ಕರ್ನಾಟಕ

karnataka

ETV Bharat / city

ಮಕ್ಕಳ, ಪೋಷಕರ ಆತಂಕ ನಿವಾರಣೆಗೆ ಸರಳ ಮಾರ್ಗ.. ಸಂಪರ್ಕ ರಹಿತ ವರ್ಚುವಲ್ ತರಗತಿ!! - ವರ್ಚುವಲ್ ತರಗತಿ ತಂತ್ರಾಂಶ

ಕಲಿಕೆಯಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ಸಲ್ಲಿಕೆಯ ಸಮಯದ ಸೌಲಭ್ಯಗಳು, ಹಾಲಿ ಇರುವ ಎಲೆಕ್ಟ್ರಾನಿಕ್ ಸೌಲಭ್ಯಗಳನ್ನೇ ಬಳಸಿಕೊಳ್ಳುವ ಅನುಕೂಲತೆ ಇದ್ದು, ಕುಟುಂಬದ ಆರ್ಥಿಕ ಸ್ಥಿತಿ ಒತ್ತಡಕ್ಕೀಡಾಗಿರುವ ಸನ್ನಿವೇಶದಲ್ಲಿ ಕಲಿಕೆಗಾಗಿ ಲ್ಯಾಪ್​ಟಾಪ್​​,ಟ್ಯಾಬ್ ಖರೀದಿಸುವ ಅಗತ್ಯವಿಲ್ಲ..

virtual-classroom-for-karnataka-students
ಸಂಪರ್ಕ ರಹಿತ ವರ್ಚುವಲ್ ತರಗತಿ

By

Published : Jul 5, 2020, 4:48 PM IST

ಬೆಂಗಳೂರು :ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ಅಗಸ್ಟ್ ಬಳಿಕ ನಿರ್ಧಾರ ಕೈಗೊಳ್ಳಲಾಗುವುದೆಂದು ಸರ್ಕಾರ ತಿಳಿಸಿದೆ. ಹಲವು ನಿರ್ಬಂಧಗಳ ಹೊರತಾಗಿಯೂ ಪ್ರತಿದಿನ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗುವುದರಿಂದ ಇರುವ ಅಪಾಯ ಸಾಧ್ಯತೆ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಸೇರಿ ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗಿದ್ರೂ ಕುಟುಂಬದವರಿಗೆ ಆತಂಕದ ವಾತಾವರಣ ಇದ್ದೇ ಇದೆ. ಇದರ ನಡುವೆಯೂ ಕೋವಿಡ್​ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಮಹಾಮಾರಿಯಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ ಅನ್ನೋದು ಪಾಲಕರ ದೊಡ್ಡ ಚಿಂತೆಯಾಗಿದೆ.

ವರ್ಚುವಲ್ ತರಗತಿ

ವಿದ್ಯಾರ್ಥಿಗಳು ಮನೆಯಲ್ಲಿದ್ದುಕೊಂಡೇ ಸಂಪರ್ಕ ರಹಿತ ವರ್ಚುವಲ್ ಕ್ಲಾಸ್‌ರೂಮ್‌ಗಳಲ್ಲಿ ಕಲಿಯುವುದು. ಗ್ರೋಥ್ಕೋಡ್ ಸೃಷ್ಟಿಸಿದ ಆನ್‌ಲೈನ್ ವರ್ಚುವಲ್ ಪ್ಲಾಟ್​ಫಾರಂ ಪ್ರೊಲೀಯರ್ ಇನ್ಸ್‌ಟ್ಯೂಷನ್‌ ಇದನ್ನು ಸಾಧ್ಯವಾಗಿಸಿದೆ. ಇದು ಶಾಲಾ-ಕಾಲೇಜುಗಳು ಶಿಕ್ಷಣ ನೀಡುವ ವಿಧಾನವನ್ನು ಪರಿವರ್ತಿಸಲು ಸಾಧ್ಯವಾಗಿಸುತ್ತದೆ ಎಂಬ ಸರಳ ಉಪಾಯ ಹಲವು ಪಾಲಕರ ಚಿಂತೆಗೆ ಪರಿಹಾರ ಒದಗಿಸಲಿದೆ ಎನ್ನುವುದು ಇದೀಗ ಕೇಳಿ ಬರುತ್ತಿರುವ ಮಾತು.

ಕಲಿಕೆಯಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ಸಲ್ಲಿಕೆಯ ಸಮಯದ ಸೌಲಭ್ಯಗಳು, ಹಾಲಿ ಇರುವ ಎಲೆಕ್ಟ್ರಾನಿಕ್ ಸೌಲಭ್ಯಗಳನ್ನೇ ಬಳಸಿಕೊಳ್ಳುವ ಅನುಕೂಲತೆ ಇದ್ದು, ಕುಟುಂಬದ ಆರ್ಥಿಕ ಸ್ಥಿತಿ ಒತ್ತಡಕ್ಕೀಡಾಗಿರುವ ಸನ್ನಿವೇಶದಲ್ಲಿ ಕಲಿಕೆಗಾಗಿ ಲ್ಯಾಪ್​ಟಾಪ್​​,ಟ್ಯಾಬ್ ಖರೀದಿಸುವ ಅಗತ್ಯವಿಲ್ಲ. ಇದಕ್ಕೆ ಅಗತ್ಯವಾದ ಬ್ಯಾಂಡ್ವಿಡ್ತ್ ಕೂಡಾ ಕನಿಷ್ಠವಾಗಿರುವುದರಿಂದ, ಪ್ರೊಲೀಯರ್ ಇನ್ಸ್‌ಟ್ಯೂಷಟ್, ಆನ್​​ಲೈನ್​​ ಕಲಿಕೆಗೆ ಇರುವ ದೊಡ್ಡ ತಡೆಯನ್ನು ನಿವಾರಿಸಿದೆ.

