- ವಿಧಾನ ಪರಿಷತ್ತಿಗೆ ಇಂದು ನಡೆದ 4 ಶಿಕ್ಷಕ-ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲಿ ಒಟ್ಟು ಶೇ 71.10 ರಷ್ಟು ಮತದಾನ ನಡೆದಿದೆ.
LIVE UPDATE: ಪರಿಷತ್‌ನ ಪದವೀಧರ, ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ... ಶೇ.71.10 ರಷ್ಟು ಮತದಾನ - MLc election 2020,
21:04 October 28
ಶೇ 71.10 ರಷ್ಟು ಮತದಾನ
17:15 October 28
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ
ಸಂಜೆ 4 ಗಂಟೆಯ ವೇಳೆಗೆ ಕೊಪ್ಪಳ ಜಿಲ್ಲೆಯಲ್ಲಿ ಶೇ. 77.87 ರಷ್ಟು ಮತದಾನ
ಸಂಜೆ 4 ಗಂಟೆಯ ವೇಳೆಗೆ ರಾಯಚೂರು ಜಿಲ್ಲೆಯಲ್ಲಿ ಶೇ. 72.38 ರಷ್ಟು ಮತದಾನ
ಬಳ್ಳಾರಿಯಲ್ಲಿ ಸಂಜೆ 4 ಗಂಟೆ ವೇಳೆಗೆ ಶೇ. 65.56 ರಷ್ಟು ಮತದಾನ
17:15 October 28
ಪದವೀಧರ ಕ್ಷೇತ್ರದ ಚುನಾವಣೆ
- ಪಶ್ಚಿಮ ಪದವೀಧರ ಕ್ಷೇತ್ರ ಸಂಜೆ ವೇಳೆ 57.96% ರಷ್ಟು ಮತದಾನ
- ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶೇ. 71.18% ರಷ್ಟು ಮತದಾನ
17:03 October 28
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ
- ಸಂಜೆ 4 ರ ವರೆಗೆ ಶೇ. 70.53 ರಷ್ಟು ಮತದಾನ
16:42 October 28
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ
- ಧಾರವಾಡದಲ್ಲಿ 4 ಗಂಟೆಯ ವೇಳೆಗೆ ಶೇ. 57.96% ರಷ್ಟು ಮತದಾನ
- ಉತ್ತರಕನ್ನಡ 48.12% ಮತದಾನ
16:42 October 28
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ
- ಮಧ್ಯಾಹ್ನ 4 ಗಂಟೆಯ ವೇಳೆಗೆ ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 77.87 ರಷ್ಟು ಮತದಾನ
- ಧಾರವಾಡ ಜಿಲ್ಲೆಯಲ್ಲಿ 56.89% ಮತದಾನ
15:58 October 28
ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ
- ಚಿತ್ರದುರ್ಗದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಶೇ. 41.95 ರಷ್ಟು ಮತದಾನ
15:57 October 28
ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆ
- ರಾಯಚೂರಿನಲ್ಲಿ ಶೇ. 69% ರಷ್ಟು ಮತದಾನ
15:48 October 28
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ. 72 ರಷ್ಟು ಮತದಾನ
- ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ
- ಮಧ್ಯಾಹ್ನ 2 ಗಂಟೆಯವರೆಗೆ ಶೇ. 72 ರಷ್ಟು ಮತದಾನ
- 2,268 ಮತದಾರರ ಪೈಕಿ ಮತ ಚಲಾಯಿಸಿದ 1,638 ಮತದಾರರು
15:37 October 28
ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಮತದಾನ
- 28 ಮತಗಟ್ಟೆಗಳಲ್ಲಿ ಮಧ್ಯಾಹ್ನದವರೆಗೆ ಶೇ. 60.05ರಷ್ಟು ಮತದಾನ
