ಕರ್ನಾಟಕ

karnataka

ETV Bharat / city

30*40 ನಿವೇಶನದಲ್ಲಿ ಮನೆ ಕಟ್ಟುವವರಿಗೆ ಇನ್ಮುಂದೆ ಹೊಸ ಷರತ್ತು: ವಿಧಾನಸಭೆಯಲ್ಲಿ ವಿಧೇಯಕ ಮಂಡನೆ - Bangalore

ಬೆಂಗಳೂರಿನಲ್ಲಿ 30*40 ಚದರಡಿ ಮೇಲ್ಪಟ್ಟ ನಿವೇಶನದಲ್ಲಿ ಮನೆ ಕಟ್ಟುವವರಿಗೆ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಲಾಗಿದೆ. 40*60 ಚದರಡಿ ಮೇಲ್ಪಟ್ಟ ನಿವೇಶನದಲ್ಲಿರುವ ಕಟ್ಟಡಗಳಿಗೂ ಮಳೆ ನೀರು ಕೊಯ್ಲು ಕಡ್ಡಾಯ‌.

Vidhan Sabha
ವಿಧಾನಸಭೆ

By

Published : Sep 16, 2021, 10:47 PM IST

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಾಂತರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು. ಈ ವಿಧೇಯಕದಂತೆ ಬೆಂಗಳೂರಿನಲ್ಲಿ 30*40 ನಿವೇಶನದಲ್ಲಿ ಮನೆ ಕಟ್ಟುವವರಿಗೆ ಇನ್ಮುಂದೆ ಹೊಸ ಷರತ್ತು ವಿಧಿಸಲಾಗಿದೆ.

30*40 ಚದರಡಿ ಮೇಲ್ಪಟ್ಟ ನಿವೇಶನದಲ್ಲಿ ಮನೆ ಕಟ್ಟುವವರಿಗೆ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಲಾಗಿದೆ. 40*60 ಚದರಡಿ ಮೇಲ್ಪಟ್ಟ ನಿವೇಶನದಲ್ಲಿರುವ ಕಟ್ಟಡಗಳಿಗೂ ಮಳೆ ನೀರು ಕೊಯ್ಲು ಕಡ್ಡಾಯ‌ ಮಾಡಲಾಗಿದೆ.

ಕಾವೇರಿ ನೀರು ಅಥವಾ ಅಂತರ್ಜಲ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಳೆ‌ನೀರು ಕೊಯ್ಲನ್ನು ಕಡ್ಡಾಯಗೊಳಿಸಲು ವಿಧೇಯಕವನ್ನು ತರಲಾಗಿದೆ. ಮಳೆ ನೀರು ಒಳಚರಂಡಿಗಳಲ್ಲಿ ಹರಿದು ಹೋಗುವುದನ್ನು ತಗ್ಗಿಸುವುದರ ಜತೆಗೆ ನಗರ ಪ್ರವಾಹವನ್ನು ಇಳಿಸಲು ಪೂರಕವಾದ ನಿಯಮಗಳನ್ನು ಒಳಗೊಂಡ ಅಂಶಗಳನ್ನು ಈ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ ವಿಧಾನಸಭೆಯಲ್ಲಿ 2021ನೇ ಸಾಲಿನ ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ತಿದ್ದುಪಡಿ ವಿಧೇಯಕ ಅಂಗೀಕೃತಗೊಂಡಿತು.

ಇದನ್ನೂ ಓದಿ:ನಾಲ್ಕನೇ ದಿನದ ಕಲಾಪ: ಹೆಚ್​​​ಡಿಕೆಯಿಂದ ಸಿದ್ದುಗೆ ಗುದ್ದು, ಸಿಂಧೂರಿ ವಿರುದ್ದ ಸಾರಾ ಕಿಡಿ, ವಿಧೇಯಕ ಗದ್ದಲವೇ ಹೈಲೈಟ್ಸ್

ABOUT THE AUTHOR

...view details