ಇದರ ಲಭ್ಯತೆ ಹಾಗೂ ಕಾರ್ಯನಿರ್ವಹಣೆ ಸುಲಭವಾಗಿದೆ. ಯಾವುದೇ ಸ್ಮಾರ್ಟ್‌ಪೋನ್​​ ಸಾಧನ ಅಥವಾ ವೈಯಕ್ತಿಕ ಕಂಪ್ಯೂಟರ್‌ಗಳನ್ನು ಬಳಸಬಹುದಾಗಿದೆ. ಆನ್​​ಲೈನ್​​ ಉಪನ್ಯಾಸಗಳಿಗೆ ಅಗತ್ಯ ಬ್ಯಾಂಡ್​ವಿಡ್ತ್​​ ಪಡೆಯಲು ಮೈಲುಗಟ್ಟಲೇ ತೆರಳಬೇಕಾದ ವಿದ್ಯಾರ್ಥಿಗಳಿಗೆ ಇದು ನಿಜಕ್ಕೂ ವರದಾನ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವರ್ಚುವಲ್ ತರಗತಿ

ಶಿಕ್ಷಕರಿಗೆ ಪ್ರತ್ಯೇಕ ಪ್ಯಾಕೇಜ್ :ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ಯಾಕೇಜ್​​ಗಳನ್ನು ಪ್ರೊಲೀಯರ್ ಇನ್ಸ್‌ಟ್ಯೂಟ್ ಹೊಂದಿದೆ. ಶಿಕ್ಷಕರು ವೈಟ್​​ಬೋರ್ಡ್​​ ಬಳಸಬಹುದು. ಹಲವು ಕೋನಗಳಲ್ಲಿ ಪಾಠವನ್ನು ಮಾಡಬಹುದಾಗಿದೆ. ಜತೆಗೆ ಸೂಕ್ತ ಎನಿಸಿದ ವಿಡಿಯೋ ಅಂಶಗಳನ್ನೂ ಸೇರಿಸಬಹುದಾಗಿದೆ. ಸ್ಲೈಡ್, ಚಿತ್ರಗಳು, ಗ್ರಾಫಿಕ್ಸ್ ಕೂಡಾ ಬಳಸಬಹುದು. ಇಡೀ ಪಠ್ಯಕ್ರಮ ಆನ್​ಲೈನ್​​ ಲಭ್ಯವಿದ್ದು, ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಪುನರ್ ಮನನ ಮಾಡಲು ಅವಕಾಶವಿದೆ.

ಈ ಬಗ್ಗೆ ಗ್ರೋಥ್ಕೋಡ್ ಟೆಕ್ನಾಲಜಿ ಸೊಲ್ಯೂಶನ್ಸ್​ನ ಸಹಸಂಸ್ಥಾಪಕ ರವಿ ಕೃಷ್ಣಮೂರ್ತಿ ಮಾಹಿತಿ ನೀಡಿದ್ದು, ಪ್ರೊಲೀಯರ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳು ಅಥವಾ ಶಿಕ್ಷಕರು ತರಗತಿ ತಪ್ಪಿಸಿಕೊಳ್ಳುವುದಿಲ್ಲ. ಪಾಠಗಳನ್ನು ವೈಯಕ್ತಿಕವಾಗಿ ಕಲಿಯುವ ಅಭ್ಯರ್ಥಿಗಳಿಗೆ ಯಾವುದೇ ಸಮಯದಲ್ಲಿ, ಎಲ್ಲೇ ಇದ್ದರೂ ವಿತರಿಸಲಾಗುತ್ತದೆ.

ಆದ್ದರಿಂದ ನಿಗದಿತ ವೇಳಾಪಟ್ಟಿಗೆ ಸೀಮಿತವಾಗಬೇಕಿಲ್ಲ. ಈ ಪ್ರಕ್ರಿಯೆಯ ದೊಡ್ಡ ಪ್ರಯೋಜನವೆಂದರೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಿರ್ದಿಷ್ಟ ದಿನ, ನಿಗದಿತ ಸಮಯದವರೆಗೆ ಮುಖಾಮುಖಿಯಾಗಿರುವ ಅಗತ್ಯವಿಲ್ಲ. ಅದು ಪಾಠದ ಕಲಿಕೆಗೆ ಇರಬಹುದು, ಮೌಲ್ಯಮಾಪನ ಅಥವಾ ಅಭಿಪ್ರಾಯ ನೀಡುವುದಕ್ಕೆ ಇರಬಹುದು ಎನ್ನುತ್ತಾರೆ.

ABOUT THE AUTHOR

...view details