- ಬಳ್ಳಾರಿ ಜಿಲ್ಲಾದ್ಯಂತ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಶೇ. 60.05 ಮತದಾನ
- ಕೋವಿಡ್ ಸೋಂಕು ಹರಡುವಿಕೆ ಹಿನ್ನೆಲೆ ಮತದಾನ ಪ್ರಕ್ರಿಯೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ
15:20 October 28
ಬೀದರ್, ಚಿಕ್ಕಬಳ್ಳಾಪುರ ಜಿಲ್ಲೆಯ ಶೇಕಡಾವಾರು ಮತದಾನ
- ಬೀದರ್ ಜಿಲ್ಲೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ರ ವರೆಗೆ ಶೇಕಡಾ 54.16 ರಷ್ಟು ಮತದಾನ
- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3 ಗಂಟೆಯವರೆಗೆ ಶೇ. 49.43 ರಷ್ಟು ಮತದಾನ
15:12 October 28
ಯಡಿಯೂರಪ್ಪ ಸರ್ಕಾರ ಶಿಕ್ಷಕರಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ: ಮಾಜಿ ಕಾರ್ಪೋರೇಟರ್ ಗುಣಶೇಖರ
ಬೆಂಗಳೂರಿನ ಶೇಷಾದ್ರಿಪುರಂ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶಿಕ್ಷಕರ ಕ್ಷೇತ್ರದ ಮತದಾನ ನಡೆಯುತ್ತಿದೆ. ಈ ವೇಳೆ ಜಯಮಹಲ್ ಮಾಜಿ ಕಾರ್ಪೋರೇಟರ್ ಎಂ.ಕೆ.ಗುಣಶೇಕರ ಮಾತನಾಡಿ, ಮೋದಿ ಅವರ ಸರ್ಕಾರದ ಸಾಧನೆ ಶಿಕ್ಷಕರು ಮೆಚ್ಚಿಕೊಂಡಿದ್ದಾರೆ. ರಾಜ್ಯದಲ್ಲೂ ಯಡಿಯೂರಪ್ಪ ಸರ್ಕಾರ ಶಿಕ್ಷಕರಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ. ಶೇ.40 ರಷ್ಟು ಮತದಾನ ನೆಡೆದಿದ್ದು, ಇನ್ನೂ ಶಿಕ್ಷಕರು ಮತದಾನಕ್ಕೆ ಬರುತ್ತಿದ್ದಾರೆ ಎಂದರು.
14:55 October 28
ಮಧ್ಯಾಹ್ನ 12- 2.00 ಗಂಟೆಯವರೆಗಿನ ಶೇಕಡಾವಾರು ಮತದಾನ
- ಈಶಾನ್ಯ ಶಿಕ್ಷಕರು (ಕಲಬುರಗಿ) - 54.84%
- ಬೆಂಗಳೂರು ಶಿಕ್ಷಕರು (ಬೆಂಗಳೂರು) - 52%
- ಆಗ್ನೇಯ ಪದವೀಧರ (ಬೆಂಗಳೂರು) - 47%
- ಪಶ್ಚಿಮ ಪದವೀಧರ (ಬೆಳಗಾವಿ) - 44.47%
13:41 October 28
ಶರಣಪ್ಪ ಮಟ್ಟೂರು ಪುನರಾಯ್ಕೆ ಖಚಿತ: ಶಾಸಕ ಅಮರೇಗೌಡ ಬಯ್ಯಾಪುರ
ಈಶಾನ್ಯ ಶಿಕ್ಷಕರ ಚುನಾವಣೆಯಲ್ಲಿ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ಶರಣಪ್ಪ ಮಟ್ಟೂರು ಕಳೆದ 6 ವರ್ಷಗಳ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಕಳೆದ 15 ವರ್ಷಗಳಿಂದ ಹೈಸ್ಕೂಲ್ ಶಿಕ್ಷಕರ ಸಂಘದ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಪಕ್ಷದವರಗಿಂತ ಶಿಕ್ಷಕರೇ ಹೆಚ್ಚು ಒಡನಾಡಿಗಳಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಮಟ್ಟೂರು ಪುನರಾಯ್ಕೆ ಖಚಿತ ಎಂದು ಹೇಳಿದರು.
13:37 October 28
ಗಂಗಾವತಿಯಲ್ಲಿ ಮಂದವಾಗಿ ಸಾಗಿದ ಮತದಾನ
ಗಂಗಾವತಿಯಲ್ಲಿ ಮತದಾನ ಮಂದಗತಿಯಲ್ಲಿ ಸಾಗುತ್ತಿದ್ದು, ಶಿಕ್ಷಕರ ವಲಯದಲ್ಲಿನ ಮತದಾರರನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷದ ಮುಖಂಡರು ಮನವೊಲಿಸುತ್ತಿದ್ದ ದೃಶ್ಯ ಕಂಡು ಬಂತು.
