ನಾವು ಆಪರೇಷನ್ ಮಾಡಿಲ್ಲ, ಬಿಜೆಪಿಗೆ ರೀವರ್ಸ್ ಆಪರೇಷನ್ ಭಯವಿಲ್ಲ.. ಶಾಸಕ ಎಸ್.ಆರ್.ವಿಶ್ವನಾಥ್ - ರಮಡ ರೆಸಾರ್ಟ್
ನಮ್ಮ ಪಕ್ಷಕ್ಕೆ ಯಾವುದೇ ರೀವರ್ಸ್ ಆಪರೇಷನ್ ಭಯವಿಲ್ಲ. ಪಕ್ಷದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ಒಂದೆಡೆ ಸೇರಿದ್ದೇವೆ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
vishwanath
ಬೆಂಗಳೂರು: ನಾವು ಯಾವುದೇ ಆಪರೇಷನ್ ಮಾಡಿಲ್ಲ. ಹೀಗಾಗಿ, ನಮ್ಮ ಪಕ್ಷಕ್ಕೆ ಯಾವುದೇ ರೀವರ್ಸ್ ಆಪರೇಷನ್ ಭಯವಿಲ್ಲ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಬಹುಮತ ಸಾಬೀತುಪಡಿಸಲು ದಿನಾಂಕ ಕೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಆಗುಹೋಗುಗಳ ಚರ್ಚೆಗೆ ಒಂದೆಡೆ ಇರಬೇಕೆಂಬ ನಿಟ್ಟಿನಲ್ಲಿ ಒಂದೆಡೆ ಸೇರಿದ್ದೇವೆ ಹೊರತು, ರೀವರ್ಸ್ ಆಪರೇಷನ್ ಭಯದಿಂದಲ್ಲ. ಮೈತ್ರಿ ಪಕ್ಷಗಳು ಆಪರೇಷನ್ ಕನಸು ಕಂಡಿದ್ದರೆ ಅದು ಅವರ ಕನಸು ಎಂದು ಹೇಳಿದರು.
ಒಟ್ಟು 98 ಶಾಸಕರು ರೆಸಾರ್ಟ್‌ಗೆ ಬಂದಿಳಿದಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ ಸೇರಿದಂತೆ ಹಿರಿಯ ಶಾಸಕರು 1ಗಂಟೆಗೆ ಬಂದಿಳಿಯಲಿದ್ದಾರೆ. ಸಾಯಿಲೀಲಾ ಪ್ಯಾಲೇಸ್‌ನಲ್ಲಿ 25 ರೂಮ್ಗಳನ್ನು ಬುಕ್ ಮಾಡಲಾಗಿದೆ. ಮೂರು ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. 105ಜನ ಶಾಸಕರು ಇಲ್ಲಿ ಸೇರುತ್ತೇವೆ ಎಂದರು.
Last Updated : Jul 12, 2019, 11:16 PM IST