ಬೆಂಗಳೂರು: ಯಕೃತ್ತು ಹಾಗೂ ಎದೆ ನೋವು ಸಮಸ್ಯೆಯಿಂದ ಬಳಲುತ್ತಿದ್ದ ವಿಜಯನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಕೊರೊನಾ ವಾರಿಯರ್‌ಗೆ ಸಿಗದ ಚಿಕಿತ್ಸೆ! ರಾತ್ರಿಯಿಡೀ ಅಲೆದು ಪ್ರಾಣಬಿಟ್ಟ ಹೆಡ್ ಕಾನ್ಸ್‌ಟೇಬಲ್ - ವಿಜಯನಗರ ಪೊಲೀಸ್ ಹೆಡ್ ಕಾನ್ಸಟೆಬಲ್ ಸಾವು
ಸಾಮಾನ್ಯ ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಸಾಮಾನ್ಯ ಯಕೃತ್ತು ಹಾಗೂ ಎದೆನೋವು ಸಮಸ್ಯೆಯಿಂದ ಬಳಲುತ್ತಿದ್ದ ಹೆಡ್‌ಕಾನ್ಸ್‌ಟೇಬಲ್ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಕೊರೊನಾ ವಾರಿಯರ್‌ಗೆ ಸಿಗದ ಚಿಕಿತ್ಸೆ
ವಿಜಯನಗರ ಪೊಲೀಸ್ ಠಾಣಾ ಸಿಬ್ಬಂದಿ ರವಿಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಪೊಲೀಸ್ ಎಂದ ತಕ್ಷಣ ಕೋವಿಡ್ ಇರಬಹುದು ಎಂಬ ಶಂಕೆಯಿಂದ ಹೆದರಿ ಸಿಬ್ಬಂದಿ ಬೆಡ್ ಇಲ್ಲವೆಂದು ಹೇಳಿ ಕಳುಹಿಸಿದ್ದಾರೆ.
ರಾತ್ರಿಪೂರ್ತಿ ಬೆಂಗಳೂರು ಸುತ್ತಿದ ಪೊಲೀಸ್ ಸಿಬ್ಬಂದಿಗೆ ತುರ್ತು ಔಷಧ ಸಿಗದೆ ಮನೆಗೆ ಬಂದಿದ್ದಾರೆ. ಬಳಿಕ ಮುಂಜಾವು ಆಸ್ಪತ್ರೆಗೆ ದಾಖಲಾಗಲು ಅವರು ನಿರ್ಧರಿಸಿದ್ದರು. ಆದರೆ ಹೆಡ್ ಕಾನ್ಸ್‌ಟೇಬಲ್‌ಗೆ ಆರೋಗ್ಯ ಸಮಸ್ಯೆ ಉಲ್ಬಣಿಸಿದೆ. ಪರಿಣಾಮ ಅವರು ಮನೆಯಲ್ಲಿಯೇ ಅಸುನೀಗಿದ್ದಾರೆ.
Last Updated : Jul 3, 2020, 4:20 PM IST