ಕರ್ನಾಟಕ

karnataka

ಕೋವಿಡ್‌ ನಿಯಮ ಮೀರಿ ಚು. ರ್ಯಾಲಿಯಲ್ಲಿ ಜನ ಸೇರಿಸಿದ್ದಕ್ಕೆ ಪ್ರಕರಣ ದಾಖಲು

ಎಫ್​​ಎಸ್​​ಟಿ ಟೀಂ ನ ವಸಂತ್ ಕುಮಾರ್ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಇನ್ನು ಜಾಲಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ರ್ಯಾಲಿಯಲ್ಲಿ ಐವತ್ತು ಜನರಿಗಿಂತ ಹೆಚ್ಚು ಜನ ಸೇರಿಸಿದಕ್ಕೆ ಶರದ್ ದರ್ಶನ್ ಎಂಬುವವರು ದೂರು ದಾಖಲಿಸಿದ್ದಾರೆ..

By

Published : Oct 30, 2020, 7:34 PM IST

Published : Oct 30, 2020, 7:34 PM IST

violation-of-the-covid-rule-case-registered-for-by-election-rally
ಕೋವಿಡ್‌ ನಿಯಮ ಮೀರಿ ಚುನಾವಣಾ ರ್ಯಾಲಿಯಲ್ಲಿ ಜನ ಸೇರಿಸಿದ್ದಕ್ಕೆ ಪ್ರಕರಣ ದಾಖಲು: ಹೆಚ್ಚುವರಿ ಮಾರ್ಷಲ್ಸ್ ನೇಮಿಸಿದ ಬಿಬಿಎಂಪಿ

ಬೆಂಗಳೂರು: ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳ ವಿರುದ್ಧ ಕೋವಿಡ್ ನಿಯಮ ಮೀರಿ ರ್ಯಾಲಿ ನಡೆಸಿದ್ದಕ್ಕೆ ಬಿಬಿಎಂಪಿ ಚುನಾವಣಾ ಸಿಬ್ಬಂದಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೋವಿಡ್‌ ನಿಯಮ ಮೀರಿ ಚುನಾವಣಾ ರ್ಯಾಲಿಯಲ್ಲಿ ಜನ ಸೇರಿಸಿದ್ದಕ್ಕೆ ಪ್ರಕರಣ ದಾಖಲು

ಇಂದು ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ರೋಡ್ ಶೋ ವೇಳೆ ಬಿಜೆಪಿ ಕೋವಿಡ್ ನಿಯಮ ಉಲ್ಲಂಘಿಸಿ, ಐದು ನೂರಕ್ಕೂ ಹೆಚ್ಚು ಜನರನ್ನು ಸೇರಿಸಿತ್ತು. ಹೀಗಾಗಿ, ಎಫ್​​ಎಸ್​​ಟಿ ಟೀಂ ನ ವಸಂತ್ ಕುಮಾರ್ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಇನ್ನು ಜಾಲಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ರ್ಯಾಲಿಯಲ್ಲಿ ಐವತ್ತು ಜನರಿಗಿಂತ ಹೆಚ್ಚು ಜನ ಸೇರಿಸಿದಕ್ಕೆ ಶರದ್ ದರ್ಶನ್ ಎಂಬುವವರು ದೂರು ದಾಖಲಿಸಿದ್ದಾರೆ.

ನಿಯಮದ ಪ್ರಕಾರ ಐವತ್ತು ಜನ ಮಾತ್ರ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅವಕಾಶ ಇದ್ದು, ಇಂದು ಇನ್ನೂರಕ್ಕೂ ಹೆಚ್ಚು ಜನ ಭಾಗಿಯಾದ್ದರಿಂದ ಪ್ರಕರಣ ದಾಖಲಿಸಲಾಗಿದೆ.

ಕೋವಿಡ್‌ ನಿಯಮ ಮೀರಿ ಚುನಾವಣಾ ರ್ಯಾಲಿಯಲ್ಲಿ ಜನ ಸೇರಿಸಿದ್ದಕ್ಕೆ ಪ್ರಕರಣ ದಾಖಲು: ಹೆಚ್ಚುವರಿ ಮಾರ್ಷಲ್ಸ್ ನೇಮಿಸಿದ ಬಿಬಿಎಂಪಿ

ಇನ್ನು ಆರ್ ಆರ್ ನಗರ ಚುನಾವಣಾ ಪ್ರಚಾರದ ವೇಳೆ ಕೋವಿಡ್ ನಿಯಮ ಪಾಲನೆಯ ಮೇಲೆ ನಿಗಾವಹಿಸಲು ಹೆಚ್ಚುವರಿ ಮಾರ್ಷಲ್ಸ್ ಗಳನ್ನು ಬಿಬಿಎಂಪಿ ನೇಮಕ ಮಾಡಿದೆ.

ಮಾರ್ಷಲ್ಸ್​​ಗಳ ವಿವರ:

* 9 ವಾರ್ಡ್ ಮಾರ್ಷಲ್ಸ್
* 9 ಮಂದಿ ಇಂದಿರಾ ಕ್ಯಾಂಟೀನ್ ಮಾರ್ಷಲ್ಸ್
* ಮಾಸ್ಕ್ ನಿಯಮ ಪಾಲನೆ, ದಂಡ ಹಾಕಲು 4 ಜನ ಮಾರ್ಷಲ್ಸ್
* 4 ಮಂದಿ ದಾಸರಹಳ್ಳಿ ಮೊಬೈಲ್ ಸ್ವ್ಕ್ಯಾಡ್ ಮಾರ್ಷಲ್ಸ್
* 4 ಮಂದಿ ಆರ್​​ಆರ್ ನಗರ ಮೊಬೈಲ್ ಸ್ಕ್ವಾಡ್ ಮಾರ್ಷಲ್ಸ್
* ಬೇರೆ ವಾರ್ಡ್ ನಿಂದ 8 ಇಂದಿರಾ ಕ್ಯಾಂಟೀನ್ ಮಾರ್ಷಲ್ಸ್ ನ ಮರುನಿಯೋಜನೆ ಮಾಡಲಾಗಿದೆ

ABOUT THE AUTHOR

...view details