ಕರ್ನಾಟಕ

karnataka

ETV Bharat / city

ವಿಶ್ವ ಹೃದಯ ದಿನದ ಅಂಗವಾಗಿ ಬೆಂಗಳೂರಲ್ಲಿ ವಾಕಥಾನ್​​​ - ಸಚಿವ ಸುರೇಶ್ ಕುಮಾರ್

ಬೆಂಗಳೂರಿನ ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ವಿಶ್ವ ಹೃದಯ ದಿನದ ಅಂಗವಾಗಿ ವಾಕಥಾನ್ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಸಚಿವ ಸುರೇಶ್ ಕುಮಾರ್ ಚಾಲನೆ ನೀಡಿದರು.

ವಿಶ್ವ ಹೃದಯ ದಿನದ ಅಂಗವಾಗಿ ಬೆಂಗಳೂರಲ್ಲಿ ವಾಕಥಾನ್

By

Published : Sep 29, 2019, 9:43 PM IST

ಬೆಂಗಳೂರು:ವಿಶ್ವ ಹೃದಯ ದಿನದ ಅಂಗವಾಗಿ ಯಶವಂತಪುರ ಬಳಿ ಇರುವ ಸ್ಪರ್ಶ್ ಆಸ್ಪತ್ರೆಯು ವಾಕಥಾನ್ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಂದಾಗಿರುವ ಸ್ಪರ್ಶ್ ಆಸ್ಪತ್ರೆ, ಹೃದಯದ ಆರೋಗ್ಯ ಮತ್ತು ಆರೋಗ್ಯಕರ ಜೀವನನ್ನ ನಡೆಸುವ ವಿಷಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿತ್ತು.

ಸಚಿವ ಸುರೇಶ್ ಕುಮಾರ್ ವಾಕಥಾನ್​ಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಲವಾರು ವೈದ್ಯರು, ಯುವಕರು ಭಾಗಿಯಾಗಿದ್ದರು. ಸ್ಪರ್ಶ್ ಆಸ್ಪತ್ರೆಯಿಂದ ಯಶವಂತಪುರ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಕಥಾನ್ ನಡೆಸಲಾಯ್ತು.

ವಿಶ್ವ ಹೃದಯ ದಿನದ ಅಂಗವಾಗಿ ಬೆಂಗಳೂರಲ್ಲಿ ವಾಕಥಾನ್

ಸಚಿವ ಸುರೇಶ್ ಕುಮಾರ್ ಮಾತನಾಡಿ, ಇತ್ತೀಚಿನ ದಿನದಲ್ಲಿ ಬಹಳ ಜನರಿಗೆ ಹೃದಯ ಸಮಸ್ಯೆ ಇದೆ. ಆತಂಕಕಾರಿ ವಿಷಯ ಅಂದ್ರೆ ಈಗಿನ ಯುವಕರಿಗೆ ಹೃದಯ ಸಂಬಂಧಿ ಕಾಯಿಲೆ ಬರುತ್ತಿದೆ. ಮಕ್ಕಳು ತಂದೆ-ತಾಯಿಯನ್ನು ನೋಡಿಕೊಳ್ಳುವ ಬದಲು ಮಕ್ಕಳನ್ನ ತಂದೆ-ತಾಯಿ ನೋಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯಕ್ಕೆ ಏನು ಬೇಕೋ ಅದನ್ನು ನಾವು ಅನುಸರಿಸಬೇಕು ಎಂದರು.

ABOUT THE AUTHOR

...view details