ಬೆಂಗಳೂರು: ನಗರದ ಅಂಧ್ರಳ್ಳಿ ಮುಖ್ಯರಸ್ತೆಯ ಚೇತನ್ ಸರ್ಕಲ್ನ ವಿನಾಯಕ ನಗರದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಶಂಕರ್ ಮಗುವನ್ನು ಎತ್ತಿಕೊಂಡು ಓಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದನ್ನು ಓದಿ:ಮಗುವಿಗೆ ಕಿವಿ ಚುಚ್ಚಿಸುವ ವಿಚಾರದಲ್ಲಾದ ಮನಸ್ತಾಪವೇ ಐವರ ಸಾವಿಗೆ ಕಾರಣವಾಯ್ತಾ?
ಮೊದಲಿಗೆ ಕುಟುಂಬದ 6 ಜನರು ಮೃತಪಟ್ಟಿರುವ ಅನುಮಾನವನ್ನು ತಾತ ಶಂಕರ್ ವ್ಯಕ್ತಪಡಿಸಿದ್ದರು. ಆದರೆ, ನಿತ್ರಾಣವಾಗಿ ಬಿದ್ದಿದ್ದ ಮಗುವನ್ನು ಗಮನಿಸಿದ ಬ್ಯಾಡರಹಳ್ಳಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದ ಹಿನ್ನೆಲೆ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಕಂದನ ಪ್ರಾಣ ಉಳಿದಿದೆ.
ಮೊಮ್ಮಗನನ್ನು ಎತ್ತಿಕೊಂಡು ತಾತ ಓಡುತ್ತಿರುವ ವಿಡಿಯೋ ವೈರಲ್ ಇದನ್ನು ಓದಿ:ಒಂದೇ ಕುಟುಂಬದ ಐವರ ಸಾವು ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ನಿನ್ನೆ ನೇಣಿನಲ್ಲಿ ನೇತಾಡುತ್ತಿದ್ದ ಕುಟುಂಬಸ್ಥರನ್ನು ನೋಡಿ ಶಾಕ್ ಆಗಿದ್ದ ಶಂಕರ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಮಗುವಿನ ಉಸಿರಾಟ ಗಮನಿಸಿದ ಇನ್ಸ್ಪೆಕ್ಟರ್ ರಾಜೀವ್ ಕಂದ ಎಚ್ಚರವಾಗುತ್ತಿದ್ದಂತೆ ತಾತ ಶಂಕರ್ಗೆ ಆರೈಕೆ ಮಾಡಲು ನೀಡಿದ್ದಾರೆ. ಮೊಮ್ಮಗನನ್ನು ಎತ್ತಿಕೊಂಡ ಶಂಕರ್, ಯಾರದ್ರೂ ನೀರ್ ಕೊಡ್ರಪ್ಪ ಎಂದು ಓಡಿದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.