13:36 October 28
ಶಾಸಕಿಯಿಂದ ಚುನಾವಣಾ ನಿಯಮ ಉಲ್ಲಂಘನೆ ಆರೋಪ
ಕಾರವಾರ:ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ವೇಳೆ ಶಾಸಕಿ ರೂಪಾಲಿ ನಾಯ್ಕ ಅಂಕೋಲಾದಲ್ಲಿ ಮತಗಟ್ಟೆಗೆ ತೆರಳಿ ಮತದಾರರ ಯೋಗಕ್ಷೇಮ ವಿಚಾರಿಸಿದ್ದಕ್ಕೆ ಕಾಂಗ್ರೆಸ್ಸಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಇಬ್ಬಗೆಯ ನೀತಿಗೆ ಅಸಮಾಧಾನ ಹೊರಹಾಕಿದ್ದಾರೆ.
13:32 October 28
ಕೆ.ಆರ್.ಪುರ ಶಿಕ್ಷಕರ ಕ್ಷೇತ್ರದಲ್ಲಿ ಶಾಂತಿಯುತ ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಕೆ.ಆರ್.ಪುರದಲ್ಲಿ ಶಾಂತಿಯುತ ಮತದಾನ ಪ್ರಕ್ರಿಯೆ ನಡೆದಿದೆ. ಬೆಂಗಳೂರು ಪೂರ್ವ ತಾಲ್ಲೂಕಿನ ಮತಗಟ್ಟೆ ಕೆ.ಆರ್.ಪುರ ಮತ್ತು ಮಹದೇವಪುರ ಶಿಕ್ಷಕರ ಕ್ಷೇತ್ರ ಮತದಾರರಿಗೆ ಕೆ.ಆರ್.ಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕೊರೊನಾ ಹಿನ್ನೆಲೆ ಸುರಕ್ಷತಾ ಕ್ರಮಗಳ ಮೂಲಕ ಮತದಾನ ನಡೆಯುತ್ತಿದೆ.
12:58 October 28
ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಧಾರವಾಡ ನಗರದ ಫಾತಿಮಾ ಹೈಸ್ಕೂಲ್‌ನಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಿ ಮಾತನಾಡಿದ ಅವರು, ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಪರವಾದ ಅಲೆಯಿದೆ. ಕೇಂದ್ರದಲ್ಲಿನ ಮೋದಿ ಸರ್ಕಾರ ನಿಟ್ಟತನದ ನಿರ್ಧಾರಗಳನ್ನು ಪದವೀಧರರು ಗುರುತಿಸಿದ್ದಾರೆ. ಪದವೀಧರರು ಮತದಾನ ಹೆಚ್ಚಾಗಿ ಮಾಡಬೇಕು ಎಂದು ಮನವಿ ಮಾಡಿದರು.
12:55 October 28
ಬಳ್ಳಾರಿಯಲ್ಲಿ ಟ್ರಾಫಿಕ್ ಜಾಮ್
ಗಣಿನಾಡು ಬಳ್ಳಾರಿ ನಗರದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಪದವೀಧರ ಕೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ರಸ್ತೆಯ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರಿಗೆ ತೊಂದರೆಯಾದ ಪ್ರಸಂಗ ಕಂಡು ಬಂತು.
12:50 October 28
ಲಿಂಗಸೂಗುರಿನಲ್ಲಿ ಬಿರುಸಿನ ಮತದಾನ
ರಾಯಚೂರಿನ ಲಿಂಗಸೂಗುರಿನಲ್ಲಿ ಈಶಾನ್ಯ ಶಿಕ್ಷಕರ ಮತಕ್ಷೇತ್ರ ಚುನಾವಣೆಗೆ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಿಗ್ಗೆ 8 ಗಂಟೆಯಿಂದ ಮತದಾನ ನಡೆದಿದ್ದು, ಮತಗಟ್ಟೆ ಮುಂಭಾಗದಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂತು.
