ಕರ್ನಾಟಕ

karnataka

ETV Bharat / city

ವಿಶ್ವಾಸಮತದಲ್ಲಿ ಗೆದ್ದೇ ಗೆಲ್ಲುತ್ತೇವೆ: ನಾರಾಯಣಸ್ವಾಮಿ, ಶಿವನಗೌಡ ನಾಯಕ್ ವಿಶ್ವಾಸ - Devanahalli

ರಾಜ್ಯದ ರೈತನ ಮಗ ಸಿಎಂ ಆಗ್ತಿರೋದು ಸಂತಸದ ವಿಚಾರ.‌ ಬಡವರ, ಶೋಷಿತರ, ದಲಿತರ ಏಳಿಗೆಗೆ ಬಿಎಸ್​ವೈ ಶ್ರಮಿಸಿದ್ದಾರೆ. ಬಿಎಸ್​ವೈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಾನು ಭಾಗಿಯಾಗುತ್ತೇನೆ. ವಿಶ್ವಾಸಮತಯಾಚನೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಸಂಸದ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿ.ಎಸ್ ಯಡಿಯೂರಪ್ಪನವರು ಪ್ರಮಾಣ ವಚನ ಕುರಿತು ನಾರಾಯಣಸ್ವಾಮಿ, ಶಿವನಗೌಡ ನಾಯಕ್ ಪ್ರತಿಕ್ರಿಯೆ

By

Published : Jul 26, 2019, 6:12 PM IST

ಬೆಂಗಳೂರು: ಬಿ.ಎಸ್ ಯಡಿಯೂರಪ್ಪನವರು ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಬಹುಮತ ಸಾಬೀತುಪಡಿಸುವಲ್ಲಿ ನಾವು ಗೆದ್ದೇ ಗೆಲ್ತಿವಿ ಎಂದು ಸಂಸದ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿ.ಎಸ್ ಯಡಿಯೂರಪ್ಪನವರು ಪ್ರಮಾಣ ವಚನ ಕುರಿತು ನಾರಾಯಣಸ್ವಾಮಿ, ಶಿವನಗೌಡ ನಾಯಕ್ ಪ್ರತಿಕ್ರಿಯೆ

ರಾಜ್ಯದ ರೈತನ ಮಗ ಸಿಎಂ ಆಗ್ತಿರೋದು ಸಂತಸದ ವಿಚಾರ.‌ ಬಡವರ, ಶೋಷಿತರ, ದಲಿತರ ಏಳಿಗೆಗೆ ಬಿಎಸ್​ವೈ ಶ್ರಮಿಸಿಲಿದ್ದಾರೆ. ಬಿಎಸ್​ವೈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಾನು ಭಾಗಿಯಾಗುತ್ತೇನೆ. ವಿಶ್ವಾಸಮತಯಾಚನೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಅಲ್ಲದೇ ದೇಶದಲ್ಲಿ ಬದಲಾವಣೆಯಾದಂತೆ ರಾಜ್ಯದಲ್ಲೂ ಬದಲಾವಣೆಯಾಗಬೇಕು ಅನ್ನೋದು ಜನರ‌‌ ನಿರೀಕ್ಷೆ ಎಂದರು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಶಿವನಗೌಡ ನಾಯಕ್, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉತ್ತಮ‌ ಹಾಗೂ ಸ್ಥಿರ ಸರ್ಕಾರ ನೀಡಲಿದ್ದಾರೆ. ಬಿಎಸ್​ವೈ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವುದು ರಾಜ್ಯದ ಜನರಿಗೆ ಸಂತೋಷದ ವಿಚಾರ. ಶಾಸಕಾಂಗ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗಿದೆ. ನಾಳೆಯಿಂದ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಳ್ಳಲಿವೆ ಎಂದರು.

ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕಾರದ ಹಿನ್ನಲೆ ಬಿಜೆಪಿ ಎಂಪಿಗಳು ಮತ್ತು ಎಂಎಲ್​ಎಗಳು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ.

For All Latest Updates

TAGGED:

Devanahalli

ABOUT THE AUTHOR

...view details