ಬೆಂಗಳೂರು:ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಮಹಿಳೆಯರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ವೊಂದರಲ್ಲಿ ನಡೆದಿದೆ.
ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಮಹಿಳೆಯರ ನಡುವೆ ಮಾರಾಮಾರಿ: ವಿಡಿಯೋ ವೈರಲ್ - ಚಪ್ಪಲಿ ಸ್ಟ್ಯಾಂಡ್ ವಿಚಾರ ಗಲಾಟೆ
ಕುಮಾರಿ ಮನೆ ಮುಂದಿದ್ದ ಚಪ್ಪಲಿ ಸ್ಟ್ಯಾಂಡ್ ಅನ್ನು ಹೂವಿನ ಪಾಟ್ ನಿಂದ ಹೊಡೆದು ವರಲಕ್ಷ್ಮಿ ಡ್ಯಾಮೇಜ್ ಮಾಡಿದ್ದರು. ಇದನ್ನ ಪಕ್ಕದ ಫ್ಲಾಟ್ ನಿವಾಸಿ ಕುಮಾರಿ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ. ಬಳಿಕ ಇಬ್ಬರು ಪರಸ್ಪರ ಕೈ ಕೈ ಮಿಲಾಯಿಸಿ ಕಿತ್ತಾಡಿಕೊಂಡಿದ್ದಾರೆ.
ಜೆಪಿ ನಗರದ ಎಸ್ವಿ ಇನ್ಫ್ರಾ ಅಪಾರ್ಟ್ಮೆಂಟ್ನಲ್ಲಿ ಮಹಿಳೆಯರಿಬ್ಬರ ನಡುವೆ ನಡೆದಿರುವ ಘಟನೆ ಪೊಲೀಸ್ ಠಾಣಾ ಮೆಟ್ಟಿಲೇರಿದ್ದು, ಇಬ್ಬರೂ ಪರಸ್ಪರ ದೂರು ಪ್ರತಿದೂರು ನೀಡಿದ್ದಾರೆ. ಬೇರೆ ಬೇರೆ ಫ್ಲಾಟ್ಗಳಲ್ಲಿ ವಾಸವಿದ್ದ ಕುಮಾರಿ ಹಾಗೂ ವರಲಕ್ಷ್ಮಿ ಎಂಬ ಮಹಿಳೆಯರ ನಡುವೆ ಅಕ್ಟೋಬರ್ 14 ರಂದು ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಗಲಾಟೆ ಶುರುವಾಗಿತ್ತು.
ಕುಮಾರಿ ಮನೆ ಮುಂದಿದ್ದ ಚಪ್ಪಲಿ ಸ್ಟ್ಯಾಂಡ್ ಅನ್ನು ಹೂವಿನ ಫಾಟ್ ನಿಂದ ಹೊಡೆದು ವರಲಕ್ಷ್ಮಿ ಡ್ಯಾಮೇಜ್ ಮಾಡಿದ್ದರು. ಇದನ್ನ ಪಕ್ಕದ ಫ್ಲಾಟ್ ನಿವಾಸಿ ಕುಮಾರಿ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ. ಬಳಿಕ ಇಬ್ಬರು ಪರಸ್ಪರ ಕೈ ಕೈ ಮಿಲಾಯಿಸಿ ಕಿತ್ತಾಡಿದ್ದಾರೆ. ಸದ್ಯ ಒಬ್ಬರ ಮೇಲೊಬ್ಬರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರಿಗೆ ಇವರಿಬ್ಬರ ಜಡೆ ಜಗಳ ತಲೆನೋವಾಗಿ ಪರಿಣಮಿಸಿದೆ.