ಕರ್ನಾಟಕ

karnataka

ETV Bharat / city

ಇಂಡಿಯಾವನ್ನು ಪಾಕಿಸ್ತಾನ ಮಾಡಲು ಬಿಡುವುದಿಲ್ಲ, ಭಾರತವನ್ನು ಭಾರತವಾಗೇ ಉಳಿಸುತ್ತೇವೆ: ಸಚಿವ ಕೆ.ಎಸ್.ಈಶ್ವರಪ್ಪ - session at Belgaum

ಪಾಕಿಸ್ತಾನದಲ್ಲಿ ಶೇ 24 ರಷ್ಟಯ ಹಿಂದೂಗಳಿದ್ದರು, ಆ ಸಂಖ್ಯೆ ಈಗ ಕೇವಲ ಶೇ 3ಕ್ಕೆ ಆಗಿದ್ದಾರೆ ಪಾಕಿಸ್ತಾನದಲ್ಲಿ ಮತಾಂತರ ಹೆಸರಲ್ಲಿ ಕೊಲೆ ಸುಲಿಗೆಯಾಗ್ತಿದೆ. ಆ ರೀತಿ ನಮ್ಮ ದೇಶ ದಲ್ಲಿ ನಡೆಯೋಕೆ ಬಿಡೋದಿಲ್ಲ. ಮುಗ್ದರನ್ನ ಮತಾಂತರ ಮಾಡೋದಕ್ಕೆ ಬಿಡೋದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

we-will-save-india-as-indian-minister-ks-eshwarappa
ಸಚಿವ ಕೆ.ಎಸ್.ಈಶ್ವರಪ್ಪ

By

Published : Dec 13, 2021, 3:01 PM IST

ಬೆಳಗಾವಿ: ಭಾರತವನ್ನ ಪಾಕಿಸ್ತಾನವಾಗಲು ಬಿಡೋದಿಲ್ಲ. ಭಾರತವನ್ನು ಭಾರತವಾಗೇ ಉಳಿಸಿಕೊಳ್ಳುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಶೇ 24 ರಷ್ಟು ಹಿಂದುಗಳು ಈಗ ಶೇ 3ರಷ್ಟು ಆಗಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆಶಿಗೆ ನಾನು ಪ್ರಶ್ನೆ ಮಾಡುತ್ತೇನೆ. ಭಾರತವನ್ನ ಪಾಕಿಸ್ತಾನ ಮಾಡೋಕೆ ಹೊರಟಿದ್ದೀರಾ?. ಪಾಕಿಸ್ತಾನದಲ್ಲಿ ಮತಾಂತರ ಹೆಸರಲ್ಲಿ ಕೊಲೆ ಸುಲಿಗೆಯಾಗ್ತಿದೆ. ಆ ರೀತಿ ನಮ್ಮ ದೇಶ ದಲ್ಲಿ ನಡೆಯೋಕೆ ಬಿಡೋದಿಲ್ಲ. ಮುಗ್ದರನ್ನ ಮತಾಂತರ ಮಾಡೋದಕ್ಕೆ ಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಸ್ಲಿಂ ಮತ್ತು ಕ್ರಿಶ್ಚಿಯನ್ ವೋಟಾಗಿ ಕಾಂಗ್ರೆಸ್ ಪಕ್ಷ ಅವರನ್ನು ತೃಪ್ತಿಗೊಳಿಸುವ ಕೆಲಸ ಮಾಡ್ತಿದೆ ಅಷ್ಟೇ. ಇದಕ್ಕಾಗಿ ಕಾಂಗ್ರೆಸ್​​ ಅನ್ನು ಜನರು ಮೂಲೆಗುಂಪು ಮಾಡಿದ್ದಾರೆ. ಬೇಕಾದರೆ ಡಿಕೆಶಿ ಮತ್ತು ಸಿದ್ದರಾಮಯ್ಯ ನನ್ನ ಜೊತೆ ಬರಲಿ. ಹಿಂದೂ ಯುವತಿಯನ್ನ ಹೇಗೆ ಯಾವ ರೀತಿ ಮತಾಂತರ ಮಾಡಿ, ಲವ್ ಜಿಹಾದ್ ಮಾಡ್ತಿದ್ದಾರೆ ಅನ್ನೋದನ್ನ ತೊರಿಸುತ್ತೇವೆ‌. ಮುಸ್ಲಿಂರು ಖುಷಿಯಾಗಲಿ ಅಂತ ಈಗ ಕಾಯ್ದೆಯನ್ನ ರಾಜಕೀಯ ಗಿಮಿಕ್ ಎಂದು ಕಾಂಗ್ರೆಸ್​​ನವರು ಹೇಳ್ತಿದ್ದಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ:ನಟ ಪುನೀತ್​ಗೆ ಪುನೀತ್ ಮಾತ್ರ ಸಾಟಿ.. ಹೆಲಿಕಾಪ್ಟರ್ ದುರಂತದ ತನಿಖೆಯಾಗಲಿ: ಸಿದ್ದರಾಮಯ್ಯ

ಆಸೆ ಆಮಿಷ ಒಡ್ಡಿ ಮಹಿಳೆಯರನ್ನು ಮತಾಂತರ‌ ಮಾಡಿ, ವಿದೇಶಕ್ಕೆ ಮಾರಾಟ ಮಾಡುವ ಉದಾಹರಣೆ ಬೇಕಷ್ಟಿದೆ. ಕಾಂಗ್ರೆಸ್ ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ, ಮುಸ್ಲಿಂರನ್ನು ತೃಪ್ತಿ ಪಡಿಸಲು ಹೋಗಿ ನಿರ್ನಾಮ ಆಗುತ್ತಿದ್ದಾರೆ. ಹಿಂದೂಗಳ ಸಂಪೂರ್ಣ ರಕ್ಷಣೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮತಾಂತರ ಮಾಡಲು ಬಿಡುವುದಿಲ್ಲ.

ಹಿಂದೂ ಧರ್ಮವನ್ನು ನಾವು ರಕ್ಷಿಸುತ್ತೇವೆ ಎಂದರು. ರಾಹುಲ್ ಗಾಂಧಿ ನಾನು ಹಿಂದು ಅಂದಿರೋದು ಸಂತೋಷ. ಹಿಂದುತ್ವ ಅಲ್ಲ ಅನ್ನೋದು ಸರಿಯಲ್ಲ. ಸುಪ್ರೀಂಕೋರ್ಟ್ ಹಿಂದುತ್ವ ಒಂದು ಧರ್ಮ ಅಲ್ಲ ಎಂದು ತೀರ್ಪು ಕೊಟಿದೆ‌. ಹಾಗಿದ್ರೆ ಸುಪ್ರೀಂಕೋರ್ಟ್ ತೀರ್ಪನ್ನೇ ಪ್ರಶ್ನೆ ಮಾಡ್ತೀರಾ? ಎಂದು ಪ್ರಶ್ನಿಸಿದರು.

ABOUT THE AUTHOR

...view details