆ, ಎಲ್ಲರೂ ಒಗ್ಗಟ್ಟಾಗಿರಬೇಕು

ಸಿಂದಗಿ ಉಪ ಚುನಾವಣೆಯನ್ನು ಗೆಲ್ಲಲೇ ಬೇಕು. ಇನ್ನು ನಮ್ಮ ಕ್ಯಾಂಡಿಡೆಟ್ ಯಾರು ಅಂತ ತೀರ್ಮಾನ ಮಾಡಿಲ್ಲ. ನಮ್ಮವರು ಕೂಡ ಕೋಪರೆಟ್ ಮಾಡಬೇಕು. ಎಲ್ಲರೂ ಸೇರಿ ಒಟ್ಟಾಗಿ ಚುನಾವಣೆ ಮಾಡೋಣ. ಯಾರಿಗೆ ಟಿಕೆಟ್ ಸಿಕ್ತು ಸಿಗಲಿಲ್ಲ ಅಂತ ಯೋಚನೆ ಮಾಡುವುದಕ್ಕೆ ಹೋಗಬಾರದು. ಮೊದಲು ಚುನಾವಣೆ ಗೆಲ್ಲುವುದಕ್ಕೆ ಎಲ್ಲಾ ಪ್ರಯತ್ನ ಮಾಡಬೇಕು. ನಾಳೆ ಅಸೆಂಬ್ಲಿ ಡಿಸಾಲ್ವ್ ಮಾಡಿ ಚುನಾವಣೆಗೆ ಹೋದ್ರು ಗೆಲ್ಲುತ್ತೇವೆ. ಅಷ್ಟು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ, ನಮ್ಮ ಕಾರ್ಯಕ್ರಮ ಎಲ್ಲಾ ನಿಲ್ಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಸಂಗಮೇಶ್ ಬಿಜೆಪಿಗೆ ಬರಲಿಲ್ಲವೆಂದು ಕೇಸ್​​ ಹಾಕಿದ್ದಾರೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೌರ್ಜನ್ಯ ನಡೆದಿದೆ. ನಮ್ಮ ಮುಖಂಡರ ಮೇಲೆ ಸುಳ್ಳು ಕೇಸ್ ಹಾಕ್ತಿದ್ದಾರೆ. ಶಾಂತಿಭಂಗ ಹೇಳಿಕೆ ಕೊಟ್ರೂ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕ್ತಿಲ್ಲ. ಕೊರೊನಾ ಸಂದರ್ಭದಲ್ಲಿ ಪದಾರ್ಥ ಲೂಟಿ ಮಾಡಿದ್ರು. ಅವರ ಮೇಲೆ ದೂರು ಕೊಟ್ರೂ ಕೇಸ್ ಹಾಕ್ತಿಲ್ಲ. ನಮ್ಮ ಶಾಸಕ ಸಂಗಮೇಶ್ ಬಿಜೆಪಿಗೆ ಬರಲಿಲ್ಲವೆಂದು ಕೇಸ್​​ ಹಾಕಿದ್ದಾರೆ. ಹಿಂದೆಯೂ ಬಿಜೆಪಿಗೆ ಬರುವಂತೆ ಒತ್ತಡ ಹಾಕಿದ್ದರು. ಈಗಲೂ ‌ಮತ್ತೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ಸದನದಲ್ಲಿ ಗಾಯ ತೋರಿಸಲು ಶರ್ಟ್ ಬಿಚ್ಚಿದ್ದಾರೆ. ಅದಕ್ಕೆ ಅಸಭ್ಯ ವರ್ತನೆ ಎಂದು ಅಮಾನತು ಮಾಡಿದ್ದಾರೆ. ಸ್ಪೀಕರ್ ಕೂಡ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ. ಹೀಗಾಗಿ 13 ರಂದು ನಾವು ಪ್ರತಿಭಟನೆ ಮಾಡ್ತೇವೆ. ಶಿವಮೊಗ್ಗ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಬಿಜೆಪಿ ಸರ್ಕಾರ ಬಂದ ಮೇಲೆ ಅಧಿಕಾರಗಳನ್ನು ಬಳಸಿಕೊಂಡಿದ್ದಾರೆ. ಬಳಸಿಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ. ಸರ್ಕಾರಿ ವಸ್ತುಗಳ ಮೇಲೆ ತಮ್ಮ ಹೆಸರು ಹಾಕಿಕೊಂಡಿದ್ದರು. ನಾವು ಕಂಡು ಹಿಡಿದು ಕೊಟ್ಟರು ಕ್ರಮ ತೆಗೆದುಕೊಂಡಿಲ್ಲ. ವಿವಾದದ ಹೇಳಿಕೆ ನೀಡಿದ್ರೂ ಕ್ರಮ ತೆಗೆದುಕೊಂಡಿಲ್ಲ. ಆದ್ರೆ ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡ್ತಾರೆ ಎಂದು ಕಿಡಿಕಾರಿದರು.

ABOUT THE AUTHOR

...view details