ಬೆಂಗಳೂರು: ದಾಖಲೆಗಳ ಪರಿಶೀಲನೆಗಾಗಿ ವಾಹನಗಳನ್ನು ತಡೆದು ನಿಲ್ಲಿಸದಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತೊಮ್ಮೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಆದೇಶ ಅನ್ವಯ. ಡ್ರಿಂಕ್ ಆ್ಯಂಡ್ ಡ್ರೈವ್ ಮಾಡುವವರನ್ನು ಮಾತ್ರ ಪರಿಶೀಲನೆ ಮಾಡಿ. ಕಣ್ಣಿಗೆ ಕಾಣುವಂತಹ ಅಪರಾಧ ಕಂಡುಬಂದರೆ ಮಾತ್ರ ವಾಹನ ನಿಲ್ಲಿಸಬೇಕು. ಆದೇಶ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ದಾಖಲೆಗಳ ಪರಿಶೀಲನೆಗಾಗಿ ಸುಮ್ಮನೆ ವಾಹನ ನಿಲ್ಲಿಸುವಂತಿಲ್ಲ: ಮತ್ತೊಮ್ಮೆ ಡಿಜಿ ಸೂಚನೆ - ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ
ದಾಖಲಾತಿಗಳ ಪರಿಶೀಲನೆಗೆಂದು ಸುಖಾಸುಮ್ಮನೆ ವಾಹನಗಳನ್ನು ತಡೆಯದಂತೆ ಡಿಜಿ, ಐಜಿಪಿ ಪ್ರವೀಣ್ ಸೂದ್ ಮತ್ತೊಮ್ಮೆ ಪೊಲೀಸರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಪ್ರವೀಣ್ ಸೂದ್