ಬೆಂಗಳೂರು: ನಾಯಕತ್ವ ಬದಲಾವಣೆ ವದಂತಿಗೆ ತೆರೆ ಬಿದ್ದ ಬೆನ್ನಲ್ಲೇ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಅವಧೂತ ವಿನಯ್ ಗುರೂಜಿ ಭೇಟಿ ನೀಡಿ, ರಾಜಕೀಯ ಸಂಕಷ್ಟ ಪರಿಹಾರವಾಗುವಂತೆ ಆಶೀರ್ವದಿಸಿ ಮೂರನೇ ಅಲೆ ಕಡೆಗಣಿಸದಂತೆ ಸಲಹೆ ನೀಡಿದರು.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ವಿನಯ್ ಗುರೂಜಿ ಭೇಟಿ ನೀಡಿ ಯಡಿಯೂರಪ್ಪನವರೊಂದಿಗೆ ಮಾತುಕತೆ ನಡೆಸಿದರು. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿ, ಕೊರೊನಾ ಮೂರನೇ ಅಲೆ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಅಕೇಶಿಯ ಬೆಳೆಯಲು ಅವಕಾಶ ಬೇಡ:ಸಿಎಂ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಗುರೂಜಿ, ಮಲೆನಾಡಿನಲ್ಲಿ ಅಂತರ್ಜಲ ಕುಸಿದಿದೆ. ಅಕೇಶಿಯ ಪ್ಲಾಂಟ್ ತೆಗೆದು ಹಣ್ಣಿನ ಗಿಡ ಬೆಳೆಸಿ. ಮೂರನೇ ಅಲೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದೇವೆ ಎಂದರು.
ಸಿಎಂ ಭೇಟಿಯಾದ ಅವಧೂತ ವಿನಯ್ ಗುರೂಜಿ ಅಲ್ಲದೆ, ಕೊಪ್ಪದಿಂದ ಶಿವಮೊಗ್ಗಕ್ಕೆ ತಲುಪಲು ಒಂದೂವರೆ ಗಂಟೆಯಾಗುತ್ತೆ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹಾಗಾಗಿ ಕೊಪ್ಪ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಎಂದು ಮನವಿ ಮಾಡಿದ್ದೇವೆ. ಪ್ರತಿ ತಾಲ್ಲೂಕಿನಲ್ಲಿನ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸುವಂತೆಯೂ ಸಹ ತಿಳಿಸಿದ್ದೇವೆ ಎಂದು ಹೇಳಿದರು.