ಕರ್ನಾಟಕ

karnataka

ETV Bharat / city

ಮಳೆ ಅವಾಂತರ: ಗಗನಕ್ಕೇರಿದೆ ತರಕಾರಿ ದರ, ಗ್ರಾಹಕರು ಕಂಗಾಲು - ಬೆಂಗಳೂರಿನಲ್ಲಿ ತರಕಾರಿ ದರ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ..

Vegetables Prices
ತರಕಾರಿ ದರ

By

Published : May 24, 2022, 9:58 AM IST

ಬೆಂಗಳೂರು: ರಾಜ್ಯದಲ್ಲಿ ಸುರಿದ ಆಕಾಲಿಕ ಮಳೆಯಿಂದಾಗಿ ಕಳೆದ ಕೆಲವು ದಿನಗಳಿಂದ ತರಕಾರಿಗಳ ಬೆಲೆ ಹೆಚ್ಚಾಗಿದೆ. ಹೀಗಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಸಿಲಿಕಾನ್ ಸಿಟಿಯಲ್ಲಿ ಒಂದು ತಿಂಗಳ ಹಿಂದೆ ಪ್ರತಿ ಕೆಜಿಗೆ 10 ರಿಂದ 12 ರೂ. ಇದ್ದ ಟೊಮೆಟೋ ಈಗ 100 ರೂ ದಾಟಿದೆ. ಉಳಿದ ತರಕಾರಿಗಳ ಬೆಲೆಯೂ ಹಂತ ಹಂತವಾಗಿ ಏರಿಕೆಯಾಗುತ್ತಿವೆ.

ಬೆಂಗಳೂರಿನಲ್ಲಿ ತರಕಾರಿ ದರ: ನಗರದಲ್ಲಿ ಬೀನ್ಸ್ 100 ರೂ, ಹೀರೇಕಾಯಿ 70 ರೂ.ಗೆ ಮಾರಾಟವಾಗುತ್ತಿದೆ. ಮೂಲಂಗಿ, ಬೀಟ್‌ರೂಟ್, ನವಿಲುಕೋಸು ಹೊರತುಪಡಿಸಿ ಉಳಿದೆಲ್ಲಾ ತರಕಾರಿ ಬೆಲೆ ತುಟ್ಟಿಯಾಗಿದೆ. ಹುರಳಿ ಕಾಯಿ- 114(ಏರಿಕೆ), ಬದನೆಕಾಯಿ (ಬಿಳಿ) 48, ಬದನೆ ಕಾಯಿ (ಗುಂಡು) 40, ಬೀಟ್‍ರೂಟ್-35, ಹಾಗಲಕಾಯಿ-54, ಸೌತೆಕಾಯಿ- 47(ಏರಿಕೆ), ದಪ್ಪ ಮೆಣಸಿನಕಾಯಿ- 72, ಹಸಿ ಮೆಣಸಿನಕಾಯಿ-54 (ಇಳಿಕೆ), ತೆಂಗಿನಕಾಯಿ ದಪ್ಪ- 35, ನುಗ್ಗೇಕಾಯಿ-123(ಇಳಿಕೆ), ಈರುಳ್ಳಿ ಮಧ್ಯಮ-20, ಸಾಂಬಾರ್ ಈರುಳ್ಳಿ- 44, ಬೆಳ್ಳುಳ್ಳಿ-96, ಆಲೂಗಡ್ಡೆ-37, ಮೂಲಂಗಿ-36, ನವಿಲು ಕೋಸು- 56 (ಏರಿಕೆ), ಟೊಮೆಟೋ 110 ರೂ.

ಸೊಪ್ಪಿನ ದರಗಳಲ್ಲಿ ಏರಿಕೆ:ಸೊಪ್ಪಿನ ಬೆಲೆಯೂ ದುಬಾರಿ. ಪುದೀನಾ ಚಿಕ್ಕ ಕಟ್ಟಿಗೆ 15 ರಿಂದ 20 ರೂ.ಗೆ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಕೊತ್ತಂಬರಿ ಸೊಪ್ಪು- 99, ಕರಿಬೇವು- 64, ನಿಂಬೆ ಹಣ್ಣು-190, ಪಾಲಾಕ್ ಸೊಪ್ಪು- 87, ಮೆಂತೆ ಸೊಪ್ಪು- 160 (ಇಳಿಕೆ), ಸಬ್ಬಸಿಗೆ ಸೊಪ್ಪು-194, ಬಸಳೆ ಸೊಪ್ಪು- 38 ರೂ.

ಶಿವಮೊಗ್ಗ ತರಕಾರಿ ದರ:ಮೆಣಸಿನ ಕಾಯಿ-26 ರೂ, M.Z ಬಿನ್ಸ್- 150, ರಿಂಗ್ ಬಿನ್ಸ್-150, ಎಲೆಕೋಸು ಚೀಲಕ್ಕೆ-20, ಬೀಟ್ ರೂಟ್-20, ಹೀರೆಕಾಯಿ-30, ಬೆಂಡೆಕಾಯಿ-30, ಹಾಗಲಕಾಯಿ-30, ಎಳೆ ಸೌತೆ-26, ಬಣ್ಣದ ಸೌತೆ-16,ಜವಳಿಕಾಯಿ-30, ತೊಂಡೆಕಾಯಿ-60, ನವಿಲುಕೋಸು-40, ಮೂಲಂಗಿ-30, ದಪ್ಪಮೆಣಸು-60,ಕ್ಯಾರೇಟ್-40, ನುಗ್ಗೆಕಾಯಿ-40, ಹೂ ಕೋಸು-500 (ಚೀಲಕ್ಕೆ), ಟೊಮೆಟೋ-72, ನಿಂಬೆ ಹಣ್ಣು 100ಕ್ಕೆ 300ರಿಂದ500, ಈರುಳ್ಳಿ-12ರಿಂದ 16, ಆಲೂಗೆಡ್ಡೆ-24, ಬೆಳ್ಳುಳ್ಳಿ-30ರಿಂದ-60, ಸೀಮೆ ಬದನೆಕಾಯಿ-35, ಬದನೆಕಾಯಿ-30,ಕುಂಬಳ ಕಾಯಿ-16, ಹಸಿ ಶುಂಠಿ-24, ಮಾವಿನ ಕಾಯಿ-30, ಕೊತ್ತಂಬರಿ ಸೊಪ್ಪು 100ಕ್ಕೆ- 320, ಸಬ್ಬಸಿಗೆ ಸೊಪ್ಪು100ಕ್ಕೆ -260, ಮೆಂತೆ ಸೊಪ್ಪು100ಕ್ಕೆ-300, ಪಾಲಕ್ ಸೊಪ್ಪು-100 ಕ್ಕೆ 200, ಸೊಪ್ಪು100ಕ್ಕೆ-200, ಪುದೀನಾ ಸೊಪ್ಪು100ಕ್ಕೆ- 200 ರೂ.

ಇದನ್ನೂ ಓದಿ:ಅಕಾಲಿಕ ಮಳೆ: ದುಬಾರಿಯಾಗುತ್ತಿದೆ ತರಕಾರಿ; ಹೀಗಿದೆ ಇಂದಿನ ದರ..

ABOUT THE AUTHOR

...view details