ಬೆಂಗಳೂರು :ತೊರೆಕಾಡನಹಳ್ಳಿ ವ್ಯಾಪ್ತಿಯ ಕಾವೇರಿ ನೀರು ಸರಬರಾಜು ಯೋಜನೆಯ 1 ಮತ್ತು 2ನೇ ಹಂತದಲ್ಲಿ ವಿವಿಧ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜ.5ರ ತಡರಾತ್ರಿ 12.30ರಿಂದ ಜ.6ರ ರಾತ್ರಿ 11.30ರವರೆಗೆ ಕಾಮಗಾರಿ ನಡೆಯಲಿದೆ.
ಈ ಅವಧಿಯಲ್ಲಿ ನಗರದ ಹಲವು ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಪ್ರಕಟಣೆ ಹೊರಡಿಸಿದೆ.
ಈ ಏರಿಯಾಗಳಲ್ಲಿ ನೀರು ಪೂರೈಕೆ ವ್ಯತ್ಯಯ :ವಿದ್ಯಾಪೀಠ, ಕತ್ತರಿಗುಪ್ಪೆ, ಬಸವನಗುಡಿ, ಕುಮಾರಸ್ವಾಮಿ ಬಡಾವಣಿ, ಇಸ್ರೋಲೇಔಟ್, ಕೆಹೆಚ್‌ಬಿ ಕಾಲೋನಿ, ಜಯನಗರ, ಕಸ್ತೂರಬಾ ನಗರ, ಹೊಸ ಗುಡ್ಡದಹಳ್ಳಿ, ಬಾಪೂಜಿನಗರ, ಕಲಾಸಿಪಾಳ್ಯ, ಸುಧಾಮ ನಗರ, ಕೆಜಿ ನಗರ, ಪಾದರಾಯನಪುರ, ಜಗಜೀವನರಾಮ್ ನಗರ, ಕರಿಸಂದ್ರ, ಇಟ್ಟಮಡು, ಹೊಸಕೆರೆಹಳ್ಳಿ, ಪದ್ಮನಾಭ ನಗರ, ಉತ್ತರಹಳ್ಳಿ, ಚಿಕ್ಕಲ್ಲಸಂದ್ರ, ಶಾಂತಿನಗರ, ಸಿದ್ದಾಪುರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಜೆಪಿನಗರ, ಗಾಂಧಿನಗರ, ವಸಂತನಗರ, ಟೌನ್‌ಹಾಲ್, ಲಾಲ್‌ಬಾಗ್ ರಸ್ತೆ, ಕಾಟನ್‌ಪೇಟೆ, ಚಿಕ್ಕಪೇಟೆ, ಶಿವಾಜಿ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ತಿಳಿಸಿದೆ.