ಸದನ ಅಂದ್ರೆ ಸ್ಕೂಲ್ ಅಲ್ಲ, ನಾವೇನು ಶಾಲಾ ಮಕ್ಕಳಲ್ಲ: ಡಿಕೆಶಿ
ಸದನ ಅಂದ್ರೆ ಸ್ಕೂಲ್ ಅಲ್ಲ, ನಾವೇನು ಶಾಲಾ ಮಕ್ಕಳಲ್ಲ ಎಂದು ರಾಜ್ಯಪಾಲರ ಜಂಟಿ ಭಾಷಣಕ್ಕೆ ಅಡೆತಡೆ ಮಾಡಿದರೆ ಅಮಾನತು ಮಾಡುವ ಎಚ್ಚರಿಕೆ ನೀಡಿರುವ ಸ್ಪೀಕರ್ ನಡೆಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದನ ಅಂದ್ರೆ ಸ್ಕೂಲ್ ಅಲ್ಲ, ನಾವೇನು ಶಾಲಾ ಮಕ್ಕಳಲ್ಲ: ಡಿಕೆಶಿ ಕಿಡಿ
ಬೆಂಗಳೂರು: ಸದನ ಅಂದ್ರೆ ಸ್ಕೂಲ್ ಅಲ್ಲ, ನಾವೇನು ಶಾಲಾ ಮಕ್ಕಳಲ್ಲ ಎಂದು ರಾಜ್ಯಪಾಲರ ಜಂಟಿ ಭಾಷಣಕ್ಕೆ ಅಡೆತಡೆ ಮಾಡಿದರೆ ಅಮಾನತು ಮಾಡುವ ಎಚ್ಚರಿಕೆ ನೀಡಿರುವ ಸ್ಪೀಕರ್ ನಡೆಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರಿಗೆಲ್ಲ ಒಳ್ಳೆದಾಗಲಿ:ಸಚಿವ ಸಂಪುಟ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರ್ಯಾರು ಏನನ್ನ ಬಯಸಿದ್ರು ಅದು ಆಗಿದೆ. ನಾನು ಅಸೆಂಬ್ಲಿಯಲ್ಲಿ ಹೇಳಿದಂತೆ ನಡೆದಿದೆ. ಪಾಪ ನೋಡೋಣ, ಏನೇನು ಆಸೆ ಇಟ್ಕೊಂಡಿದ್ರು, ಏನಾಗುತ್ತೆ ಅಂತ. ಅವರಿಗೆಲ್ಲ ಒಳ್ಳೆದಾಗಲಿ ಎಂದು ವ್ಯಂಗ್ಯವಾಡಿದರು.
ರಸ್ತೆಗೆ ತರಬೇಡಿ:ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಬೀದಿಯಲ್ಲಿ ಮಾತನಾಡಲ್ಲ. ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಂತಿಲ್ಲ. ಕಾಂಗ್ರೆಸ್ನಲ್ಲಿ ನಾಯಕರಿಲ್ಲ ಅಂತ ಯಾರು ಹೇಳಿದ್ದು? ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವನ್ನು ರಸ್ತೆಗೆ ತರಬೇಡಿ ಎಂದು ಮನವಿ ಮಾಡಿದರು.
ಇಡೀ ವಿಶ್ವದಲ್ಲೇ ಭಾರತಕ್ಕೆ ಕಳಂಕ ಬರುತ್ತಿದೆ:ಕೆಲವರು ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡ್ತಿದ್ದಾರೆ, ಅವರು ಅಲ್ಲಿ ತಲೆತಗ್ಗಿಸುವಂತಾಗಿದೆ ಎಂದು ಇದೇ ವೇಳೆ ಕಿಡಿಕಾರಿದರು. ಇಂತಹ ಸಂದರ್ಭದಲ್ಲಿ ಬಜೆಟ್‌ನಲ್ಲಿ ಏನ್ ಸಿಗುತ್ತೋ ನೋಡೋಣ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಇದ್ರೆ ಅನುಕೂಲ ಅಂತಿದ್ರು. ಆದ್ರೆ ಬೇರೆ ರಾಜ್ಯಗಳಿಗೆ ಸಿಕ್ಕಿದ ಪ್ರೋತ್ಸಾಹ, ಅನುದಾನ ಸಿಕ್ಕಿಲ್ಲ. ನಾಳೆ ಏನು ಸಿಗುತ್ತೋ ನೋಡೋಣ ಎಂದರು.