ಕರ್ನಾಟಕ

karnataka

ETV Bharat / city

ಸಿಎಂ ಹೇಳಿರುವುದಕ್ಕೆ ನಮ್ಮ ಸಹಮತ ಇದೆ: ಕಂದಾಯ ಸಚಿವ ಆರ್‌.ಅಶೋಕ್ - 26ರಂದು ಸಿಎಂ ರಾಜೀನಾಮೆ

ಹೈಕಮಾಂಡ್ ಸೂಚನೆಯಂತೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇನೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರಕ್ಕೆ ನಮ್ಮ ಸಹಮತ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

we-consent-on-what-cm-said-today
ಕಂದಾಯ ಸಚಿವ ಅಶೋಕ್

By

Published : Jul 22, 2021, 3:27 PM IST

ಬೆಂಗಳೂರು: ಜುಲೈ 26ರ ಕಾರ್ಯಕ್ರಮದ ಬಳಿಕ ಹೈಕಮಾಂಡ್ ಸೂಚನೆಯಂತೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇನೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರಕ್ಕೆ ನಮ್ಮ ಸಹಮತ ಇದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಕಂದಾಯ ಸಚಿವ ಆರ್‌.ಅಶೋಕ್ ಹೇಳಿಕೆ

ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಸೂಚನೆಯಂತೆ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಈವರೆಗೂ ವರಿಷ್ಠರಿಂದ ಯಾವುದೇ ಸಂದೇಶ ಬಂದಿಲ್ಲ. ಜುಲೈ 26ರಂದು ಯಡಿಯೂರಪ್ಪನವರು ಹೇಳಿದ ಹಾಗೆ ಕೇಂದ್ರದ ನಾಯಕರ ಜೊತೆ ಚರ್ಚಿಸುತ್ತಾರೆ ಎಂದರು.

ಇದನ್ನೂ ಓದಿ: ರಾಜೀನಾಮೆ ಸುಳಿವು ನೀಡಿದ್ರಾ ಬಿಎಸ್​​ವೈ..? ಜು26ರ ಬಳಿಕ ಹೈಕಮಾಂಡ್ ಸೂಚನೆಯಂತೆ ಮುಂದಿನ ಕಾರ್ಯ ಎಂದ ಸಿಎಂ

ಕೇಂದ್ರ ಏನೇ ಹೇಳಿದರೂ ಬಿಎಸ್​​ವೈ ಹಾಗೂ ನಾವು ತಲೆಬಾಗುತ್ತೇವೆ. ಸಿಎಂ ಬದಲಾವಣೆಯಿಂದ ನಿಮಗೆ ಬೇಸರ ಆಗುತ್ತಿದೆಯಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶೋಕ್‌, ಬಿಜೆಪಿ ಸರ್ಕಾರಕ್ಕೆ ಎರಡು ವರ್ಷದ ತುಂಬಿದ ಸಂಭ್ರಮದಲ್ಲಿದ್ದೇನೆ ಎಂದಷ್ಟೇ ಹೇಳಿದರು.

ABOUT THE AUTHOR

...view details