ಕರ್ನಾಟಕ

karnataka

ETV Bharat / city

ಜನರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ, ಕೋವಿಡ್ ಹೆಚ್ಚಾಗದಂತೆ ಕ್ರಮ: ಸಿಎಂ ಬೊಮ್ಮಾಯಿ - ಕರ್ನಾಟಕ ಕರ್ಫ್ಯೂ

ಇಂದು ಸಂಜೆ ಸಭೆ ಇದೆ. ಕೋವಿಡ್ ನಿರ್ವಹಣೆಯಲ್ಲಿ ಹಲವಾರು ಬದಲಾವಣೆ ಮಾಡುವ ಚಿಂತನೆ ಇದೆ. ಸಭೆಯ ನಂತರ ಉಳಿದ ಮಾಹಿತಿ ನೀಡುವುದಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

By

Published : Aug 14, 2021, 11:35 AM IST

Updated : Aug 14, 2021, 11:49 AM IST

ಬೆಂಗಳೂರು: ಜನರಿಗೆ ತೊಂದರೆ ಕೊಡೋದು ನಮ್ಮ ಉದ್ದೇಶ ಅಲ್ಲ, ಆದರೆ ಕೋವಿಡ್ ಹೆಚ್ಚಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಇವತ್ತು ಕೋವಿಡ್ ಪರಿಸ್ಥಿತಿ ಇದೆ. ಕೋವಿಡ್ ನಿರ್ವಹಣೆಯಲ್ಲಿ ಹಲವಾರು ಬದಲಾವಣೆ ಮಾಡುವ ಚಿಂತನೆ ಇದೆ. Prevention is Better Than Cure ಎಂದು ತಿಳಿಸಿದರು. ನಾಳೆ 75 ನೇ ವರ್ಷದ ಸ್ವಾತಂತ್ರ್ಯ ದಿನ ಆಚರಣೆ ಸೌಭಾಗ್ಯ ಬಂದಿದೆ. ಹಲವು ಸವಾಲುಗಳನ್ನು ರಾಜ್ಯ ಎದುರಿಸಿದೆ. ಹಲವು ಸವಾಲೆದುರಿಸಿ ಇಡೀ ದೇಶಕ್ಕೆ ನಮ್ಮ ರಾಜ್ಯ ದೇಶಕ್ಕೆ ಮಾದರಿಯಾಗಿದೆ. ಕೋವಿಡ್ ಸಂದರ್ಭ ಇದೆ ಇವತ್ತು. ಕೋವಿಡ್ ನಿರ್ವಹಣೆಯ ಅನುಭವದ ಹಿನ್ನೆಲೆಯಲ್ಲಿ ಹಲವು ಬದಲಾವಣೆ ಮಾಡುವ ಚಿಂತನೆ ಇದೆ. ಕೊರೊನಾ ಹೆಚ್ಚಾದಾಗ ಕ್ರಮ ಕೈಗೊಳ್ಳುವ ಬದಲು ಮುಂಚೆಯೇ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು.

ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ನಾಳೆ ಕೋವಿಡ್ ನಿಯಮಗಳನ್ವಯ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ. ಕೋವಿಡ್ ನಿಯಂತ್ರಣ ‌ಮಾಡಲು ಅನೇಕ ತಜ್ಞರು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ, ಮೋದಿ ಅವರು, ಐಸಿಎಂಆರ್ ಸಲಹೆ ನೀಡಿದ್ದಾರೆ. ಇಂದು ಸಂಜೆ ಸಭೆ ಇದೆ. ವೈಜ್ಞಾನಿಕವಾಗಿ ಚಿಂತನೆ ಮಾಡಿ ಚರ್ಚೆ ಮಾಡುತ್ತೇವೆ. ಸಂಜೆ ಸಭೆಯ ನಂತರ ಉಳಿದ ವಿಚಾರ ತಿಳಿಸುತ್ತೇನೆ ಎಂದು ಹೇಳಿದರು.

(ಕೋವಿಡ್ ಲಸಿಕೆ ಅಭಾವ : 3 ದಿನಗಳ ಬಳಿಕ ಕೇವಲ 50 ಸಾವಿರ ಡೋಸ್ ವಿತರಣೆ)

Last Updated : Aug 14, 2021, 11:49 AM IST

ABOUT THE AUTHOR

...view details