ಕರ್ನಾಟಕ

karnataka

ETV Bharat / city

ಟಿಪ್ಪು ಜಯಂತಿ ಆಚರಿಸುವ ಹೇಳಿಕೆ, ಶರತ್ ಬಚ್ಚೇಗೌಡ ವಿರುದ್ಧ ಕ್ರಮ: ಅಶ್ವಥ್​ ನಾರಾಯಣ್ - Karnataka political development

ಟಿಪ್ಪು ಜಯಂತಿ ಆಚರಿಸುವುದಾಗಿ ಹೇಳಿಕೆ ನೀಡಿರುವ ಬಿಜೆಪಿ ಟಿಕೆಟ್​ ಆಕಾಂಕ್ಷಿ ಶರತ್ ಬಚ್ಚೇಗೌಡ ಅವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ವಕ್ತಾರ ಅಶ್ವಥ್​ ನಾರಾಯಣ್ ಹೇಳಿದ್ದಾರೆ.

ಅಶ್ವತ್ಥನಾರಾಯಣ್

By

Published : Oct 25, 2019, 5:41 PM IST

ಬೆಂಗಳೂರು:ಟಿಪ್ಪು ಜಯಂತಿ ಆಚರಿಸುವುದಾಗಿ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಶಿಸ್ತು ಸಮಿತಿ‌ ಹೊಸಕೋಟೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಶರತ್ ಬಚ್ಚೇಗೌಡ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ವಕ್ತಾರ ಅಶ್ವಥ್​ ನಾರಾಯಣ್ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶರತ್ ಬಚ್ಚೇಗೌಡ ಹೇಳಿಕೆ ವೈಯಕ್ತಿಕವಾದದ್ದು. ಆದರೂ ಪಕ್ಷ ಅದನ್ನು ಒಪ್ಪುವುದಿಲ್ಲ. ಶಿಸ್ತು ಸಮಿತಿ ಮೂಲಕ ಅವರಿಂದ ವಿವರಣೆ ಪಡೆಯುತ್ತೇವೆ‌. ಟಿಪ್ಪು ಜಯಂತಿ ಆಚರಿಸುವುದನ್ನು ಬಿಜೆಪಿ ಒಪ್ಪುವುದಿಲ್ಲ‌ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ್

ಪಕ್ಷದ ವೇದಿಕೆ, ಪಕ್ಷದ ನಾಯಕರ ಸಮ್ಮುಖದಲ್ಲಾಗಲೀ ಅವರು ಈ ಹೇಳಿಕೆ ನೀಡಿಲ್ಲ. ಆದರೂ ಅವರು ಪಕ್ಷದ ಕಾರ್ಯಕರ್ತ. ಹಾಗಾಗಿ ಪಕ್ಷ ವಿವರಣೆ ಪಡೆದುಕೊಂಡು ಕ್ರಮ ಕೈಗೊಳ್ಳಲಿದೆ. ಅವರು ಪಕ್ಷದ ಯಾವುದೇ ಜವಾಬ್ದಾರಿ ಸ್ಥಾನದಲ್ಲಿಲ್ಲ. ಹಾಗಾಗಿ ತಕ್ಷಣಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ವಕ್ತಾರರು ಹೇಳಿದ್ರು.

ABOUT THE AUTHOR

...view details