ಕರ್ನಾಟಕ

karnataka

ETV Bharat / city

ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಉಲ್ಲಂಘಿಸಿ ಸಂಚರಿಸಿದ 318 ವಾಹನಗಳು ಸೀಜ್ - ಬೆಂಗಳೂರು ಪೊಲೀಸರಿಂದ ಕಾರ್ಯಾಚರಣೆ

ಬೆಂಗಳೂರು ನಗರದಲ್ಲಿ ನೈಟ್ ಕರ್ಫ್ಯೂ ಉಲ್ಲಂಘನೆ ಮಾಡಿದ ಆರೋಪದಲ್ಲಿ ಸುಮಾರು 318 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

vehicles-seized-in-benglauru-night-curfew
ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಉಲ್ಲಂಘಿಸಿ ಸಂಚರಿಸಿದ 318 ವಾಹನಗಳು ಸೀಜ್

By

Published : Jan 1, 2022, 11:52 PM IST

ಬೆಂಗಳೂರು:ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಸಂಚರಿಸಿದ ಒಟ್ಟು 318 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಶುಕ್ರವಾರ ಸಂಜೆ 6ರಿಂದಲೇ ಆರಂಭವಾದ ನೈಟ್ ಕರ್ಫ್ಯೂ ಉಲ್ಲಂಘಿಸಿದ 26 ದ್ವಿಚಕ್ರ ವಾಹನಗಳು, ಐದು ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಕೋವಿಡ್ ನೈಟ್ ಕರ್ಫ್ಯೂ ಜಾರಿಯಾಗಿನಿಂದ ಈವೆರೆಗೂ ಈಶಾನ್ಯ ಪೊಲೀಸ್ ವಿಭಾಗದಲ್ಲಿ 57, ಪಶ್ಚಿಮ ವಿಭಾಗದಲ್ಲಿ 113, ಉತ್ತರ ವಿಭಾಗದಲ್ಲಿ 12, ಕೇಂದ್ರ ವಿಭಾಗದಲ್ಲಿ 136 ವಾಹನಗಳು ಸೇರಿದಂತೆ ಒಟ್ಟು 318 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ 280 ದ್ವಿಚಕ್ರ ವಾಹನಗಳು, 10 ಆಟೋಗಳು, 28 ಕಾರುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಮದ್ಯಪ್ರಿಯರಿಗೆ ಕಾಡದ ನೈಟ್ ಕರ್ಫ್ಯೂ : ಕಳೆದ ವರ್ಷಕ್ಕಿಂತಲೂ ಅಧಿಕ ಮಾರಾಟ

ABOUT THE AUTHOR

...view details