12:46 October 28
ಹಾನಗಲ್ನಲ್ಲಿ ಮತ ಚಲಾಯಿಸಿದ ಇಳಿವಯಸ್ಸಿನ ಪದವೀಧರರು
ಹಾನಗಲ್ ತಾಲೂಕಿನ ಅಕ್ಕಿಆಲೂರ ಗ್ರಾಮದಲ್ಲಿನ ವೃದ್ಧರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು. ವಿ.ಆರ್ ಪಾಟೀಲ (80), ಸುರೇಶಗೌಡ ಪಾಟೀಲ (71) ಮತ್ತು ವೈ.ಕೆ ಹೇರೂರ (64) ಸೇರಿ ಮೂವರು ವೃದ್ಧರು ತಮ್ಮ ಮತ ಚಲಾಯಿಸಿದರು. ವೃದ್ಧರ ಉತ್ಸಾಹ ಕಂಡು ನೆರೆದ ಜನತೆ ಹೆಮ್ಮೆ ವ್ಯಕ್ತಪಡಿಸಿದರು.
12:42 October 28
ಗದಗ ಮತದಾನ ಕೇಂದ್ರದ ಆವರಣದಲ್ಲಿ ಕಾರ್ಯಕರ್ತರ ಅಂಧಾ ದರ್ಬಾರ್!
ಗದಗದಲ್ಲಿ ಮತದಾನ ಕೇಂದ್ರದ ಆವರಣದಲ್ಲಿ ಕಾರ್ಯಕರ್ತರು ಕೋವಿಡ್ ಹಾಗೂ ಚುನಾವಣೆ ಕಾನೂನು ಉಲ್ಲಂಘಿಸಿ ಗುಂಪು ಗುಂಪಾಗಿ ನಿಂತು ಅಂಧಾ ದರ್ಬಾರ್ ಪ್ರದರ್ಶನ ಮಾಡಿದ್ದಾರೆ. ಕಾರ್ಯಕರ್ತರು ಸಾಮಾಜಿಕ ಅಂತರ, ಮಾಸ್ಕ್ ಸಹ ಹಾಕದೆ ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದಾರೆ.
12:29 October 28
ಮತಗಟ್ಟೆ ಕೇಂದ್ರದಲ್ಲಿ ಕೈ-ಕೈ ಮಿಲಾಯಿಸಿದ ಜೆಡಿಎಸ್-ಬಿಜೆಪಿ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ದೊಡ್ಡಬಳ್ಳಾಪುರದ ತಹಶೀಲ್ದಾರ್ ಮತದಾನ ಕೇಂದ್ರದಲ್ಲಿ ಘರ್ಷಣೆ ನಡೆದಿದೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪರಸ್ಪರ ಕೈ ಮಿಲಾಯಿಸಿದರು. ಮತಗಟ್ಟೆ ಅವರಣದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದರು. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ಅಪೇಕ್ಷ ವ್ಯಕ್ತಪಡಿಸಿದರು. ಈ ವಿಚಾರಕ್ಕೆ ಎರಡು ಪಕ್ಷಗಳ ನಡುವೆ ಮಾತಿನ ಘರ್ಷಣೆ ನಡೆದಿದ್ದು, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿದರು.
12:26 October 28
ಹೊಸಪೇಟೆಯಲ್ಲಿ ಮತ ಚಾಲಾಯಿಸಿದ ಶಿಕ್ಷಕರು
ಈಶಾನ್ಯ ಕರ್ನಾಟಕ ಮತಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕರು ಉತ್ಸಾಹದಿಂದ ಮತದಾನ ಮಾಡಿದರು. ತಾಲೂಕಿನಲ್ಲಿ ಒಟ್ಟು 1001 ಮತದಾರರು ಇದ್ದಾರೆ. 11 ಗಂಟೆ ಒಳಗಡೆ 234 ಶಿಕ್ಷಕರು ತಮ್ಮ ಹಕ್ಕನ್ನು ಚಲಾಯಿಸಿದರು. ತಾಲೂಕಿನ ಮೂರು ಕಡೆ ಮತದಾನ ಪ್ರಕ್ರಿಯೆ ನಡೆಯಿತು.
