ಕರ್ನಾಟಕ

karnataka

ETV Bharat / city

ಮೋಜು-ಮಸ್ತಿಗಾಗಿ ಬೈಕ್​​ ಕಳ್ಳತನ: ಮೂವರ ಬಂಧನ - ಮೋಜು-ಮಸ್ತಿಗಾಗಿ ಬೈಕ್​​ ಕಳ್ಳತನ

ಮೋಜು-ಮಸ್ತಿಗಾಗಿ ಬೈಕ್​ ಕಳ್ಳತನ ಮಾಡ್ತಿದ್ದ ಮೂವರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Vehicle theft arrested in Bengaluru
Vehicle theft arrested in Bengaluru

By

Published : Feb 11, 2022, 12:10 AM IST

ಬೆಂಗಳೂರು: ಮೋಜು-ಮಸ್ತಿಗಾಗಿ ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿ-ಚಕ್ರ ವಾಹನಗಳನ್ನು ಕಳ್ಳತನ ಮಾಡ್ತಿದ್ದ ಮೂವರನ್ನ ವಿಶ್ವೇಶ್ವರಪುರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನಕನಗರದ ಸದಾಂ ಹುಸೇನ್(28), ಹೆಗಡೆನಗರದ ಸೈಯದ್ ರೋಷನ್(23), ಸಾದೀಕ್ ಪಾಷಾ (20) ಬಂಧಿತರು. ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ 14 ದ್ವಿ-ಚಕ್ರ ವಾಹನ ಜಪ್ತಿ ಮಾಡಲಾಗಿದೆ. ಅವರ ಬಂಧನದಿಂದ ವಿ.ವಿ.ಪುರ, ಕುಮಾರಸ್ವಾಮಿ ಲೇಔಟ್, ಪುಟ್ಟೇನಹಳ್ಳಿ ಜೆ.ಪಿ.ನಗರ, ಕಾಟನ್ ಪೇಟೆ, ಪುಲಿಕೇಶಿನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 14 ದ್ವಿ-ಚಕ್ರವಾಹನ ಕಳ್ಳತನ ಪ್ರಕರಣ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಸದ್ದಾಂ ಹುಸೇನ್ ವೃತ್ತಿಪರ ಕಳ್ಳತನಾಗಿದ್ದು, ಈ ಹಿಂದೆ ಹಲವು ಬಾರಿ ವಾಹನ ಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿದ್ದನು. ಜಾಮೀನಿನ ಮೇಲೆ ಹೊರಬಂದ ಬಳಿಕವೂ ಈ ಕೃತ್ಯ ಮುಂದುವರಿಸಿದ್ದನು. ನ್ಯಾಯಾಲಯಕ್ಕೆ ಹಾಜರಾಗುವ ಬದಲು ತಲೆಮರೆಸಿಕೊಂಡು ಓಡಾಡುತ್ತಿದ್ದನು. ಫೆಬ್ರವರಿ 5ರಂದು ಆರೋಪಿ ದ್ವಿ-ಚಕ್ರ ವಾಹನ ಕಳ್ಳತನ ಮಾಡಿಕೊಂಡು ಸಜ್ಜನ್​ ರಾವ್​​ ಸರ್ಕಲ್​​ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ತನ್ನ ಸಹಚರರಾದ ಸೈಯದ್ ರೋಷನ್ ಮತ್ತು ಸಾದಿಕ್ ಪಾಷಾ ಎಂಬುವವರ ಹೆಸರು ಬಾಯಿಬಿಟ್ಟಿದ್ದನು. ಹೀಗಾಗಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ:ಮಂಗಳೂರು: ಮನೆಯಲ್ಲಿದ್ದ ಇಬ್ಬರು ಸಹೋದರಿಯರು ನಾಪತ್ತೆ; ದೂರು ದಾಖಲು

ಮೋಜು-ಮಸ್ತಿಗಾಗಿ ಕೃತ್ಯ:ಸದಾಂ ಹುಸೇನ್ ಈ ಹಿಂದೆ ರಸ್ತೆ ಬದಿಯಲ್ಲಿ ನೈಟ್ ಪ್ಯಾಂಟ್ ಮಾರಾಟ ಮಾಡುತ್ತಿದ್ದನು. ಅದರಿಂದ ಬರುವ ಹಣ ದುಶ್ಚಟಗಳಿಗೆ ಸಾಲದ ಕಾರಣ ವಾಹನ ಕಳ್ಳತನ ಕೃತ್ಯಕ್ಕೆ ಇಳಿದಿದ್ದಾನೆ. ಸೈಯದ್ ರೋಷನ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಐದಾರು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಮತ್ತೆ ಕೃತ್ಯವೆಸಗುತ್ತಿದ್ದನು. ಸಾದಿಕ್​ ಪಾಷಾ ಸೂಚನೆ ಮೇರೆಗೆ ಇಬ್ಬರು ವಾಹನ ಕಳ್ಳತನ ಮಾಡುತ್ತಿದ್ದರು. ನಂತರ ಮೂವರು ಸೇರಿ ಕಡಿಮೆ ಮೊತ್ತಕ್ಕೆ ವಾಹನಗಳ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details