ಕರ್ನಾಟಕ

karnataka

ETV Bharat / city

ವೀರೇನ್ ಖನ್ನಾ ಪಾರ್ಟಿಗಳಲ್ಲಿ ನಶೆಯೋ ನಶೆ: ವಿದೇಶಿಗರಿಗೆ ಮೊದಲ ಆದ್ಯತೆ, ಸೆಲೆಬ್ರಿಟಿಗಳ ತೂರಾಟ

ಬೃಹತ್​ ನೈಟ್​ ಪಾರ್ಟಿ ಆಯೋಜನೆ ಮಾಡುತ್ತಿದ್ದ ವೀರೇನ್​ ಖನ್ನಾ ವಿದೇಶಿಗರಿಗೆ ಮೊದಲ ಆದ್ಯತೆ ನೀಡುತ್ತಿದ್ದನಂತೆ. ಅಲ್ಲದೆ ಈ ಪಾರ್ಟಿಗೆ ಹೋಗಬೇಕು ಅಂದ್ರು ಪ್ರವೇಶ ಶುಲ್ಕವಾಗಿ 5000 ದಿಂದ 6000 ಸಾವಿರ ರೂ. ಪಾವತಿಸಬೇಕಿತ್ತು. ಇದು ಚಿಕ್ಕ ಮೊತ್ತವಾದರೂ ಒಳ ಹೊಕ್ಕಾಗ ಅಸಲಿಯತ್ತೇ ಬೇರೆ ಇರುತ್ತಿತ್ತು.

viren-khanna-late-night-party-event-management
ಲೇಟ್​ ನೈಟ್​ ಪಾರ್ಟಿ

By

Published : Sep 7, 2020, 4:00 PM IST

ಬೆಂಗಳೂರು: ಸುಮಾರು ಒಂದು ದಶಕಗಳಿಂದ ನಗರದ ಸ್ಟಾರ್ ಹೋಟೆಲ್​ಗಳಲ್ಲಿ ನೈಟ್​​ ಪಾರ್ಟಿಗಳನ್ನ ಆಯೋಜನೆ ಮಾಡುತ್ತಿದ್ದ ಗಾಂಜಾ ಪ್ರಕರಣದ 3ನೇ ಆರೋಪಿ ವೀರೇನ್ ಖನ್ನಾ, ವಿದೇಶಿಗರಿಗೆ ಮೊದಲ ಪ್ರಾಮುಖ್ಯತೆ ನೀಡುತ್ತಿದ್ದ ಎನ್ನಲಾಗಿದೆ.

ಆರೋಪಿಯ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ 'ವೀರೇನ್ ಖನ್ನಾ ಪ್ರೊಡಕ್ಷನ್' ಪ್ರತಿಷ್ಠಿತ ಹೋಟೆಲ್ ಹಾಗೂ ಪಬ್​​ಗಳಲ್ಲಿ ನೈಟ್​​ ಪಾರ್ಟಿಗಳನ್ನ ಆಯೋಜನೆ ಮಾಡಿ, 5 ರಿಂದ 8 ಸಾವಿರ ರೂ. ವರೆಗೂ ಪ್ರವೇಶ ಶುಲ್ಕ ನಿಗದಿಪಡಿಸುತ್ತಿತ್ತು. ಎಂಟ್ರೀ ಫೀದಲ್ಲಿ ಒಂದು ಸಾವಿರ ರೂ. ಮದ್ಯಪಾನಕ್ಕೆ ಉಪಯೋಗಿಸಿಲು ಕೂಪನ್ ನೀಡುತ್ತಿದ್ದ. ಇದರಿಂದ ಪಬ್​​ನಲ್ಲಿ ದಿನಕ್ಕೆ ಲಕ್ಷಾಂತರ ರೂ. ಮದ್ಯ ಮಾರಾಟವಾಗುತ್ತಿತ್ತು.

ಈತನು ಆಯೋಜನೆ ಮಾಡಿದ ಪಾರ್ಟಿಗಳಿಗೆ ಹೋಗಬೇಕು ಎಂದರೆ ಆಮಂತ್ರಣ ಇರಲೇಬೇಕು. ಒಂದು ಬಿಯರ್ ಬೆಲೆ ಕನಿಷ್ಠ ₹600 ಇರುತ್ತದೆ. ಪಾರ್ಟಿಗೆ ಬರುವ ಎಲ್ಲರೂ ಕಡಿಮೆ ಎಂದರು ₹10,000 ರೂ. ಪ್ರವೇಶ ಶುಲ್ಕ ಹೊರೆತುಪಡಿಸಿ ಖರ್ಚು ಮಾಡುತ್ತಿದ್ದರು. ಪೊಲೀಸರ ಆದೇಶದಂತೆ 11:30 ರಿಂದ 12 ಒಳಗೆ ಎಲ್ಲಾ ಪಾರ್ಟಿಗಳು ಮುಗಿಯಬೇಕು ಆದರೆ ಆಫ್ಟರ್ ಪಾರ್ಟಿ ಹೆಸರಿನಲ್ಲಿ ಕೋರಮಂಗಲ ಇಂದಿರಾನಗರ ಬಡಾವಣೆಗಳಲ್ಲಿ ಪಬ್​ಗಳನ್ನ ಬಾಡಿಗೆಗೆ ಪಡೆದು ಮತ್ತೆ ನಶೆಯಲ್ಲಿ ತೇಲುತ್ತಿದ್ದರು.

ಅಲ್ಲದೆ ಪೂಲ್ ಪಾರ್ಟಿಯನ್ನೂ ಕೂಡಾ ವೀರೇನ್ ಖನ್ನಾ ಆಯೋಜನೆ ಮಾಡುತ್ತಿದ್ದ. ವಿದೇಶಿಗರು ಹಾಗೂ ಉದ್ಯಮಿ ಮಕ್ಕಳು ಮತ್ತು ಸೆಲಿಬ್ರಿಟಿಗಳನ್ನು ಒಳಗೊಂಡಂತೆ ಈತನ ಪಾರ್ಟಿಗಳಲ್ಲಿ ಸಮಯದ ಪರಿವಿಲ್ಲದೆ ಮಾದಕತೆಯ ಕುಣಿತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು.

ಸದ್ಯ ವಿರೇನ್ ಖನ್ನಾ ಪೊಲೀಸ್ ಬಂಧಿಸಿದ್ದು, ಮಾದಕ ವಸ್ತುಗಳ ಮಾರಾಟ ಹಾಗೂ ಈತನ ನಂಟಿನ ಬಗ್ಗೆ ಖಾಕಿ ವಿಚಾರಣೆ ನಡೆಸುತ್ತಿದೆ.

ABOUT THE AUTHOR

...view details