12:20 October 28
ಧಾರವಾಡದಲ್ಲಿ ಚುನಾವಣಾ ಪ್ರಕ್ರಿಯೆ ಪರಿಶೀಲನೆ ನಡೆಸಿದ ಅಧಿಕಾರಿ
ಪಶ್ಚಿಮ ಪದವೀಧರ ಚುನಾವಣೆ ಹಿನ್ನೆಲೆ ಧಾರವಾಡ ಉಪವಿಭಾಗಾಧಿಕಾರಿ ಹಾಗೂ ಚುನಾವಣಾ ಉಸ್ತುವಾರಿ ಡಾ. ಬಿ. ಗೋಪಾಲಕೃಷ್ಣ ಚುನಾವಣಾ ಪ್ರಕ್ರಿಯೆ ಪರಿಶೀಲನೆ ನಡೆಸಿದರು.
12:15 October 28
ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ: ದಾವಣಗೆರೆಯಲ್ಲಿ ಮತದಾನ ಚುರುಕು
ದಾವಣಗೆರೆಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನ ಆರಂಭವಾಗಿದೆ. ಬೆಳಿಗ್ಗೆ ನಿರುತ್ಸಾಹ ಕಂಡು ಬಂದರೂ ಈಗ ಚುರುಕು ಪಡೆದುಕೊಂಡಿದೆ.
12:13 October 28
ಬೀದರ್ನಲ್ಲಿ ಕೊರೊನಾ ಭೀತಿ ನಡುವೆ ಪರಿಷತ್ ಚುನಾವಣೆ ಮತದಾನ ಆರಂಭ
ವಿಧಾನ ಪರಿಷತ್ಗೆ ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದಿಂದ ಇಂದು ಜಿಲ್ಲೆಯಾದ್ಯಂತ ಕೊರೊನಾ ಭೀತಿ ನಡುವೆ ಮತದಾನ ನಡೆಯುತ್ತಿದೆ.
12:05 October 28
ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಿಂದ ಗದಗನಲ್ಲಿ ಮತದಾನ
ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ ಸಂಕನೂರು ಕುಟುಂಬ ಸಮೇತವಾಗಿ ಗದಗ ನಗರದ ಮುನ್ಸಿಪಲ್ ಕಾಲೇಜಿನಲ್ಲಿರುವ ಮತದಾನ ಕೇಂದ್ರದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.
12:03 October 28
ಬೆಂಗಳೂರಿನಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಮತದಾನ
ಬೆಂಗಳೂರು ನಗರದಲ್ಲಿ ಶಿಕ್ಷಕರ ಚುನಾವಣೆ ನಡೆಯುತ್ತಿದ್ದು, ಮಂದಗತಿಯಲ್ಲಿ ಚುನಾವಣೆ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಕ್ಕೆ ಪ್ರಾರಂಭವಾದ ಮತದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಬೆಳಿಗ್ಗೆ 10ರ ನಂತರವೇ ಮತಗಟ್ಟೆಗೆ ಆಗಮಿಸುತ್ತಿದ್ದಾರೆ.
12:00 October 28
ಯಾದಗಿರಿಯಲ್ಲಿ ಮತದಾನ ಆರಂಭ
ವಿಧಾನ ಪರಿಷತ್ಗೆ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಹಿನ್ನೆಲೆ ಯಾದಗಿರಿ ಜಿಲ್ಲೆಯಲ್ಲಿ 7 ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ಪ್ರಾರಂಭವಾಗಿದ್ದು, ಜನರು ತಮ್ಮ ಹಕ್ಕು ಚಲಾಯಿಸಲು ಆಗಮಿಸುತ್ತಿದ್ದಾರೆ.
10:55 October 28
ಕೋಲಾರದಲ್ಲಿ ಮತದಾನ ಆರಂಭ
ಕೋಲಾರದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಬಿರುಸಿನಿಂದ ಸಾಗಿದೆ. ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮತದಾನ ಮಾಡಲು ಮತಗಟ್ಟೆಗಳ ಬಳಿ ಪದವೀಧರರು ಸಾಲುಗಟ್ಟಿ ನಿಂತಿದ್ದಾರೆ.
10:54 October 28
ತುಮಕೂರಿನಲ್ಲಿ ಮತದಾನ ಆರಂಭ
ಐದು ಜಿಲ್ಲೆಗಳನ್ನು ಒಳಗೊಂಡಂತೆ ಇರುವಂತಹ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಡೆಯುತ್ತಿರುವ ಮತದಾನ ಬೆಳಗ್ಗೆಯಿಂದಲೂ ಚುರುಕಿನಿಂದ ಸಾಗಿದೆ.
