ಬೆಂಗಳೂರು: ಇಂದು ಕೇತು ಗ್ರಸ್ಥ ಸೂರ್ಯಗ್ರಹಣ ಹಿನ್ನೆಲೆ, ಗ್ರಹಣದ ಭೀತಿಯಿಂದ ಬಹುತೇಕ ಸಿಬ್ಬಂದಿ ವಿಧಾನಸೌಧದತ್ತ ಮುಖಮಾಡಿರಲಿಲ್ಲ. ಹೀಗಾಗಿ 12 ತನಕ ವಿಧಾನಸೌಧದ ಬಹುತೇಕ ಎಲ್ಲ ಕಚೇರಿಗಳು ಖಾಲಿಯಾಗಿದ್ದವು.
ವಿಧಾನಸೌಧಕ್ಕೂ ತಟ್ಟಿದ ಗ್ರಹಣ ಎಫೆಕ್ಟ್... ಸಿಬ್ಬಂದಿಗಳಿಲ್ಲದೇ ಕಚೇರಿಗಳು ಖಾಲಿ ಖಾಲಿ!
ಇಂದು ಕೇತು ಗ್ರಸ್ಥ ಸೂರ್ಯಗ್ರಹಣ ಹಿನ್ನೆಲೆ, ಗ್ರಹಣದ ಭೀತಿಯಿಂದ ಬಹುತೇಕ ಸಿಬ್ಬಂದಿ ವಿಧಾನಸೌಧದತ್ತ ಮುಖಮಾಡಿರಲಿಲ್ಲ. ಹೀಗಾಗಿ 12 ತನಕ ವಿಧಾನಸೌಧದ ಬಹುತೇಕ ಎಲ್ಲ ಕಚೇರಿಗಳು ಖಾಲಿಯಾಗಿದ್ದವು.
ವಿಧಾನಸೌಧಕ್ಕೂ ತಟ್ಟಿದ ಗ್ರಹಣ ಎಫೆಕ್ಟ್..ಸಿಬ್ಬಂದಿಗಳಿಲ್ಲದೆ ಕಚೇರಿಗಳು ಖಾಲಿ ಖಾಲಿ!
ಸಾಮಾನ್ಯವಾಗಿ ಬೆಳಗ್ಗೆಯಿಂದಲೇ ಗಿಜಿಗುಡುವ ವಿಧಾನ ಸೌಧ ಕಾರಿಡಾರ್ ಇಂದು ಬಿಕೋ ಎನ್ನುತ್ತಿತ್ತು. ಒಂದೆಡೆ ಸಾರ್ವಜನಿಕರು ಬಂದಿಲ್ಲ. ಇನ್ನೊಂದೆಡೆ ಸಿಬ್ಬಂದಿ, ಅಧಿಕಾರಿಗಳೂ ವಿಧಾನಸೌಧದತ್ತ ಮುಖ ಮಾಡಿಲ್ಲ. ವಿಧಾನಸೌಧ ಹಾಗೂ ವಿಕಾಸಸೌಧದ ಪಾರ್ಕಿಂಗ್ ಪ್ರದೇಶ ಕಾರುಗಳಿಲ್ಲದೇ ಖಾಲಿ ಖಾಲಿಯಾಗಿದ್ದವು. ವಿಧಾನಸೌಧದ ಆವರಣದಲ್ಲಿ ವಾಹನಗಳ ಓಡಾಟವೂ ವಿರಳವಾಗಿತ್ತು.
ಗ್ರಹಣ ಮುಗಿದ ಬಳಿಕ ನಿಧಾನವಾಗಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಶಕ್ತಿಸೌಧದಕ್ಕೆ ಬರಲು ಪ್ರಾರಂಭಿಸಿದರು.