ಕರ್ನಾಟಕ

karnataka

ETV Bharat / city

ಕೋವಿಡ್​​​ ರೋಗಿಗೆ ಚಿಕಿತ್ಸೆ ನಿರಾಕರಣೆ ಆರೋಪ: ವಿಕ್ರಮ್, ಸಾಗರ್ ಅಪೋಲೊ ಆಸ್ಪತ್ರೆ ಒಪಿಡಿ ಬಂದ್ - ಕೋವಿಡ್​​​ ರೋಗಿಗೆ ಚಿಕಿತ್ಸೆ ನಿರಾಕರಣೆ

ಸರ್ಕಾರ ಶಿಫಾರಸು​​​ ಮಾಡಿದ ಕೊರೊನಾ ರೋಗಿಗಳಿಗೆ ಪ್ರವೇಶ ನಿರಾಕರಿಸಿದ ಕಾರಣ, ಡಿಹೆಚ್​ಒ ಶ್ರೀನಿವಾಸ್ ಗುಳೂರು ಅವರು ವಿಕ್ರಮ್ ಆಸ್ಪತ್ರೆ ಹಾಗೂ ಸಾಗರ್ ಅಪೋಲೊ ಆಸ್ಪತ್ರೆಗಳ ಒಪಿಡಿಯನ್ನು ಬಂದ್​ ಮಾಡಿಸಿದ್ದಾರೆ.

Vikram-Sagar Apollo Hospital OPD Bundh
ಒಪಿಡಿ ಬಂದ್

By

Published : Jul 14, 2020, 7:15 PM IST

ಬೆಂಗಳೂರು: ಸರ್ಕಾರ ಶಿಫಾರಸು​​​ ಮಾಡಿದ ಕೋವಿಡ್ ರೋಗಿಗಳಿಗೆ ಪ್ರವೇಶ ನಿರಾಕರಿಸಿದ ಆರೋಪ ಹಿನ್ನೆಲೆ ವಿಕ್ರಮ್ ಆಸ್ಪತ್ರೆ ಹಾಗೂ ಸಾಗರ್ ಅಪೋಲೊ ಆಸ್ಪತ್ರೆ ಒಪಿಡಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ.

ಸೋಮವಾರ ಡಿಹೆಚ್ಓ ಶ್ರೀನಿವಾಸ್ ಗುಳೂರು ದಿಢೀರ್ ಭೇಟಿ ನೀಡಿ, ಐಎಲ್​​​​ಐ & ಎಸ್​​​​ಎಆರ್​​ಐ ಪ್ರಕರಣಗಳಿಗೆ ಚಿಕಿತ್ಸೆ ನೀಡದಿರುವ ಕುರಿತು ಕಾರಣ, ಉತ್ತರ ನೀಡುವಂತೆ ಎರಡೂ ಆಸ್ಪತ್ರೆಗಳಿಗೆ ನೋಟಿಸ್ ನೀಡಿದ್ದರು‌‌.

ನೋಟಿಸ್​​​​​ಗೆ ಉತ್ತರ ನೀಡದ ಕಾರಣ 48 ಗಂಟೆಗಳ ಕಾಲ ಒಪಿಡಿ ಬಂದ್ ಮಾಡಿದ್ದು, ಸ್ಥಳದಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನು ಮೀರಿ ಆಸ್ಪತ್ರೆ ಕಾನೂನು ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಹೆಹ್​ಒ ಶ್ರೀನಿವಾಸ್ ಮಾಹಿತಿ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿ ಪಡೆದು ಚಿಕಿತ್ಸೆ ನೀಡುವಂತೆ ಹಾಗೂ ಆಸ್ಪತ್ರೆಯಲ್ಲಿ ಶೇ.50% ಹಾಸಿಗೆಗಳನ್ನು ಕಾಯ್ದಿರಿಸುವಂತೆ, ಕಾಯ್ದಿರಿಸಲಾಗಿರುವ ಹಾಸಿಗೆಗಳ ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಸರ್ಕಾರದಿಂದ ಸೂಚಿಸಲ್ಪಟ್ಟ ಸೋಂಕಿತ ರೋಗಿಗಳ ಹಾಗೂ ಚಿಕಿತ್ಸೆಯನ್ನು ನೀಡುತ್ತಿಲ್ಲ ಎಂಬುದು ಕಂಡು ಬಂದಿದೆ ಎಂದರು.

ABOUT THE AUTHOR

...view details