10:52 October 28
ಉತ್ತರ ಕನ್ನಡದಲ್ಲಿ ಮತದಾನ ಆರಂಭ
ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ಗೆ ಮತದಾನ ನಡೆಯುತ್ತಿದ್ದು, ಕಾರವಾರದಲ್ಲಿ ಕೋವಿಡ್ ಮುಂಜಾಗೃತಾ ಕ್ರಮದೊಂದಿಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
10:05 October 28
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಸವರಾಜ್ ಗುರಿಕಾರ ಮತದಾನ
ಪಶ್ಚಿಮ ಪದವೀಧರರ ಚುನಾವಣೆ ಹಿನ್ನೆಲೆ ಧಾರವಾಡದಲ್ಲಿ ಪಕ್ಷೇತರ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಸವರಾಜ್ ಗುರಿಕಾರ ಅವರು ತಮ್ಮ ಕುಟುಂಬಸ್ಥರೊಂದಿಗೆ ಆಗಮಿಸಿ ಮತದಾನ ಮಾಡಿದರು.
10:03 October 28
ಕಲಬುರಗಿಯಲ್ಲಿ ಮತದಾನ ಆರಂಭ
ಕಲಬುರಗಿಯಲ್ಲಿ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ನಿಧಾನಗತಿಯಲ್ಲಿ ಮತದಾರರು ಮತ ಕೇಂದ್ರಗಳತ್ತ ಆಗಮಿಸುತ್ತಿದ್ದಾರೆ.
10:02 October 28
ಚಿತ್ರದುರ್ಗದಲ್ಲಿ ಮತದಾನ ಆರಂಭ
ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ತುಮಕೂರಿಗೆ ಸಂಬಂಧಿಸಿದಂತೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ಕೋಟೆನಾಡಿನಲ್ಲಿ ಪದವೀಧರರಿಂದ ಮತದಾನ ಆರಂಭವಾಗಿದೆ.
10:01 October 28
ಹಾವೇರಿ ಜಿಲ್ಲೆಯಲ್ಲಿ ಮತದಾನ ಆರಂಭ
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಆರ್.ಎಂ.ಕುಬೇರಪ್ಪ ಅವರು ರಾಣೆಬೆನ್ನೂರ ನಗರದ ನಗರಸಭಾ ಪ್ರೌಢಶಾಲೆಯ ಮತಗಟ್ಟೆ 102 ರಲ್ಲಿ ಮತ ಚಲಾಯಿಸಿದರು.
10:00 October 28
ಬೆಂಗಳೂರಿನಲ್ಲಿ ಮತದಾನ ಆರಂಭ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಶಿಕ್ಷಕರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ.
09:58 October 28
ರಾಯಚೂರು ಜಿಲ್ಲೆಯಲ್ಲಿ ಮತದಾನ ಆರಂಭ
ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸ್ಥಾನದ ಚುನಾವಣೆಯ ಮತದಾನ ಪ್ರಕ್ರಿಯೆ ರಾಯಚೂರು ಜಿಲ್ಲೆಯ ಆರಂಭವಾಗಿದೆ.
09:37 October 28
ಧಾರವಾಡದಲ್ಲಿ ಮತದಾನ ಆರಂಭ
ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಧಾರವಾಡದಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
09:36 October 28
ಚಿಕ್ಕಬಳ್ಳಾಪುರದಲ್ಲಿ ಮತದಾನ ಆರಂಭ
ಚಿಕ್ಕಬಳ್ಳಾಪುರ ನಗರದ ಬಿ.ಬಿ.ರಸ್ತೆಯ ಸರ್ಕಾರಿ ಪ್ರೌಢಶಾಲೆಯ ನಾಲ್ಕು ಮತದಾನ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.
09:21 October 28
LIVE UPDATE: ಪರಿಷತ್‌ನ ಪದವೀಧರ, ಶಿಕ್ಷಕರ ಕ್ಷೇತ್ರಗಳಿಗೆ ಮತದಾನ
ಕೊಪ್ಪಳ: ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯಲ್ಲಿ ಮತದಾನ ಪ್ರಾರಂಭವಾಗಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತದಾನ ಪ್ರಾರಂಭಗೊಂಡಿದೆ.