ಬೆಂಗಳೂರು:ಈ ಹಿಂದೆ ಹೇಗೆ ವ್ಯಾಪಾರ ನಡೆಯುತಿತ್ತೋ ಹಾಗೆಯೇ ವ್ಯಾಪಾರ ನಡೆಯಬೇಕು. ಯಾವುದೇ ವಿಚಾರದಲ್ಲಿ ಕೋಮು ಗಲಭೆ ಮಾಡುವುದಕ್ಕೆ ನಾವು ಬೀಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಕರಗ ಉತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಮುಸ್ಲಿಂ ಮಾವು ವ್ಯಾಪಾರಿಗಳಿಗೆ ನಿರ್ಬಂಧ ಸಂಬಂಧ ಪ್ರತಿಕ್ರಿಯಿಸಿ, ಇದು ಒಳ್ಳೆಯ ಬೆಳವಣಿಗೆ ಅಲ್ಲ. ರೈತರ ಹಣ್ಣುಗಳನ್ನು ಯಾರು ಬೇಕಾದರೂ ಖರೀದಿ ಮಾಡಬಹುದು. ಇದರಲ್ಲಿ ಯಾವುದೇ ಗೊಂದಲ್ಲ ಇಲ್ಲ ಎಂದರು.