ಕರ್ನಾಟಕ

karnataka

ETV Bharat / city

ರೆಸಾರ್ಟ್​ ರಾಜಕೀಯದಿಂದ ಗ್ರಾಮಸ್ಥರಿಗೆ ತೊಂದರೆ... ರಸ್ತೆ ತಡೆದಿದ್ದಕ್ಕೆ ಆಕ್ರೋಶ - Devanahalli

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್​​ ​ಶೈರ್ ರೆಸಾರ್ಟ್​ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವುದರಿಂದ ಸೊಣ್ಣೇನಹಳ್ಳಿ ಗ್ರಾಮದ ಜನರು ಈ ರಸ್ತೆಯಲ್ಲಿ ಓಡಾಡದಂತೆ ಪೊಲೀಸರು ಮತ್ತು ರೆಸಾರ್ಟ್ ಸಿಬ್ಬಂದಿ ತಡೆ ಹಿಡಿದಿದ್ದು, ಇದರಿಂದ ಗ್ರಾಮಸ್ಥರು ಐದಾರು ಕಿಲೋ ಮೀಟರ್ ಸುತ್ತಿಕೊಂಡು ತಮ್ಮ ಗ್ರಾಮಕ್ಕೆ ಹೋಗುವಂತಾಗಿದೆ.

ರೆಸಾರ್ಟ್ ರಾಜಕೀಯದಿಂದ ಗ್ರಾಮಸ್ಥರಿಗೆ ತೊಂದರೆ...ರಸ್ತೆ ತಡೆದಿದ್ದಕ್ಕೆ ಆಕ್ರೋಶ

By

Published : Jul 13, 2019, 12:18 PM IST

ಬೆಂಗಳೂರು:ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್​​​​ ಶೈರ್ ರೆಸಾರ್ಟ್​ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವುದರಿಂದ ಸೊಣ್ಣೇನಹಳ್ಳಿ ಗ್ರಾಮದ ಜನರು ಈ ರಸ್ತೆಯಲ್ಲಿ ಓಡಾಡದಂತೆ ಪೊಲೀಸರು ಮತ್ತು ರೆಸಾರ್ಟ್ ಸಿಬ್ಬಂದಿ ತಡೆ ಹಿಡಿದಿದ್ದು, ಇದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ರೆಸಾರ್ಟ್ ರಾಜಕೀಯದಿಂದ ಗ್ರಾಮಸ್ಥರಿಗೆ ತೊಂದರೆ... ರಸ್ತೆ ತಡೆದಿದ್ದಕ್ಕೆ ಆಕ್ರೋಶ

ಜೆಡಿಎಸ್ ಶಾಸಕರಿರುವ ರೆಸಾರ್ಟ್​ನ ದಾರಿಯ‌ ಮೂಲಕವೇ ಸೊಣ್ಣೇನಹಳ್ಳಿ ಗ್ರಾಮದ ಜನರು ಪ್ರತಿ ದಿನ ಓಡಾಡುತ್ತಿದ್ದರು. ಪ್ರೆಸ್ಟೀಜ್ ಗಾಲ್ಫ್​​ ​ಶೈರ್ ರೆಸಾರ್ಟ್ ಮಾಲೀಕರು ಗ್ರಾಮದ ರಸ್ತೆಯನ್ನು ಆಕ್ರಮಿಸಿಕೊಂಡು ರೆಸಾರ್ಟ್​ಗೆ ದಾರಿ ಮಾಡಿಕೊಂಡಿದ್ದರು. ಅದೇ ರಸ್ತೆಯನ್ನು ಸೊಣ್ಣೇನಹಳ್ಳಿ ಗ್ರಾಮದ ಜನರಿಗೂ ಓಡಾಡಲು ಅವಕಾಶ ಮಾಡಿಕೊಟ್ಟಿದ್ದರು.

ಇದೇ ರೆಸಾರ್ಟ್​ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದರಿಂದ ಈ ರಸ್ತೆಯಲ್ಲಿ ಸಾರ್ವಜನಿಕರಿಗೆ ತಡೆ ಹಿಡಿಯಲಾಗಿದೆ. ಈ ಗ್ರಾಮದ ಜನರು ಈ ರಸ್ತೆಯಲ್ಲಿ ಓಡಾಡದಂತೆ ಪೊಲೀಸರು ಮತ್ತು ರೆಸಾರ್ಟ್ ಸಿಬ್ಬಂದಿ ತಡೆ ಹಿಡಿದ್ದಾರೆ. ಇದರಿಂದ ಈ ಗ್ರಾಮದ ಜನರು ಐದಾರು ಕಿಲೋ ಮೀಟರ್ ಸುತ್ತಿಕೊಂಡು ತಮ್ಮ ಗ್ರಾಮಕ್ಕೆ ಹೋಗುವಂತ ಪರಿಸ್ಥಿತಿ ಉಂಟಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

Devanahalli

ABOUT THE AUTHOR

...view details