ಬೆಂಗಳೂರು :ಕೋವಿಡ್ ಸಂಪೂರ್ಣ ಕಡಿಮೆ ಆಗಿದೆ ಅಂತಾ ನಾನು ಹೇಳೋದಿಲ್ಲ. ನಮ್ಮ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕಾಕರಣ ಆಗಿದೆ. ಹಾಗಾಗಿ, ನಾವು ಸ್ವಲ್ಪ ನೆಮ್ಮದಿಯಾಗಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೊಸ ಕೊರೊನಾ ಪ್ರಕರಣ ಕಡಿಮೆ ಆಗ್ತಿವೆ. ಹೀಗಾಗಿ, ಕರ್ನಾಟಕ ಕೊರೊನಾ ಮುಕ್ತ ಆಗ್ತಿದ್ಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಕೋವಿಡ್ ಒಂದು ರಾಜ್ಯಕ್ಕೆ, ಒಂದು ದೇಶಕ್ಕೆ ಸೀಮಿತವಾಗಿಲ್ಲ. ವಿಶ್ವದಲ್ಲೇ ಸಾಂಕ್ರಾಮಿಕ ರೋಗ ಬಂದಿದೆ.
ವಿಶ್ವದಿಂದ ಸಂಪೂರ್ಣವಾಗಿ ಕೋವಿಡ್ ಹೊರ ಹಾಕುವವರೆಗೂ ಕೊವಿಡ್ ಮುಕ್ತ ಅಂತಾ ಹೇಳೋಕಾಗಲ್ಲ. ನಮ್ಮ ರಾಜ್ಯ, ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕಾಕರಣ ಆಗಿದೆ. ಹಾಗಾಗಿ, ನಾವು ಸ್ವಲ್ಪ ನೆಮ್ಮದಿಯಾಗಿದ್ದೇವೆ ಎಂದರು.